Advertisement

ಕೆಲವು ಟ್ರೆಂಡಿ ವ್ಯಾಯಾಮ

09:50 PM Dec 02, 2019 | mahesh |

ಫಿಟ್ನೆಸ್‌ ವ್ಯಾಯಾಮದಲ್ಲಿ ಈಗ ಟ್ರೆಡ್ಮಿಲ್, ಸೈಕ್ಲಿಂಗ್‌, ವೇಟ್‌ ಲಿಫ್ಟಿಂಗ್‌ ಮಾತ್ರವಲ್ಲದೇ ಹೊಸ ಹೊಸ ವಿಧಗಳು ಸೇರ್ಪಡೆಗೊಳ್ಳುತ್ತಿವೆ. ಸೈನಿಕರು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಮಾಡುವ ಕಸರತ್ತನ್ನು ಸಾಮಾನ್ಯರೂ ಅನುಸರಿಸುತ್ತಿದ್ದಾರೆ. ದೇಹದ ತೂಕವನ್ನು ಇಳಿಸಲು ಹಾಗೂ ಹೆಚ್ಚಿಸಿಕೊಳ್ಳಲೂ ಇಂತಹ ಫಿಟ್ನೆಸ್‌ಗೆ ಮೊರೆ ಹೋಗುತ್ತಿರುವುದು ವಿಶೇಷ. ಜಂಗಲ್‌ ಜಿಮ್, ಬ್ಯಾಟಲ್‌ ರೋಪ್‌, ಟಬಾಟ ವಕೌìಟ್‌ ಹೀಗೆ ವಿಭಿನ್ನ ಕಸರತ್ತುಗಳು ಜನಪ್ರಿಯವಾಗುತ್ತಿವೆ.

Advertisement

ಜಂಗಲ್‌ ಜಿಮ್
ಸೈನಿಕರು ಮಾಡುವ ವರ್ಕೌಟ್‌ ಇದು. ಎಂಟರಿಂದ ಒಂಬತ್ತು ಅಡಿ ಎತ್ತರದಲ್ಲಿ ಸಾಲಾಗಿ ಕಟ್ಟಿದ ರಿಂಗ್‌ಗಳನ್ನು ಮತ್ತು ಹಗ್ಗಗಳನ್ನು ಜಿಗಿದು ಹಿಡಿಯುವ ಕಸರತ್ತು. ಸಾಮಾನ್ಯರೂ ಈ ವ್ಯಾಯಾಮದ ಮೊರೆ ಹೋಗುತ್ತಿದ್ದಾರೆ.

ಟಬಾಟ ವರ್ಕೌಟ್‌
ಟಬಾಟ ವರ್ಕೌಟ್‌ ಜಪಾನೀಯರು ಅನ್ವೇಶಿಸಿ, ಪ್ರಸ್ತುತಪಡಿಸಿದ, ಏರೋಬಿಕ್‌ ರೂಪವನ್ನು ಹೋಲುವ ವ್ಯಾಯಾಮದ ಮಾದರಿ. ಇದು ಸೊಂಟದ ಮೇಲ್ಭಾಗಕ್ಕೆ ಮಾಡುವ ವ್ಯಾಯಾಮ. ಹೈ ಇಂಟೆನ್ಸಿಟಿ ಇಂಟರ್ವಲ್‌ ಟ್ರೈನಿಂಗ್‌ ಮಾದರಿ. ಅದೇ ವಿಧಾನವನ್ನು ಸಾಮಾನ್ಯರಿಗೂ ಸಾಧ್ಯವಾಗುವಂತೆ ಬದಲಾವಣೆ ಮಾಡಿ ಕೆಲವು ವರ್ಕೌಟ್‌ಗಳನ್ನು ರೂಪಿಸಲಾಗಿದೆ. ಇದು ನೃತ್ಯ ರೂಪವನ್ನು ಹೊಂದಿದ್ದು, ವಿವಿಧ ಬಗೆಯ ಕಸರತ್ತುಗಳನ್ನು ಇಲ್ಲಿ ಅಭ್ಯಾಸ ಮಾಡ ಬಹುದು. ಸ್ಕ್ವಾಟ್‌, ಸೈಡ್‌ ಪಾಟರಲ್‌, ರಿವರ್ಸ್‌ ಲನ್ಜ್, ಮೌಂಟೆನ್‌ ಕ್ಲೈಂಬರ್‌, ಸ್ಪೈಡರ್‌ಮ್ಯಾನ್‌ ಮಾದರಿಗಳನ್ನು ಕಾಣಬಹುದು.

ಬ್ಯಾಟಲ್‌ ರೋಪ್‌
ಬ್ಯಾಟಲ್‌ ರೋಪ್‌ ಅಂದರೆ ಹಗ್ಗದ ವ್ಯಾಯಾಮ. ದೇಹದ ಅಷ್ಟೂ ಸ್ನಾಯುಗಳಿಗೆ ವ್ಯಾಯಾಮ ಆಗಬೇಕೆಂದರೆ 20 ನಿಮಿಷ ಈ ಕಸರತ್ತು ಮಾಡಬೇಕು. ಸುಮಾರು 15 ಮೀಟರ್‌ ಉದ್ದದ ಹಗ್ಗಗಳನ್ನು ಎರಡೂ ಕೈಗಳಲ್ಲಿ ಹಿಡಿದು ಸಮುದ್ರದ ಅಲೆಗಳಂತೆ ಮೇಲೆ ಕೆಳಗೆ ಆಡಿಸಬೇಕು. ಕರಾಟೆಪಟುಗಳು, ಕ್ರಿಕೆಟಿಗರು ಹಾಗೂ ಆ್ಯತ್ಲೆಟಿಕ್‌ಗಳು ಹೆಚ್ಚಾಗಿ ಈ ವರ್ಕೌಟ್‌ ಮಾಡುತ್ತಾರೆ. ಇಂಥ ವ್ಯಾಯಾಮವೂ ಸಾಮಾನ್ಯರನ್ನು ಆಕರ್ಷಿಸುತ್ತಿದೆ.

-  ಕಾರ್ತಿಕ್‌ ಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next