ತೀರ್ಥಹಳ್ಳಿ : ಪಟ್ಟಣದ ವಾರ್ಡ್ ನಂ 14 ರ ಕುರುವಳ್ಳಿ ಪುತ್ತಿಗೆ ಮಠ ಸಮೀಪವಿರುವ ಸರ್ಕಾರಿ ಪ್ರಾರ್ಥಮಿಕ ಶಾಲೆಗೆ ಸಂಬಂಧಪಟ್ಟ ಜಮೀನೊಂದು ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಗ್ಗೆಬೈಲು ಹತ್ತಿರ ಸರ್ವೇ ನಂ 4 ರಲ್ಲಿ ಎಂಟು ಎಕರೆ ಎಂಟು ಗುಂಟೆ ಜಮೀನು ಇದ್ದು ಇದು ಹಿಂದೆ ಶಾಲೆಗೆ ದಾನದ ರೂಪದಲ್ಲಿ ಮಠ ಮತ್ತು ಜೋಯ್ಸ್ ಕುಟುಂಬದವರು ಕೊಟ್ಟಿದ್ದರು ಎನ್ನಲಾಗಿದೆ.
ಆದರೆ ಶಾಲಾ ಆಡಳಿತ ಮಂಡಳಿಯವರು ಈ ಜಮೀನಿಗೆ ಸುತ್ತ ಬೇಲಿ ಕಂಬ ಹಾಕಿ ಒಳಗಡೆ ಅಕೇಶಿಯಾ ಗಿಡಗಳನ್ನು ನೆಟ್ಟು ಶಾಲೆಗೆ ಉತ್ತಮ ಆದಾಯ ಬರುವ ರೀತಿಯಲ್ಲಿ ಮಾಡಿದ್ದರು. ನಂತರ ಆಡಳಿತ ಮಂಡಳಿ ಅಕೇಶಿಯಾ ಗಿಡಗಳನ್ನು ಕಟಾವು ಮಾಡಿದ್ದು ಶಾಲೆಗೆ ಉತ್ತಮ ಆದಾಯ ಕೂಡ ಒದಗಿ ಬಂದಿತ್ತು. ತದನಂತರದಲ್ಲಿ ಪುನಃ ಆಡಳಿತ ಮಂಡಳಿಯವರು ಮತ್ತೆ ಗಿಡಗಳನ್ನು ನೆಟ್ಟಿದರು.ಅದರ ನಿರ್ವಹಣಿ ಸರಿಮಾಡದೆ ಈಗ ಖಾಲಿ ಜಾಗ ಕಾಣುತ್ತಿದೆ.
ಈಗ ಬೇಲಿ ಕಂಬಕ್ಕೆ ದುಪ್ಪಟ್ಟು ಬೆಲೆ ಆಗಿದ್ದರಿಂದ ಸುತ್ತ ಹಾಕಿದ ಬೇಲಿ ಕಂಬ ಸ್ಥಳೀಯವಾಗಿ ಯಾರೋ ರಾತ್ರೋ ರಾತ್ರಿ ಮಂಗ ಮಾಯ ಮಾಡಿದ್ದರು ಎನ್ನಲಾಗಿದೆ.
ಊರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬೇರೆ ಹಾದು ಹೋಗುವುದರಿಂದ ಭೂಮಿಯ ಬೆಲೆ ಗಗನಕ್ಕೇರಿದೆ ಹಾಗಾಗಿ ಬೆಂಗಳೂರಿನಂತಹ ಮಹಾನಗರಿಯಿಂದ ಬಂದ ಬಲಾಢ್ಯ ವ್ಯಕ್ತಿಗಳು ಎಂಟು ಎಕರೆ ಎಂಟು ಗುಂಟೆ ಶಾಲೆಗೆ ಸಂಬಂಧಪಟ್ಟ ಜಮೀನನ್ನು ಕಬಳಿಸಲು ಹೊರಟಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಸಂಬಂಧಪಟ್ಟ ಶಾಲೆಯ ಆಡಳಿತ ಮಂಡಳಿ ಶಾಲಾ ಅಭಿವೃದ್ಧಿ ಸಮಿತಿ ತಕ್ಷಣವೇ ಗಮನಿಸಿ ಶಾಲೆಗೆ ಸಂಬಂಧಪಟ್ಟ ಆಸ್ತಿಯನ್ನು ಬೇಲಿ ಹಾಕುವುದರ ಮೂಲಕ ಉಳಿಸಿಕೊಳ್ಳಲು ಮುಂದಾಗಲಿ ಹಾಗೂ ಅ ಜಮೀನಿನಲ್ಲಿ ಖಾಲಿ ಬಿಡುವುದಕ್ಕಿಂತ ಯವುದಾದರು ಶಾಲೆಗೆ ಆದಾಯ ಬರುವಂತೆ ಕೃಷಿ ಮಾಡಲಿ ಎನ್ನುವ ಮಾತು ಹೆಸರು ಹೇಳಲಿಚ್ಛಿಸದ ವ್ಯಕ್ತಿಯಿಂದ ಕೇಳಿ ಬರುತ್ತಿದೆ.