ಸೋಮವಾರಪೇಟೆ: ಸರಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಿಗುವಂತಾಗಬೇಕು ಎಂದು ಬಿ.ಬಿ.ಎಂ.ಪಿ ವಿರೋಧ ಪಕ್ಷದ ಮಾಜಿ ನಾಯಕ ಎಂ.ಎನ್.ನಾಗರಾಜು ಅವರು ಹೇಳಿದರು.
ಸೋಮವಾರಪೇಟೆ ತಾಲೂಕು ಹಿರಿಯ ನಾಗರಿಕರ ಸೇವಾ ಟ್ರಸ್ಟ್ ನ ವಾರ್ಷಿಕೋತ್ಸವದ ಅಂಗವಾಗಿ ರವಿವಾರ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯ ನಾಗರಿಕ ಶ್ರೇಯೋಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಟ್ರಸ್ಟ್ ಹಿರಿಯರಿಗೆ ದಾರಿದೀಪವಾಗಬೇಕು. ನೊಂದ ಜೀವಗಳ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.
ಕೃಷಿ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯ. ಕೃಷಿ ಹಿರಿಯ ಜೀವಗಳಿಗೆ ನೆಮ್ಮದಿ ಬದುಕನ್ನು ಕಟ್ಟಿಕೊಟ್ಟಿದೆ. ಆದರೆ ಪ್ರಕೃತಿ ವಿಕೋಪದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಗೆ ಯಾರೂ ಆತಂಕಪಡದೆ ತಮ್ಮ ವೃತ್ತಿಯನ್ನು ಮುಂದುವರಿಸಿ ಎಂದು ನಿವೃತ್ತ ಎಸ್.ಪಿ., ಎಂ.ಎಸ್.ಶಿವಮೂರ್ತಿ ಹಿರಿಯ ನಾಗರಿಕರಿಗೆ ಧೈರ್ಯ ತುಂಬಿದರು.
ಹಿರಿಯ ನಾಗರಿಕರು ಸ್ವಾಭಿಮಾ ನಿಗಳು, ಕೊನೆ ಕಾಲದಲ್ಲಿ ಸಾಕಿದವರೆಲ್ಲ ಕೈಬಿಡುತ್ತಾರೆ. ನಾವು ಸರ್ಕಾರಕ್ಕೆ ತೆರಿಗೆ ಕಟ್ಟಿದ್ದೇನೆ. ತೆರಿಗೆ ಹಣವನ್ನು ಕೆಲ ರಾಜಕಾರಣಿಗಳು ಹಾಗೂ ಅಧಿಕಾ ರಿಗಳು ಕೊಳ್ಳೆಹೊಡೆಯುತ್ತಾರೆ. ಹಿರಿಯ ನಾಗರಿಕರಿಗೆ 5ಸಾವಿರ ರೂ.ಗಳ ಮಾಸಾಶನ ನೀಡಬೇಕೆಂದು ಜಿ.ವಿ.ಜಯರುದ್ರಪ್ಪ ಹೇಳಿದರು. ಟ್ರಸ್ಟ್ ನ ಅಧ್ಯಕ್ಷ ಎಂ.ಟಿ.ದಾಮೋದರ, ನಿವೃತ್ತ ನ್ಯಾಯಾಧೀಶ ಎಂ.ಆರ್ ದೇವಪ್ಪ, ನಿವೃತ್ತ ಮಾಹಿತಿ ಆಯುಕ್ತ ಜೆ.ಸಿ.ವಿರೂಪಾಕ್ಷಯ್ಯ, ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕ ಡಾ|ಬಿ.ಸಿ. ನವೀನ್ ಕುಮಾರ್, ನಾಗರಿ ಕರಾದ ಜಿ.ಎಸ್.ಪ್ರಭುದೇವ್, ಎಚ್. ಸಿ.ನಾಗೇಶ್, ಎಸ್.ಪಿ.ಪ್ರಸನ್ನ, ಸಿ.ಕೆ.ಮ ಲ್ಲಪ್ಪ, ಎಸ್.ಎಂ.ಡಿಸಿಲ್ವಾ ಉಪಸ್ಥಿತರಿದ್ದರು.