Advertisement

ಅಸಿಡಿಟಿ ನಿವಾರಣೆಗಾಗಿ ಕೆಲವು ಸಲಹೆಗಳು

08:30 PM Dec 25, 2021 | Team Udayavani |

 

  • ತಂಪು ಪಾನೀಯ ಮತು ಕೆಫೀನ್‌ಯುಕ್ತ ಪಾನೀಯಗಳನ್ನು ಸೇವಿಸಬೇಡಿ.
  • ಪ್ರತಿದಿನ ಒಂದು ಗ್ಲಾಸ್‌ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಪ್ರತಿದಿನ 10-12 ಗ್ಲಾಸ್‌ನಷ್ಟು ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ವಾಯು ಮತ್ತು ಆಸಿಡಿಟಿಯಂತಹ ರೋಗ ಲಕ್ಷಣಗಳು ನಿಯಂತ್ರಣಕ್ಕೆ ಬರುತ್ತವೆ.
  • ನೀವು ಅಸಿಡಿಟಿಯಿಂದ ಬಳಲುತ್ತಿದ್ದರೆ ಎಳನೀರು ಕುಡಿಯಿರಿ ಅದು ಅಸಿಡಿಟಿಯನ್ನು ಶಮನಗೊಳಿಸಿ, ಜೀರ್ಣಾಂಗವ್ಯೂಹವನ್ನು ಶಾಂತಗೊಳಿಸುತ್ತದೆ.
  • ರಾತ್ರಿಯ ಊಟವನ್ನು ನೀವು ನಿದ್ದೆ ಹೋಗುವುದಕ್ಕೆ 2 ರಿಂದ 3 ಗಂಟೆ ಮೊದಲು ಮುಗಿಸಿಬಿಡಿ.
  • ಎರಡು ಊಟಗಳ ನಡುವೆ ದೀರ್ಘ‌ ಅಂತರವಿರುವುದು ಅಸಿಡಿಟಿ ಕಾಣಿಸಿಕೊಳ್ಳಲು ಇರುವ ಮತ್ತೂಂದು ಕಾರಣ. ಮಧ್ಯೆ ಮಧ್ಯೆ ಸಣ್ಣ ಸಣ್ಣ ಪ್ರಮಾಣದಲ್ಲಿ ನಿಯುತವಾಗಿ ಊಟ ಸೇವಿಸಿ.
  • ಉಪ್ಪಿನಕಾಯಿ, ಮಸಾಲೆ ಚಟ್ನಿ, ವಿನೇಗರ್‌ ಇತ್ಯಾದಿಗಳನ್ನು ಸೇವಿಸಬೇಡಿ
  • ಯೋಗ ಅಥವಾ ಇತರ ಒತ್ತಡ- ನಿವಾರಕ ಚಟುವಟಿಕೆಗಳು ಅಸಿಡಿಟಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಬಹಳ ಸಹಕಾರಿ ಆಗಬಹುದು.
  • ಕರಿದ ಪದಾರ್ಥ, ಕೊಬ್ಬುಯುಕ್ತ ಆಹಾರ, ಹಾಳುಮೂಳು ಆಹಾರ ಮತ್ತು ಚಾಕೊಲೇಟ್‌ಗಳನ್ನು ಸೇವಿಸಬಾರದು.
  • ಕಾರ್ಬೋಹೈಡ್ರೇಟ್‌ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಿ – ಉದಾ: ಅನ್ನ – ಇಂತಹ ಆಹಾರಗಳಲ್ಲಿ ಆಮ್ಲವು ಬಹಳ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತದೆ.
  • ಮನೆಯಲ್ಲೆ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ ಮತ್ತು ಹೊರಗಡೆ ಆಹಾರ ಸೇವಿಸುವುದನ್ನು ತಪ್ಪಿಸಿಕೊಳ್ಳಿ.
  • ಸಿಗರೇಟು, ಆಲ್ಕೋಹಾಲ್‌ ಮತ್ತು ಗ್ಯಾಸ್‌ ತುಂಬಿಸಿರುವ ಪಾನೀಯಗಳನ್ನು ದೂರ ಇಡಿ.
Advertisement

ಸರಳ ಮತ್ತು ಆರೋಗ್ಯಕರ ಜೀವನಶೈಲಿಯು ನಿಮ್ಮನ್ನು ಮತ್ತು ನಿಮ್ಮ ಹೊಟ್ಟೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ. ನಿಮ್ಮ ದಿನನಿತ್ಯದ ಬದುಕಲ್ಲಿ ಸಣ್ಣ ಸಣ್ಣ ಬದಲಾವಣೆಯನ್ನು ಮಾಡಿಕೊಳ್ಳುವ ಮೂಲಕ ನೀವು ಜೀವನಪರ್ಯಂತ ಆರೊಗ್ಯಕರವಾಗಿ ಇರಬಹುದು. ಆಮ್ಲದ ಹುಳಿ-ಹುಳಿ ಇಲ್ಲದ ಸಹಜ ಸುಂದರ ಜೀವನ  ನಿಮ್ಮದಾಗಿಸಿಕೊಳ್ಳಿ!!

(ಮುಂದಿನ ವಾರಕ್ಕೆ)

Advertisement

Udayavani is now on Telegram. Click here to join our channel and stay updated with the latest news.

Next