Advertisement

ಬಾಂಧವ್ಯ ಕಲುಷಿತಗೊಳಿಸಲು ಕೆಲ ಶಕ್ತಿಗಳ ಪ್ರಯತ್ನ: ಇಫ್ತಿಯಾರ್ ಕೂಟದಲ್ಲಿ ಹೆಚ್ ಡಿಕೆ

08:02 PM Apr 24, 2022 | Team Udayavani |

ಮೈಸೂರು: ಸರ್ವಜನಾಂಗದ ಶಾಂತಿಯ ತೋಟದಂತಿರುವ ಕರ್ನಾಟಕ ರಾಜ್ಯದಲ್ಲಿ ಎರಡು ಸಮುದಾಯಗಳ ನಡುವೆ ಸಾಮರಸ್ಯ ಹಾಳುಮಾಡುವ ಕೆಲಸ‌ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್ .ಡಿ.ಕುಮಾರಸ್ವಾಮಿ ಆರೋಪಿಸಿದರು.

Advertisement

ಬನ್ನಿಮಂಟಪದ ಮಿಲನ್ ಫಂಕ್ಷನ್ ಹಾಲ್ ನಲ್ಲಿ ಭಾನುವಾರ ಆಯೋಜಿಸಲಾಗಿದದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿ, ಎಂತಹ ಕಾಲಘಟ್ಟದಲ್ಲಿಯೂ ಸೋದರ ಭ್ರಾತೃತ್ವದೊಂದಿಗೆ ಇದ್ದು, ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದ ಎರಡು ಸಮುದಾಯಗಳ ನಡುವಿನ ಬಾಂಧವ್ಯವನ್ನು ಕಲುಷಿತಗೊಳಿಸಲು ಕೆಲ ಶಕ್ತಿಗಳು ಪ್ರಯತ್ನ ನಡೆಸಿವೆ. ಇದರಿಂದಾಗಿ ಪ್ರತಿನಿತ್ಯ ಸಮಸ್ಯೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎರಡು ಸಮಾಜಗಳ ನಡುವೆ ಸಾಮರಸ್ಯ ಹಾಳುಮಾಡುವ ಸಂಘಟನೆಗಳಿಗೆ ಪ್ರೋತ್ಸಾಹ ಕೊಡದೆ ಭಾವೈಕ್ಯತೆ ಮೂಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪ್ರಾರ್ಥನೆ
ಕಾರ್ಯಕ್ರಮ ಆರಂಭಕ್ಕೆ ಮುನ್ನ ಮುಸ್ಲಿಂ ಸಮುದಾಯದ ಧರ್ಮಗುರುಗಳು ನಮಾಝ್ ನೆರವೇರಿಸಿದರೆ, ಹಿಂದೂ ಸಮುದಾಯ ಪ್ರತಿನಿಧಿಸುವ ಋತ್ವಿಜರು ವೇದಘೋಷ ಮೊಳಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next