ಪಣಜಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣದ ಸಾಕ್ಷ್ಯಗಳನ್ನು ರಾಜ್ಯ ಸರಕಾರ ನಾಶಪಡಿಸುತ್ತಿದೆ ಎಂದು ಗೋವಾ ಫಾರ್ವರ್ಡ್ ಪಕ್ಷದ ಮುಖ್ಯಸ್ಥ ವಿಜಯ್ ಸರ್ದೇಸಾಯಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಸೋನಾಲಿ ಫೋಗಟ್ ಪ್ರಕರಣದಲ್ಲಿ “ಹೋಟೆಲ್‍ನಿಂದ ಸಿಸಿಟಿವಿ ವಿಡಿಯೋಗಳು ಆರಂಭದಲ್ಲಿ ಲಭ್ಯವಿರಲಿಲ್ಲ. ಮತ್ತು ಈಗ ಹೋಟೆಲ್ ಅನ್ನು ಮೂರು ತಿಂಗಳಲ್ಲಿ ನವೀಕರಿಸಲಾಗಿದೆ “ಮೂರು ತಿಂಗಳಲ್ಲಿ ನವೀಕರಣದ ಅಗತ್ಯವಿಲ್ಲದೆ ಪ್ರಕರಣದ ಎಲ್ಲಾ ಪುರಾವೆಗಳನ್ನು ನಾಶಮಾಡಲು ಯೋಜಿಸಲಾಗಿದೆ. ಈಗ ಪ್ರಕರಣ ಸಿಬಿಐ ವಶದಲ್ಲಿದೆ. ಆದರೆ ಇದಕ್ಕೂ ಸಿಬಿಐಗೂ ಯಾವುದೇ ಸಂಬಂಧವಿಲ್ಲ” ಎಂದರು.
ಇದನ್ನೂ ಓದಿ : ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ನಾಮಪತ್ರ ಅರ್ಜಿ ಪಡೆದುಕೊಂಡ ತರೂರ್
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಎಂತಹ ವೈದ್ಯರು..? ಸೋನಾಲಿ ಫೋಗಟ್ ರವರ ಮರಣೋತ್ತರ ಪರೀಕ್ಷಾ ವರದಿ ಬರುವ ಪೂರ್ವದಲ್ಲಿ ಸಾವಿಗೆ ಹೃದಯಾಘಾತವೇ ಕಾರಣ ಎಂದು ಪ್ರತಿಪಾದಿಸಬಹುದು. ಈ ತರಹದ ಮುಖ್ಯಮಂತ್ರಿಗಳನ್ನು ಸ್ವಲ್ಪವೂ ನಂಬಬೇಡಿ, ಇಂತವರು ಗೋವಾಕ್ಕೆ ತುಂಬಾ ಅಪಾಯಕಾರಿ. ಗೋವಾ ಆಡಳಿತ ಪೊಲೀಸರು ಈ ಸಾವನ್ನು ಅಸಹಜ ಎಂದು ಘೋಷಿಸಿದ್ದಾರೆ. ಹೃದ್ರೋಗದಿಂದ ಸಾವು ಎಂದು ಮುಖ್ಯಮಂತ್ರಿ ಹೇಳಿದ್ದು, ಇಲ್ಲಿ ಎಲ್ಲವೂ ಅರ್ಥವಾಗುತ್ತದೆ ಎಂದರು.
ಪ್ರಕರಣದಲ್ಲಿ ಬೇರೆಯವರ ಬಗ್ಗೆ ತನಿಖೆ ನಡೆಸುವ ಮುನ್ನ ಮುಖ್ಯಮಂತ್ರಿಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಫೋಗಟ್ ಪ್ರಕರಣದಲ್ಲಿ ರಾಜಕೀಯ ಮುಖಂಡರು ನೇರವಾಗಿ ಸಾಕ್ಷಿ ಕೈಸೇರದಂತೆ ನೋಡಿಕೊಂಡಿದ್ದಾರೆ. ಹಾಗಾಗಿ ಪ್ರಕರಣದ ತನಿಖೆ ನಡೆಸುವಲ್ಲಿ ಗೋವಾ ಪೊಲೀಸರು ವಿಫಲರಾಗಿದ್ದಾರೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಇದು ಗೋವಾ ಪೊಲೀಸರ ವೈಫಲ್ಯ ಎಂದು ಶಾಸಕ ವಿಜಯ ಸರ್ದೇಸಾಯಿ ಆರೋಪಿಸಿದರು.