ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್‌ನಿಂದ ಭಾರ ತಕ್ಕೆ ವಾಪಸು ಬಂದಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿರು ವಾಗಲೇ ಉಕ್ರೇನ್‌ನ ಶೈಕ್ಷಣಿಕ ಸಂಸ್ಥೆಗಳು ಹೊಸ ಮಾರ್ಗ ಹುಡುಕಿವೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳ ಮೂಲಕ ಶಿಕ್ಷಣ ಕೊಡಲಾರಂಭಿಸಿವೆ.
ಪಶ್ಚಿಮ ಉಕ್ರೇನ್‌ನಲ್ಲಿರುವ ಹಲವು ಶೈಕ್ಷಣಿಕ ಸಂಸ್ಥೆಗಳು ಸೋಮವಾರ ಆನ್‌ಲೈನ್ ಶಿಕ್ಷಣ ಸೌಲಭ್ಯ ಆರಂಭಿಸಿವೆ. ಶಿಕ್ಷಕರು ಸುರಕ್ಷಿತ ಸ್ಥಳಗಳಲ್ಲಿ ಅಡಗಿ ಕುಳಿತು ತರಗತಿಗಳನ್ನು ನಡೆಸುತ್ತಿದ್ದಾರೆ. ಆದರೆ ರಷ್ಯಾ ದಾಳಿಗೆ ತೀವ್ರವಾಗಿ ಗುರಿಯಾಗಿರುವ ಖಾರ್ಕಿವ್, ಕೀವ್‌ನಂತಹ ನಗರಗಳಲ್ಲಿ ಅಂತರ್ಜಾಲದ ಸಮಸ್ಯೆ ತಲೆದೋರಿರುವ ಕಾರಣ ಅಲ್ಲಿ ಆನ್‌ಲೈನ್ ತರಗತಿ ನಡೆಸುವುದು ಕಷ್ಟವಾಗಿದೆ.
ಇದನ್ನೂ ಓದಿ:ಮೀಡಿಯಾ ಒನ್ ಚಾನೆಲ್ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
ಜೈಶಂಕರ್ ಮಾಹಿತಿ: ಉಕ್ರೇನ್‌ನಿಂದ 22,500 ಭಾರತೀಯರನ್ನು ವಾಪಸು ತಾಯ್ನಾಡಿಗೆ ಕರೆ ತಂದಿರುವುದಾಗಿ ವಿದೇಶಾಂಗ ಸಚಿವ ಜೈಶಂಕರ್ ಮಂಗಳವಾರ ಸಂಸತ್‌ಗೆ ಮಾಹಿತಿ ಕೊಟ್ಟಿದ್ದಾರೆ. ಹಲವು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಹೆದರಿ ಅಲ್ಲೇ ಉಳಿಯಲು ನಿರ್ಧರಿಸಿದರು.
ಭಾರತವು ಯುದ್ಧ ಆರಂಭವಾಗುವುದಕ್ಕೆ ಮೊದಲೇ ಉಕ್ರೇನ್‌ನಲ್ಲಿದ್ದ ಭಾರತೀಯರನ್ನು ನೋಂದಣಿ ಮಾಡಿಸಿಕೊಂಡು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಪ್ರಧಾನಿ ಮೋದಿ ಈ ವಿಚಾರದಲ್ಲಿ ಮುತುವರ್ಜಿ ವಹಿಸಿದ ಕಾರಣ, ಎಲ್ಲ ಸವಾಲುಗಳ ನಡುವೆಯೂ ಭಾರತೀ ಯರನ್ನು ಸುರಕ್ಷಿತವಾಗಿ ಕರೆತರಲು ಸಾಧ್ಯ ವಾಯಿತು ಎಂದು ಅವರು ಹೇಳಿದ್ದಾರೆ.