Advertisement

14 ವರ್ಷದ ನಂತರ ಮನೆಗೆ ಬಂದ ಮಗ

10:23 AM May 30, 2021 | Team Udayavani |

ತಾವರಗೇರಾ: ಒಂದೂವರೆ ದಶಕದ (14 ವರ್ಷದ) ನಂತರ ಜುಮಲಾಪೂರ ಗ್ರಾಮದ ಯುವಕನೊಬ್ಬ ಶುಕ್ರವಾರ ಮರಳಿ ಮನೆಗೆ ಬಂದಿದ್ದು, ಕುಟುಂಬದಲ್ಲಿ ಸಂತಸ ಅರಳಿದೆ.

Advertisement

ಜುಮಲಾಪೂರ ಗ್ರಾಮದ ಗುರುಬಸಪ್ಪ ಹಾಗೂ ಪಾರ್ವತಮ್ಮ ದಂಪತಿಯ ಪುತ್ರ ದೇವರಾಜ (30) 14 ವರ್ಷದ ನಂತರ ಮರಳಿ ಮನೆಗೆ ಬಂದಿದ್ದಾನೆ. ಬಾಲ್ಯದಲ್ಲಿ ಅಂದರೆ ಕಳೆದ 14 ವರ್ಷಗಳ ಹಿಂದೆ ತಂದೆ, ತಾಯಿ ಜೊತೆ ವಾಗ್ವಾದ ಮಾಡಿಕೊಂಡು ಊರು ಬಿಟ್ಟು ತೆರಳಿದ್ದ. ಆಮೇಲೆ ಆತನನ್ನು ಹುಡುಕಲು ಮನೆಯವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಿಕ್ಕಿರಲಿಲ್ಲ.

ಇದನ್ನೂ ಓದಿ : ಡೊಮಿನಿಕಾದಲ್ಲಿ ಕಂಬಿಯ ಹಿಂದೆ ಮೆಹುಲ್ ಚೋಕ್ಸಿ: ಕೈ ಮೇಲೆ ಸುಟ್ಟಗಾಯಗಳು ಪತ್ತೆ; ಹಲ್ಲೆ ಆರೋಪ

ನಂತರ ಆತನ ಹುಡುಕಾಟ ನಿಲ್ಲಿಸಿದ್ದರು. ಈಗ 14 ವರ್ಷದ ಬಳಿಕ ಮಗ ಮನೆಗೆ ಬಂದಾಗ ಆಶ್ಚರ್ಯದ ಜೊತೆಗೆ ಸಂತೋಷ ವ್ಯಕ್ತಪಡಿಸಿದಾಗ ಯುವಕ ಭಾವುಕನಾದ ಘಟನೆ ನಡೆದಿದೆ.

ತಂದೆ, ತಾಯಿಗೆ ತಮ್ಮ ಮಗ ಮನೆ ಸೇರಿರುವುದು ಒಂದೆಡೆ ಸಂತೋಷ ಉಂಟು ಮಾಡಿದೆ. ಕುಟುಂಬ ಸದಸ್ಯರನ್ನು ಬಿಟ್ಟು ಹೋಗಿದ್ದ ದೇವರಾಜನಿಗೆ ಮರಳಿ ಮನೆ ಸೇರುವುದು ಖುಷಿ ತಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next