ಶಹಜಹಾನ್‌ಪುರ (ಉತ್ತರ ಪ್ರದೇಶ): 12ನೇ ವಯಸ್ಸಿನಲ್ಲಿ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, 28 ವರ್ಷಗಳ ಬಳಿಕ ಮಗ ನ್ಯಾಯ ದೊರಕಿಸಿದ ಘಟನೆ ನಡೆದಿದೆ.
ಷಹಜಹಾನ್‌ಪುರದಲ್ಲಿ ವಾಸಿಸುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಕಾಮಾಂಧ ಸಹೋದರರಿಬ್ಬರು ಅತ್ಯಾಚಾರವೆಸಗಿದ್ದು, ಕರಾಳ ಘಟನೆಯ ನಂತರ ಬಾಲಕಿ ಗರ್ಭಿಣಿಯಾಗಿ, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗನು ಬೆಳೆದು ದೊಡ್ಡವನಾದ ಮೇಲೆ ಪಾಲಕರಲ್ಲಿ ತಮ್ಮ ಹೆತ್ತವರ ಬಗ್ಗೆ ತಿಳಿಸುವಂತೆ ಒತ್ತಾಯಿಸಿದ್ದನು. ಈ ವೇಳೆ ಶಹಜಹಾನ್‌ಪುರದ ಸಂತ್ರಸ್ತೆ ಮನೆಗೆ ಕರೆದೊಯ್ಯಲಾಯಿತು. ತಾಯಿಯನ್ನು ಭೇಟಿಯಾದ ನಂತರ, ಅವನು ತನ್ನ ತಂದೆಯ ಬಗ್ಗೆ ಕೇಳಿದ್ದು, ತಂದೆಯ ಗುರುತನ್ನು ತಿಳಿಯಲು ಒತ್ತಾಯಿಸಿದ್ದನು.
ಈ ವೇಳೆ ತಾಯಿ, ನಡೆದ ಕಹಿ ಘಟನೆಯನ್ನು ವಿವರಿಸಿದ್ದು, ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದಾನೆ. 2021ರ ಮಾ. 4 ರಂದು ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಯ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಉಡುಪಿ: ಫಾಝಿಲ್ ಕೊಲೆ ಆರೋಪಿಗಳನ್ನು ಬೆಂಬಲಿಸಿ ವಿವಾದಾತ್ಮಕ ಪೋಸ್ಟ್: ಪ್ರಕರಣ ದಾಖಲು
ಘಟನೆಯ ಸಮಯದಲ್ಲಿ ಸಂತ್ರಸ್ತೆಗೆ 12 ವರ್ಷ ವಯಸ್ಸಾಗಿತ್ತು ಮತ್ತು ವರದಿಯನ್ನು ಸಲ್ಲಿಸಿದ ನಂತರ, ಆರೋಪಿಗಳಾದ ಗುಡ್ಡು, ನಾಕಿ ಹಸನ್ ಮತ್ತು ಸಂತ್ರಸ್ತೆ, ಆಕೆಯ ಮಗನ ಡಿಎನ್ಎ ಪರೀಕ್ಷೆಯನ್ನು ಮಾಡಲಾಗಿದ್ದು, ಅದು ಹೊಂದಿಕೆಯಾಗಿದೆ. ಇದಾದ ಬಳಿಕ ಓರ್ವ ಆರೋಪಿ ಗುಡ್ಡು ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿಟ್ಟು ಜೈಲಿಗೆ ಕಳುಹಿಸಲಾಗಿದೆ. ಇನ್ನೊರ್ವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.