ಕಥಕ್ ಕಲಾವಿದೆ ಸೊನಾಲಿ ಲೂಂಬ ಅವರಿಂದ ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ. ಹದಿನಾರು ವರ್ಷಗಳಿಂದ ಖ್ಯಾತ ಕಥಕ್ ಗುರುಗಳಾದ ಹರಿ ಮತ್ತು ಚೇತನಾ ಅವರಿಂದ ನೃತ್ಯ ಕಲಿಯುತ್ತಿರುವ ಸೊನಾಲಿ, ಅಮೆರಿಕದ ಯೂಟಾದಲ್ಲಿ ಕಥಕ್ ನೃತ್ಯಶಾಲೆಯೊಂದನ್ನು ತೆರೆದಿದ್ದಾರೆ. ಅಮೆರಿಕ-ಬೆಂಗಳೂರಿನ ನಡುವೆ ಓಡಾಡುತ್ತಾ, ವಿಡಿಯೊ ಮೂಲಕ ಗುರುಗಳಿಂದ ನೃತ್ಯ ಪಾಠವನ್ನೂ ಹೇಳಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ ಸಂಜೆ ನಡೆಯುವ ನೃತ್ಯ ಪ್ರದರ್ಶನದ ಮುಖ್ಯ ಅತಿಥಿಗಳಾಗಿ, ಐಸಿಸಿಆರ್‌ನ ಸ್ಥಳೀಯ ನಿರ್ದೇಶಕ ಪಿ. ವೇಣುಗೋಪಾಲ್, ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಡೇನಿಯಲ್ ಫರ್ನಾಂಡಿಸ್ ಭಾಗವಹಿಸಲಿದ್ದಾರೆ.
ಎಲ್ಲಿ?: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ
ಯಾವಾಗ?: ಜ. 10, ಶುಕ್ರವಾರ ಸಂಜೆ 6
ಪ್ರವೇಶ: ಉಚಿತ