ಸೋಮವಾರಪೇಟೆ : ಲೋಕ ಕಲ್ಯಾಣಕ್ಕಾಗಿ ಮೈಸೂರಿನ ವೇದ ಮಾತಾ ಗುರುಕುಲ, ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘ ವತಿಯಿಂದ ರವಿವಾರ ತಾಲೂಕಿನ ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥ ರುದ್ರಾಭಿಷೇಕ ಮತ್ತು ಮಹಾ ರುದ್ರಯಾಗ ನಡೆಯಿತು.
ಗಂಗಾಪೂಜೆಯೊಂದಿಗೆ ಬೆಳಗ್ಗೆ ದೇವಾಲಯದಲ್ಲಿ ಅರ್ಚಕ ನಂದೀಶ್ ಪೌರೋಹಿತ್ಯದಲ್ಲಿ ಶಾಂತ ಮಲ್ಲಿಕಾರ್ಜುನ ದೇವರಿಗೆ ರುದ್ರಾಭಿಷೇಕ, ಅಷ್ಟೋತ್ತರ, ಸಹಸ್ರ ನಾಮ ಅರ್ಚನೆ ನಡೆಯಿತು.
ಪೂಜಾ ಕಾರ್ಯಗಳಿಗಾಗಿ ಮೈಸೂರು ವೇದಮಾತಾ ಗುರುಕುಲದ ಸುಮಾರು 60 ಅರ್ಚಕರಿಂದ ವೇದಘೋಷ ನೆರವೇರಿತು.
ನಂತರ ಗುರುಕುಲದ ಸಂಸ್ಥಾಪಕ ಡಾ| ಮಂಜುನಾಥ್‌ಅವರ ಆರಾಧ್ಯ ಪೌರೋ ಹಿತ್ಯದಲ್ಲಿ,ದೇಶದ ಮೇಲೆ ಶತ್ರು ರಾಷ್ಟ್ರಗಳ ತೊಂದರೆ ಹೆಚ್ಚುತ್ತಿದ್ದು, ದೇಶದೊಳಗಿನ ರಾಜಕಾರಣಿಗಳಲ್ಲಿ ಒಗ್ಗಟ್ಟು ಮೂಡಲಿ ದೇಶಕ್ಕೆ ಸಂಚಕಾರ ಎದುರಾಗದಿರಲಿ. ದುಷ್ಟಶಕ್ತಿಗಳೆಲ್ಲವೂ ದೂರವಾಗಿ ದೇಶ ಬಲಿಷ್ಠಗೊಳ್ಳಲಿ.
ಸಾಮಾಜಿಕ, ರಾಜಕೀಯವಾಗಿ ಎಲ್ಲರಿಗೂ ನೆಮ್ಮದಿ ಕರುಣಿಸಲಿ,ಪ್ರಕೃತಿ ವಿಕೋಪದಂತಹ ಘಟನೆಗಳು ಮರು ಕಳಿಸದಿರಲಿ ಎಂಬ ಸಂಕಲ್ಪ ದೊಂದಿಗೆ ಮಹಾರುದ್ರಹೋಮ ನಡೆಯಿತು.
ಅನಂತರ ಮಹಾಮಂಗಳಾರತಿ ಯೊಂದಿಗೆ ಪ್ರಸಾದ ವಿನಿಯೋಗ ಮತ್ತು ದಾಸೋಹ ನಡೆಯಿತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪ. ಚಂಗಪ್ಪ,ಕಾರ್ಯದರ್ಶಿ ಡಿ.ಬಿ.ವಿಜಯ ಕುಮಾರ್, ಜಿಲ್ಲ ವೀರಶೈವ ಅರ್ಚಕರ ಸಂಘದ ಕಾರ್ಯದರ್ಶಿ ಕೆ.ಬಿ.ಸೋಮಶೇಖರ ಶಾಸಿŒ,ಸೋಮವಾರಪೇಟೆ ಬಸವೇಶ್ವರ ದೇವಾಲಯದ ಅರ್ಚಕ ಮಿಥುನ್ ಶಾಸಿŒ ಅವರು ಮೈಸೂರು ವೇದ ಮಾತಾ ಗುರುಕುಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.