Advertisement

ಕೆಲವರು ದೇಶಭಕ್ತರ ಮುಖವಾಡ ಧರಿಸಿದ್ದಾರೆ

01:35 PM Dec 18, 2017 | Team Udayavani |

ಮೈಸೂರು: ಇತ್ತೀಚಿನ ದಿನಗಳಲ್ಲಿ ಅನೇಕರು ದೇಶಭಕ್ತರ ಮುಖವಾಡ ಧರಿಸಿ, ದೇಶ ಮತ್ತು ಸಮಾಜದ ಸ್ವಾಸ್ತ್ಯ ಹದಗೆಡಸುತ್ತಿರುವವರೇ ದೇಶಭಕ್ತರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರನಟ ಚೇತನ್‌ ವಿಷಾದಿಸಿದರು.

Advertisement

ಗಂಗೋತ್ರಿ ಚಿಂತಕರ ಚಾವಡಿ, ಮುಳ್ಳೂರು ವಿನಾಯಕ ಜಾnನ ವಿದ್ಯಾಶಾಲೆ ಸಹಯೋಗದಲ್ಲಿ ಮೈಸೂರು ವಿವಿ ಮಾನಸಗಂಗೋತ್ರಿ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಸಂವೇದನೆ ಅಗ್ಗಳಿಕೆ-ಸಾಂಸ್ಕೃತಿಕ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಆಧುನಿಕ ಯುಗದಿಂದ ಗ್ರಾಮೀಣ ಪ್ರದೇಶದ ಸಂಸ್ಕೃತಿ-ಕಲೆ ಅವನತಿ ಹಾದಿ ಹಿಡಿದಿದೆ. ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅಗತ್ಯವಿದ್ದು, ಕಲೆ ಮೂಲಕ ಸಮಾಜಿಕ ಪಿಡಗು ಹಾಗೂ ಸಮಸ್ಯೆಗೆ ಪರಿಹಾರ ನೀಡಬೇಕಿದೆ ಎಂದು ಹೇಳಿದರು.

ಇನ್ನೂ ದೇಶ¸‌ಕ್ತರ ಮುಖವಾಡ ಧರಿಸಿ, ದೇಶ ಮತ್ತು ಸಮಾಜದ ಸ್ವಾಸ್ತ್ಯ ಹದಗೆಡಿಸುತ್ತಿರುವವರೇ ದೇಶಭಕ್ತರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ದೇಶದ ಸಮಗ್ರತೆ ಸಾರುವ ಸಂವಿಧಾನ ಗೌರವಿಸುವವರು ನಿಜವಾದ ದೇಶ ಭಕ್ತರು ಎಂದು ಹೇಳಿದರು.

ಈ ಮುನ್ನ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು  ಉದ್ಘಾಟಿಸಿದರು. ಮುಳ್ಳೂರು ವಿನಾಯಕ ಜಾnನ ವಿದ್ಯಾಶಾಲೆ ಮಕ್ಕಳು ಪೂಜಾ ಕುಣಿತ ಮತ್ತು ವೀರಗಾಸೆ, ನಗರದ ಸುಂಬುದ್ದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಮಕ್ಕಳ ಡೊಳ್ಳು ಕುಣಿತ, ಬೆಂಗಳೂರಿನ ಬಾಲು ಮತ್ತು ತಂಡ ಜಂಡೆ ಝಲಕ್‌ ಪ್ರದರ್ಶನ ನೀಡಿತು.

Advertisement

ಇನ್ನು ಮಹಿಳಾಪರ, ಭಾವಗೀತೆ, ಜನಪದ ಗೀತೆ ಹಾಡುವ ಮೂಲಕ ಗಮನ ಸಳೆದರು. ಯುಎಸ್‌ಎ ಜನಪರ ವೈದ್ಯ ಡಾ.ಅಮರ್‌ಕುಮಾರ್‌, ಚಿಂತಕ ಪ್ರೊ.ಕಾಳೇಗೌಡ ನಾಗಾವಾರ, ಲೇಖಕ ನಾ.ದಿವಾಕರ, ಪತ್ರಕರ್ತ ಬಿ.ಆರ್‌.ರಂಗಸ್ವಾಮಿ, ಚಿಂತಕರ ಚಾವಡಿ ಅಧ್ಯಕ್ಷೆ ಪದ್ಮಶ್ರೀ ಇದ್ದರು. 

ಕಲೆಯಲ್ಲಿ ತೊಡಗಿಸಿಕೊಂಡು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ತಮ್ಮ ನಂಬಿಕೆಯಾಗಿತ್ತು. ಇದಕ್ಕೆ ಸಿನಿಮಾ ವೇದಿಕೆ ಎಂದು ಭಾವಿಸಿ, ಸಿನಿಮಾದಲ್ಲಿ ತೊಡಗಿಸಿಕೊಂಡೆ. ಬೆಳ್ಳಿ ತೆರೆ ಪ್ರವೇಶಕ್ಕೂ ಮುನ್ನ ಬೀದಿ ನಾಟಕ, ರಂಗಭೂಮಿಯಲ್ಲಿ ತೊಡಗಿದ್ದೆ. ಆಗಲೇ ನಮ್ಮ ಗ್ರಾಮೀಣ ಸೊಗಡಿನ ಮಹತ್ವ, ಸೊಬಗು ಅರಿವಾಯಿತು.
-ಚೇತನ್‌, ನಟ

Advertisement

Udayavani is now on Telegram. Click here to join our channel and stay updated with the latest news.

Next