Advertisement
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಿ.3 ರಂದು ಆರಂಭಗೊಂಡಿದ್ದು,ಡಿ. 8 ರಂದು ಧ್ವಜಾರೋಹಣದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಡಿ. 9ರಂದು ಮುಂಜಾನೆ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಮಹಾಪೂಜೆ,ಬಲಿ, ಷಷ್ಠಿ ಮಹೋತ್ಸವದ ರಥೋತ್ಸವ ನಡೆಯಿತು.
ಕೋವಿಡ್ ಸುರಕ್ಷಾ ಮುನ್ನೆಚ್ಚರಿಕೆಯನ್ನು ಪಾಲಿಸಿಕೊಂಡು ಮುಂಜಾನೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ಸುಮಾರು 35 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಮಧ್ಯಾಹ್ನ ಪಲ್ಲಪೂಜೆ ನಡೆದು ಮಹಾ ಅನ್ನ ಸಂತರ್ಪಣೆಯಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ, ಶ್ರೀನಿವಾಸ ಭಟ್, ಕುಕ್ಕೆಹಳ್ಳಿ ದೊಡ್ಡಬೀಡು ಸುಧಾಕರ ಹೆಗ್ಡೆ,ಶಿರ್ವ ಕೋಡು ಜಯಪ್ರಕಾಶ್ ಹೆಗ್ಡೆ, ಶಿರ್ವ ಕೋಡು ದಿನೇಶ್ ಹೆಗ್ಡೆ,ಶ್ರೀನಾಥ ಹೆಗ್ಡೆ ಪಡುಬಿದ್ರಿ,ಡಾ| ಅನೂಪ್ ಹೆಗ್ಡೆ, ಪ್ರಶಾಂತ್ ಶೆಟ್ಟಿ ಸೂಡ,ರಿತೇಶ್ ಶೆಟ್ಟಿ,ಎಸ್.ಕೆ.ಸಾಲಿಯಾನ್ ಬೆಳ್ಮಣ್, ಹೇಮನಾಥ ಶೆಟ್ಟಿ,,ಪಾಂಡುರಂಗ ಶೆಟ್ಟಿ ಬಾರ್ಕೂರು, ಶಂಕರ ಕುಂದರ್ ಸೂಡ,ಪ್ರಕಾಶ್ ಶೆಟ್ಟಿ ಶಿರ್ವ, ಭಾಸ್ಕರ ಆಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Related Articles
Advertisement