Advertisement

ಕನ್ನಡಕ್ಕಾಗಿ ಗೀತಗಾಯನ ಅಭಿಯಾನ

04:27 PM Oct 24, 2021 | Team Udayavani |

ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪ್ರಾಧಿಕಾರ ರಾಜ್ಯ ಸರಕಾರದ ಆದೇಶದ ಮೇರೆಗೆ ಅ. 28 ರಂದು ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಏಕಕಾಲಕ್ಕೆ ಕನ್ನಡಕ್ಕಾಗಿ ನಾವು ಗೀತಗಾಯನ ಅಭಿಯಾನವನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳೆಲ್ಲ ಸೇರಿ ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆ ನಡೆಯಿತು.

Advertisement

ಕದಂಬ ಕಲಾ ವೇದಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕದಂಬ ಕಲಾ ವೇದಿಕೆ ಶಿರಸಿ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ಶಿರಸಿ ರತ್ನಾಕರ, ಸುಗಮ ಸಂಗೀತಗಾರ ಮಿತ್ರಾ ಮ್ಯೂಸಿಕ್‌ನ ವಿದ್ವಾನ್‌ ಪ್ರಕಾಶ್‌ ಹೆಗಡೆ ಯಡಳ್ಳಿ, ಸಾರ್ವಜನಿಕ ಕಾರ್ಯಕರ್ತ ಉಮಾಕಾಂತ ಗೌಡ ಹಾಗೂ ಗೂಗಲ್‌ ಮೀಟ್‌ ಸಭೆಯಲ್ಲಿ ಗಾಯಕಿ ಡಾ| ಸುಮನಾ ಹೆಗಡೆ, ಗಾಯಕರಾದ ಸಂತೋಷ್‌ ಶೇಟ್‌, ಪ್ರದೀಪ್‌ ಎಲ್ಲನಕರ್‌, ಉಮೇಶ್‌ ಮುಂಡಳ್ಳಿ ಭಟ್ಕಳ, ಮಾನಸ ಹೆಗಡೆ ಯಲ್ಲಾಪುರ, ರಾಜಪ್ಪ ಎಚ್‌ ಬನವಾಸಿ, ವಿನಾಯಕ ಶೇಟ್‌ ದಿವ್ಯಾಶೇಟ್‌ ರೇಷ್ಮಾ ಶೇಟ್‌, ಪ್ರೀತಿ ಶೆಟ್ಟಿ, ಸುಪ್ರಿಯಾ ನಾಯ್ಕ ಕುಮಟಾ, ಪ್ರೀತಿ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.

ಅ.28 ರಂದು ಬೆಳಗ್ಗೆ 11ಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲಕ್ಷಾಂತರ ಜನರು ನಾಡಗೀತೆಯೊಂದಿಗೆ ಗಾಯನದಲ್ಲಿ ಭಾಗಿಯಾಗಲು ಸಜ್ಜಾಗುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಗಿನ್ನಿಸ್‌ ದಾಖಲೆ ಬರೆಯುವಂತ ಸದಾವಕಾಶ ಇದಾಗಿದ್ದು ಈಗಾಗಲೆ ಶಿರಸಿ, ಭಟ್ಕಳ, ಯಲ್ಲಾಪುರ ಸೇರಿ ಅನೇಕ ತಾಲೂಕುಗಳಲ್ಲಿ ಗೀತಗಾಯನ ತರಬೇತಿಗೆ ಚಾಲನೆ ದೊರೆತಿದ್ದು ಆಸಕ್ತ ಸಂಘ ಸಂಸ್ಥೆಗಳು ಹಾಗೂ ಶಿಕ್ಷಣ ವಲಯ ಹಾಗೂ ಸಾರ್ವಜನಿಕರು ಭಾಗಿಯಾಗಲು ಕೋರಿದೆ.

ರಾಷ್ಟ್ರ ಕವಿ ಕುವೆಂಪುರವರ ಜಯ ಭಾರತ ಜನನಿಯ ತನುಜಾತೆ ಈ ನಾಡಗೀತೆಯೊಂದಿಗೆ ಬಾರಿಸು ಕನ್ನಡ ಡಿಂಡಿಮ ಪ್ರೊ| ನಿಸಾರ್‌ ಅಹಮ್ಮದ್‌ರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಈ ನಾಲ್ಕು ಗೀತೆಗಳನ್ನು ಸರಕಾರ ರಚಿಸಿರುವ ಸಮಿತಿಯಿಂದ ಆಯ್ಕೆ ಮಾಡಲಾಗಿದೆ.

ಈ ಕನ್ನಡಕ್ಕಾಗಿ ನಾವು ಗೀತ ಅಭಿಯಾನದಲ್ಲಿ ಅಭಿಮಾನದಿಂದ ಭಾಗವಹಿಸಲಿಚ್ಚಿಸುವರು ಅಭಿಯಾನದ ಹಾಡು, ಕರೋಕೆ ಹಾಗೂ ಸಾಹಿತ್ಯಕ್ಕಾಗಿ ಕದಂಬ ಕಲಾ ವೇದಿಕೆ ಶಿರಸಿರವರ ವಾಟ್ಸ್‌ಅಪ್‌ ಸಂಖ್ಯೆ 9449371981 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next