Advertisement

ಸೋಮವಾರಪೇಟೆ: ಜನಮನ ಸೆಳೆದ ಆಯುಧ ಪೂಜೆ

11:42 PM Oct 11, 2019 | Team Udayavani |

ಸೋಮವಾರಪೇಟೆ: ಪಟ್ಟಣದ ವಾಹನ ಚಾಲಕರು ಮತ್ತು ಮೋಟರು ಕೆಲಸಗಾರರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮ ಜನಮನ ಸೆಳೆಯಿತು.

Advertisement

ಖಾಸಗಿ ಬಸ್‌ ನಿಲ್ದಾಣದಲ್ಲಿ ನಿರ್ಮಿ ಸಿದ ವರ್ಣರಂಜಿತ ವೇದಿಕೆ ಯಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಕಾರ್ಯಕ್ರಮ ಗಳು ನಡೆದವು. ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದಲ್ಲಿ ನಡೆದ ಡ್ಯಾನ್ಸ್‌, ಡ್ಯಾನ್ಸ್‌ ಕಾರ್ಯಕ್ರಮವನ್ನು ಸಾವಿರಾರು ಮಂದಿ ವೀಕ್ಷಿಸಿದರು.

ಬೆಳಿಗ್ಗೆ ಪಟ್ಟಣದಲ್ಲಿರುವ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಕಾರ್ಯಕ್ರಮವನ್ನು ಮಾಜಿ ಸಚಿವರಾದ ಬಿ.ಎ.ಜೀವಿಜಯ ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಎ.ಆರ್‌. ಭರತ್‌, ಜಿಪಂ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್‌, ಜಿ.ಪಂ. ಸದಸ್ಯರಾದ ಕೆ.ಪಿ.ಚಂದ್ರಕಲಾ ಪ್ರಸನ್ನ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ಜಿ.ಮೇದಪ್ಪ, ತಾಪಂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್‌ ಮತ್ತಿತರ ಗಣ್ಯರು ಇದ್ದರು. ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿತ್ತು. 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು. ದಾನಿಗಳಾದ ಅರುಣ್‌ ಕಾಳಪ್ಪ, ಕೆ.ಟಿ.ಸತೀಶ್‌, ಮಿಥುನ್‌ ಹಾನ್‌ಗಲ್‌, ಎಸ್‌.ಎನ್‌.ನಾಗಭೂಷಣ್‌, ಹರಗ ಉದಯ, ಗಿರೀಶ್‌ ಮಲ್ಲಪ್ಪ ಮತ್ತಿತರರು ಇದ್ದರು. ಅಲಂಕೃತಗೊಂಡ ವಾಹನಗಳು ಹಾಗು ವರ್ಕ್‌ಶಾಪ್‌ಗ್ಳನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next