Advertisement

Wayanad landslide: ವಯನಾಡ್‌ ಭೂಕುಸಿತಕ್ಕೆ ಆನೆಪಥ ನಾಶ… ಕಾಡಾನೆಗಳು ಅತಂತ್ರ!

09:47 AM Sep 05, 2024 | Team Udayavani |

ಕೋಯಿಕ್ಕೋಡ್‌: ಕೇರಳದ ವಯನಾಡ್‌ನ‌ಲ್ಲಿ ಸಂಭವಿಸಿದ ಭೂಕುಸಿತದಿಂದ ಸುಮಾರು 197 ಎಕ್ರೆ ಅರಣ್ಯ ನಾಶವಾಗಿದೆ. ಇದರಿಂದ ಮನುಷ್ಯರಷ್ಟೇ ಆನೆಗಳೂ ತೊಂದರೆಗೊಳಗಾಗಿವೆ!

Advertisement

ಆನೆಗಳು ಹಲವು ಶತಮಾನಗಳಿಂದ ಸಾಗುತ್ತಿದ್ದ ದಾರಿಯೇ ಇಲ್ಲವಾಗಿದೆ. ಪರಿಣಾಮ ಅತಂತ್ರಕ್ಕೆ ಸಿಲುಕಿರುವ 12 ಆನೆಗಳು ಸದ್ಯ ನೀಲಿಕಪ್ಪು ಮತ್ತು ಥನಿಲೋಡ್‌ ಪ್ರದೇಶಗಳಲ್ಲಿ ಉಳಿದಿವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಭೂಕುಸಿತ ಸಂಭವಿಸುವುದಕ್ಕೂ ಮುನ್ನವೇ ಹಲವು ಆನೆಗಳು, ನೀಲಂಬೂರು ಅರಣ್ಯದಿಂದ ಚೂರಲ್ಮಲ, ಮುಂಡಕೈ ಅರಣ್ಯ ಪ್ರದೇಶಗಳನ್ನು ಸಮೀಪಿಸಿದ್ದವು.

ಭೂಕುಸಿತವಾಗಿದ್ದರಿಂದ ಅವಕ್ಕೆ ಹಿಂದಕ್ಕೆ ಹೋಗಲಾಗುತ್ತಿಲ್ಲ. ಸದ್ಯಕ್ಕೆ ಅವು ಜನವಸತಿ ಪ್ರದೇಶಗಳತ್ತ ಸುಳಿದಾಡುತ್ತಿವೆ. ಅಲ್ಲಿಂದ ದೂರ ಕಳಿಸಲು ಮಾತ್ರ ಆಗುತ್ತಿದೆ. ಆದರೆ ವಾಪಸ್‌ ನೀಲಂಬೂರಿಗೆ ಓಡಿಸಲು ಯತ್ನಿಸಿದರೂ, ಅವು ಸ್ಥಳ ಬಿಟ್ಟು ಕದಲುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುನರ್ವಸತಿಗೆ ತಿಂಗಳ ವೇತನ ನೀಡಿದ ರಾಗಾ
ತಿರುವನಂತಪುರ: ಭೂ ಕುಸಿತ ಸಂತ್ರಸ್ತರ ಪುನರ್ವಸತಿಗಾಗಿ ರಾಹುಲ್‌ ಗಾಂಧಿ ತಮ್ಮ ಒಂದು ತಿಂಗಳ ವೇತನ 2.3 ಲಕ್ಷ ರೂ.ಗಳನ್ನು ನೀಡಿದ್ದಾರೆ. ಸಂತ್ರಸ್ತರಿಗೆ 100 ಮನೆ ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Wave of Islamophobia: ಇಸ್ಲಾಮೋಫೋಬಿಯಾ… ನಟ ಶಾ ಹೇಳಿಕೆಗೆ ಭಾರೀ ಆಕ್ಷೇಪ

Advertisement
Advertisement

Udayavani is now on Telegram. Click here to join our channel and stay updated with the latest news.

Next