Advertisement

ಪ್ರಾಯೋಜಿತ: ಮಗನ ಬೋನ್ ಮ್ಯಾರೋ ಕಸಿ ಚಿಕಿತ್ಸೆ; ಧನ ಸಹಾಯಕ್ಕೆ ದಂಪತಿ ಮನವಿ

04:00 PM Dec 22, 2020 | Nagendra Trasi |

ನನ್ನ 9 ವರ್ಷದ ಮಗ ನಕುಲ್‌ನ ಪಕ್ಕದಲ್ಲಿ ಕೂತು, ಅವನಿಗೆ ಊಟ ಮಾಡಿಸುತ್ತಿರುವಾಗ, ಹೀಗೆ ನಾವು ಜೊತೆಯಲ್ಲಿ ಕೂತು ಊಟ ಮಾಡುವುದು ಇದೇ ಕೊನೆಯೇನೋ ಎಂದು ನನಗೆ ಭಯವಾಗುತ್ತದೆ. ಕಳೆದ ಕೆಲವು ತಿಂಗಳು ಅವನಿಗೆ ಬಹಳ ಕಷ್ಟಕರವಾಗಿತ್ತು ಹಾಗೂ ಕೆಲವೇ ದಿನಗಳಲ್ಲಿ ಅವನು ತನ್ನ ದುರ್ದೆಸೆಗೆ ಶರಣಾಗಬೇಕಾಯಿತು.

Advertisement

ಅವನು ಸರಿ ಹೋಗುತ್ತಾನೆ, ದೇವರು ಅವನನ್ನು ನೋಡಿಕೊಳ್ಳುತ್ತಾನೆ ಎಂದು ನನಗೆ ನಾನೇ ಹೇಳಿಕೊಳ್ಳುವ ಪ್ರಯತ್ನ ಮಾಡಿದರೂ ಸಹ, ಇದು ನಿಜವಲ್ಲ ಎಂದು ನನ್ನ ಅಂತರಾತ್ಮಕ್ಕೆ ಗೊತ್ತು. ಸಾಯುತ್ತಿರುವ ನನ್ನ ಮಗ ಉಳಿಯಬೇಕೆಂದರೆ ಈಗ ಏನಾದರೊಂದು ಚಮತ್ಕಾರವೇ ಆಗಬೇಕು. ಅವನನ್ನು ಕ್ಯಾನ್ಸರಿನಿಂದ ಒಂದೇ ಸಲಕ್ಕೆ ಹೊರತರುವಂತಹ ಚಮತ್ಕಾರ.

ನವೆಂಬರ್ 2015

“ನಿಮ್ಮ ಮಗ metastatic high-risk neuroblastoma ದಿಂದ ಬಳಲುತ್ತಿದ್ದಾನೆ. ಇದು ಒಂದು ರೀತಿಯ ಕ್ಯಾನ್ಸರ್ ಹಾಗೂ ಇದರಿಂದ ಅವನ ದೇಹದಲ್ಲಿ ಅನೇಕ ಕ್ಯಾನ್ಸರ್ ಗಡ್ಡೆಗಳು ಬೆಳೆದಿವೆ. ನಾವು ಅವನಿಗೆ ಕೀಮೋಥೆರಪಿ ಕೊಡಲು ಶುರು ಮಾಡಬೇಕಾಗುವುದು.” ಶಾಶ್ವತವಾಗಿ ನನ್ನ ಜೀವನವನ್ನೇ ಬದಲಿಸಿಬಿಟ್ಟ ಮಾತುಗಳಿವು. ನಾನು ಸಾವಿರ ಸಾವಿರ ವರ್ಷಗಳಲ್ಲೂ, ನನ್ನ ಮಗ ಇಂತಹ ಮಾರಣಾಂತಿಕ ಕಾಯಿಲೆಗೆ ತುತ್ತಾಗಬಹುದು ಎಂದೆಣಿಸಿರಲಿಲ್ಲ.

ಕೆಲವು ದಿನಗಳ ಹಿಂದೆ ನನ್ನ ಮಗನಿಗೆ ಹುಷಾರು ತಪ್ಪಿತು, ಅವನ ಕತ್ತಿನಲ್ಲಿ ದೊಡ್ಡ ಬಾವು ಕಾಣಿಸಿಕೊಂಡಿತು, ಆಗ ನಾನು ಅವನಿಗೆ ಕ್ಯಾನ್ಸರ್ ಆಗಿರಬಹುದು ಎಂದು ಯೋಚನೆಯೇ ಮಾಡಿರಲಿಲ್ಲ.

Advertisement

ಹಾಗಂದುಕೊಳ್ಳಲು ಹೇಗಾದರೂ ಸಾಧ್ಯ? ನಾನು ಅವನನ್ನು ಬಹಳ ಕಾಳಜಿಯಿಂದ ನೋಡಿಕೊಂಡಿದ್ದೇನೆ ಮತ್ತು ಅವನ ಎಲ್ಲ ಅಗತ್ಯಗಳನ್ನೂ ಪೂರೈಸುವ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಅವನು ತನ್ನ ಪ್ರಾಣಕ್ಕಾಗಿ ಹೋರಾಡುತ್ತಿದ್ದಾನೆ ಎಂಬುದನ್ನು ತಿಳಿದು ನನಗೆ ಮುಖಕ್ಕೆ ಹೊಡೆದಂತಾಗಿದೆ.
ಆದರೆ ನನಗಾದ ಆಘಾತ ಇದೊಂದೇ ಅಲ್ಲ. ನನ್ನ ಮಗನ ಕೀಮೋಥೆರಪಿ ಚಿಕಿತ್ಸೆಗೆ ಲಕ್ಷಾನುಗಟ್ಟಲೆ ದುಡ್ಡು ತಗುಲುತ್ತದೆ ಎಂಬುದು ಗೊತ್ತಾದಾಗ ನನಗೆ ಭೂಮಿಯೇ ಬಾಯಿ ಬಿಟ್ಟಂತಾಯಿತು.

ಬಡ ಕುಟುಂಬದ ಹಿನ್ನೆಲೆಯಿಂದ ಬರುವ ನನ್ನ ಗಂಡ  ಒಬ್ಬ ಆಟೋ ಚಾಲಕ  ನಮ್ಮ ಮನೆಯ ಏಕಮಾತ್ರ ದುಡಿಮೆಕಾರನಾಗಿದ್ದು, ನಮಗೆ ನಿತ್ಯದ ಅಗತ್ಯಗಳನ್ನು ಪೂರೈಸುವುದೇ ಕಷ್ಟ.

ಆದರೆ ನಾವು ನಿಸ್ಸಹಾಯಕರು ಎನ್ನುವ ಒಂದೇ ಕಾರಣಕ್ಕೆ ನನಗೆ ನನ್ನ ಮಗನನ್ನು ಕಳೆದುಕೊಳ್ಳಲು ಸಾಧ್ಯವಿರಲಿಲ್ಲ. ಅದಕ್ಕಾಗಿ, ನನ್ನ ಬಳಿಯಿದ್ದ ಪ್ರತಿಯೊಂದು ಬೆಲೆಬಾಳುವ ವಸ್ತುವನ್ನೂ ನಾನು ಮಾರಿದೆ ಹಾಗೂ ನಕುಲ್‌ನ ಚಿಕಿತ್ಸೆಗಾಗಿ ಅನೇಕ ಹೆಚ್ಚಿನ ಬಡ್ಡಿಯ ಸಾಲಗಳನ್ನು ತೆಗೆದುಕೊಂಡೆ.

ದೇವರ ದಯೆಯಿಂದ, ಹಣ ಸೇರಿಸಲು ವಾರಾನುಗಟ್ಟಲೆ ಕಷ್ಟಪಟ್ಟರೂ, ನಾನು ಮತ್ತು ನನ್ನ ಗಂಡ ಕೊನೆಗೂ ಹೇಗೋ ದುಡ್ಡು ಹೊಂದಿಸಿ ನಕುಲ್‌ಗೆ ಕೀಮೋಥೆರಪಿ ಕೊಡಿಸಿದೆವು.

ಕೆಲವೇ ತಿಂಗಳ ಒಳಗೆ ನನ್ನ ನಕುಲ್ ಸ್ವಲ್ಪ ಸುಧಾರಿಸಿಕೊಂಡ ಮತ್ತು ಆ ಕ್ಷಣ ನನಗೆ ಬಹಳ ನಿರಾಳವೆನಿಸಿತು. ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಿದೆ, ಅವನು ನನ್ನ ಮಗನನ್ನು ಕಷ್ಟದಿಂದ ಪಾರು ಮಾಡಿಯೇಬಿಟ್ಟ ಎಂದುಕೊಂಡೆ. ಆದರೆ ದುರದೃಷ್ಟವಶಾತ್, ಇದು ಕೇವಲ ಪ್ರಾರಂಭ ಎಂದು ನನಗೆ ತಿಳಿದಿರಲಿಲ್ಲ. ಈ ದಿನ
ಕೆಲವು ತಿಂಗಳ ಹಿಂದೆ, ನನ್ನ ಮಗನ ಕ್ಯಾನ್ಸರ್ ಮರುಕಳಿಸಿತು ಮತ್ತು ಈ ಬಾರಿ ಅದು ಇನ್ನೂ ಮಾರಕ ರೂಪವನ್ನು ಪಡೆದುಕೊಂಡಿದೆ. ಮೊದಲು 2015 ರಲ್ಲಿ ಅವನ ಕಾಯಿಲೆ ಪತ್ತೆಯಾದಾಗ, ಅವನಿಗೆ ಬರೀ ಕತ್ತಿನಲ್ಲಿ ಬಾವು ಕಾಣಿಸಿಕೊಂಡಿತ್ತು ಹಾಗೂ ಜ್ವರ ಬಂದಿತ್ತು.

ಆದರೆ ಈ ಸಲ, ರೋಗಲಕ್ಷಣಗಳು ಇನ್ನೂ ಭೀಕರವಾಗಿವೆ. ಒಂಭತ್ತು ವರ್ಷದ, ನನ್ನ ನಕುಲ್‌ಗೆ ಈಗ ಒಂದು ಹೆಜ್ಜೆಯನ್ನೂ ಮುಂದಿಡಲು ಆಗುತ್ತಿಲ್ಲ. ಕ್ಯಾನ್ಸರ್‌ನಿಂದಾಗಿ ಅವನಿಗೆ ಈಗ ನಡೆಯಲೇ ಆಗುತ್ತಿಲ್ಲ. ಅವನ ದೇಹದಲ್ಲಿರುವ ಕ್ಯಾನ್ಸರ್ ಗಡ್ಡೆಗಳು ಅವನನ್ನು ನಿಸ್ಸಹಾಯಕನನ್ನಾಗಿ ಮಾಡಿಬಿಟ್ಟಿವೆ.

ಅವನನ್ನು ಕ್ಯಾನ್ಸರ್‌ನಿಂದ ಗುಣಪಡಿಸಲು ಅವನಿಗೆ ರೇಡಿಯೋಥೆರಪಿ ಜೊತೆಗೆ bone marrow transplant ಆಗಬೇಕಿದೆ ಎಂದು ಡಾಕ್ಟರ್ ಹೇಳುತ್ತಿದ್ದಾರೆ ಹಾಗೂ ಅದಕ್ಕೆ 30 ಲಕ್ಷ ಖರ್ಚಾಗಬಹುದು ಎಂದಿದ್ದಾರೆ.

ಇವತ್ತಿಗೆ ನಾವಿನ್ನೂ, ಐದು ವರ್ಷಗಳ ಹಿಂದೆ ನಕುಲ್‌ನ ಕೀಮೊಥೆರಪಿಗೆ ತೆಡೆದುಕೊಂಡಿದ್ದ ಸಾಲವನ್ನು ತೀರಿಸುತ್ತಿದ್ದೇವೆ. ಹೀಗಿರುವಾಗ ಇನ್ನಷ್ಟು ಹಣವನ್ನು ನಾನು ಎಲ್ಲಿಂದ ತರುವುದು? ಈ ತಿರುವಿನಲ್ಲಿ ಸಿಲುಕಿರುವ ನನಗೆ, ನನ್ನ ಮಗನ ಜೀವವನ್ನು ಉಳಿಸುವ ಎಲ್ಲಾ ಬಾಗಿಲುಗಳು ಮುಚ್ಚಿದಂತೆ ಭಾಸವಾಗುತ್ತದೆ. ನನ್ನ ಪತಿ ನಮ್ಮ ನಕುಲ್‌ಗೆ ದಾನಿಯಾಗಲು ಸಹ ಹೊಂದಿಕೆಯಾಗಿದ್ದಾನೆ, ಆದರೆ ಹೇಳಿದ ಮೊತ್ತವಿಲ್ಲದೆ, ಕಸಿ ಮಾಡಲು ಸಾಧ್ಯವಿಲ್ಲ.

ಈಗ ನನ್ನ ಮಗನ ಜೀವ ಉಳಿಸಲು ಕೇವಲ ನಿಮ್ಮಿಂದ ಮಾತ್ರ ಸಾಧ್ಯ. ಇಡೀ ಜಗತ್ತಿನಲ್ಲಿ ನನಗಿರುವುದು ಅವನೊಬ್ಬನೆ, ಅವನನ್ನು ಕಳೆದುಕೊಳ್ಳುವ ಯೋಚನೆಯನ್ನೂ ಮಾಡಲಾರೆ. ದಯವಿಟ್ಟು ನನ್ನ ನಕುಲ್‌ಗಾಗಿ ಧನ ಸಹಾಯ ಮಾಡಿ, ಅವನಿಗೆ ಬದುಕುವ ಇನ್ನೊಂದು ಅವಕಾಶ ಮಾಡಿಕೊಡಿ.

Advertisement

Udayavani is now on Telegram. Click here to join our channel and stay updated with the latest news.

Next