Advertisement

7 ಲಕ್ಷ ಮಂದಿಗೆ ಸೋನು ನೆರವು; ಟ್ರೋಲ್‌ ಮಂದಿಗೆ ಬಾಲಿವುಡ್‌ ನಟ ತಿರುಗೇಟು

01:03 AM Sep 23, 2020 | mahesh |

ಮುಂಬಯಿ: ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರಿಗೆ, ಬಡವರಿಗೆ ನೆರವಿನ ಹಸ್ತಚಾಚಿದ್ದ ಬಾಲಿವುಡ್‌ ನಟ ಸೋನ್‌ ಸೂದ್‌ ಟ್ರೋಲ್‌ ಮಂದಿಗೆ ತಿರುಗೇಟು ನೀಡಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ತಾವು 7 ಲಕ್ಷಕ್ಕೂ ಅಧಿಕ ಮಂದಿಗೆ ನೆರವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Advertisement

“ನಾನು ಏನನ್ನೂ ಮಾಡಿ ಲ್ಲ ಎಂದು ಹೇಳುವವರಿಗೆ ಉತ್ತರಿಸಲು ನನ್ನ ಬಳಿ ಇರುವ 7,03,246 ಮಂದಿ ಕುರಿತಾದ ಅಂಕಿಅಂಶಗಳೇ ಸಾಕು. ನಾನು ಸಹಾಯ ಮಾಡಿದ ಎಲ್ಲರ ವಿಳಾಸ, ಫೋನ್‌ ನಂಬರ್‌, ಆಧಾರ್‌ ಕಾರ್ಡ್‌ ಸಂಖ್ಯೆಗಳು ನನ್ನ ಬಳಿ ಇವೆ. ವಿದೇಶದಿಂದ ಸ್ವದೇಶಕ್ಕೆ ಮರಳಲು ಹಲವು ವಿದ್ಯಾರ್ಥಿಗಳಿಗೆ ನೆರವಾಗಿದ್ದೆ. ಅವರ ಸ್ವವಿವರಗಳನ್ನೂ ಇಟ್ಟುಕೊಂಡಿದ್ದೇನೆ. ಈ ಡೇಟಾಗಳ ಮೂಲಕ ನಾನೇನೂ ಸಮರ್ಥನೆ ನೀಡಲು ಬಯಸುತ್ತಿಲ್ಲ’ ಎಂದು ಹೇಳಿದ್ದಾರೆ.

ರಾಜಕೀಯ ಆಕಾಂಕ್ಷೆ ಇಲ್ಲ
“ನನ್ನನ್ನು ವಿನಾಕಾರಣ ಟ್ರೋಲ್‌ ಮಾಡುವ ಬದಲು, ಮನೆಯಿಂದ ಹೊರಗೆ ಬಂದು ಬಡ ವರಿಗೆ ಸಹಾಯ ಮಾಡಿ’ ಎಂಬ ಸಲಹೆಯನ್ನೂ ಟೀಕಾಕಾರರಿಗೆ ಕೊಟ್ಟಿದ್ದಾರೆ. ರಾಜಕೀಯಕ್ಕೆ ಬರುವ ಯಾವುದೇ ಆಕಾಂಕ್ಷೆಗಳೂ ನನಗೆ ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಕೋಟಿ ಕಾರ್ಮಿಕರು ತವರಿಗೆ
ಲಾಕ್‌ಡೌನ್‌ ಸಂದರ್ಭದಲ್ಲಿ, ಅಂದರೆ ಮಾರ್ಚ್‌ ಹಾಗೂ ಜೂನ್‌ ತಿಂಗಳ ನಡುವೆ 1 ಕೋಟಿಗೂ ಅಧಿಕ ವಲಸೆ ಕಾರ್ಮಿಕರು ವಾಹನ ಹಾಗೂ ಕಾಲ್ನಡಿಗೆಯಲ್ಲಿ ತಮ್ಮ ತವರು ರಾಜ್ಯಗಳಿಗೆ ತೆರಳಿದ್ದಾರೆ! ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಹಾಯಕ ಸಚಿವ ವಿ.ಕೆ.ಸಿಂಗ್‌ ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ. ಮಾರ್ಚ್‌-ಜೂನ್‌ ತಿಂಗಳ ವೇಳೆಯಲ್ಲೇ ದೇಶದಲ್ಲಿ 81,385 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 29 ಸಾವಿರ ಜನ ಮೃತಪಟ್ಟಿದ್ದಾರೆ ಎಂಬ ಅಂಶವೂ ಈ ಲಿಖೀತ ಮಾಹಿತಿಯಲ್ಲಿ ಇದೆ. ಅಪಘಾತದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಸಂಖ್ಯೆಯನ್ನು ಇದು ಒಳಗೊಂ ಡಿದ್ದು, ಪ್ರತ್ಯೇಕವಾಗಿ ದಾಖಲಿಸಲಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next