ಕೋಲ್ಕತಾ: ತೃಣಮೂಲ ಕಾಂಗ್ರೆಸ್ ನ ಕೆಲವು ಶಾಸಕರು, ಸಂಸದರು ಪಕ್ಷವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಟಿಎಂಸಿ ಶಾಸಕರೊಬ್ಬರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರೊಂದಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಮತ್ತೊಂದು ವಿವಾದ ಸುತ್ತಿಕೊಂಡಂತಾಗಿದೆ.
ಇದನ್ನೂ ಓದಿ:ನಾನು ರಾಜೀನಾಮೆ ನೀಡಿ ಚಿರತೆ ಸೆರೆಯಾಗುವುದಾದರೆ ಈಗಲೇ ರಾಜೀನಾಮೆ ನೀಡುತ್ತೇನೆ: ಸಚಿವ ಕತ್ತಿ
ತೃಣಮೂಲ ಕಾಂಗ್ರೆಸ್ ನ ಹಲವು ಶಾಸಕರು ಮತ್ತು ಚಿತ್ರರಂಗಕ್ಕೆ ಸೇರಿರುವ ಕೆಲವು ಸಂಸದರು ಪಕ್ಷವನ್ನು ಲೂಟಿ ಮಾಡುತ್ತಿದ್ದು, ಪ್ರಾಮಾಣಿಕ ಕಾರ್ಯಕರ್ತರನ್ನು ಪಕ್ಷದ ಕೇಂದ್ರ ನಾಯಕತ್ವ ಕಡೆಗಣಿಸುತ್ತಿದೆ ಎಂದು ಸಚಿವ ಶ್ರೀಕಾಂತ ಮಹಾತಾ ಆರೋಪಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ, ಟಿಎಂಸಿ ಶಾಸಕ ಮಹಾತಾ, ಸಭೆಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತ, ಭ್ರಷ್ಟಾಚಾರ ಮಾಡುವವರನ್ನು ಪಕ್ಷದ ಉನ್ನತ ನಾಯಕರು ಸಂಭಾವಿತರು ಎಂಬ ಹಣೆಪಟ್ಟಿ ಹಚ್ಚುತ್ತಿದ್ದಾರೆ ಎಂದು ಹೇಳಿರುವುದು ದಾಖಲಾಗಿದೆ.
ಚಿತ್ರರಂಗದಿಂದ ನೂತನವಾಗಿ ಚುನಾಯಿತರಾದ ಕೆಲವು ಶಾಸಕರು ಮತ್ತು ಸಂಸದರನ್ನು ಲೂಟಿಕೋರರು ಎಂದು ಆರೋಪಿಸಿದ ಮಹಾತಾ, ಅವರು ಟಿಎಂಸಿಯ ಆಸ್ತಿಯಾಗಿ ಹೊರಹೊಮ್ಮಿದರೆ, ನಾವು ಎಷ್ಟು ದಿನ ಈ ಪಕ್ಷದೊಂದಿಗೆ ಇರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.