Advertisement

ಸಚಿವ ಸ್ಥಾನಕ್ಕಾಗಿ ಕೆಲವರು ಕಾಯಬೇಕು: ಕಾರಜೋಳ

10:06 AM Feb 04, 2020 | sudhir |

ಬಾಗಲಕೋಟೆ: ಎಲ್ಲರೂ ಒಂದೇ ಬಾರಿಗೆ ಸಚಿವರಾಗುವುದು ಕಷ್ಟ. ಹೀಗಾಗಿ ಕೆಲವರು ಸಚಿವ ಸ್ಥಾನಕ್ಕಾಗಿ ಕಾಯಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಚಿವ ಸ್ಥಾನ ದೊರೆಯಲಿದೆ.

Advertisement

ಸಂಪುಟ ವಿಸ್ತರಣೆ ಕುರಿತು ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಗೃಹ ಸಚಿವರ ಜತೆಗೆ ಚರ್ಚಿಸಲಾಗಿದೆ. 17 ಜನ ಶಾಸಕರಲ್ಲಿ 10 ಜನ ಹಾಗೂ ಮೂವರು ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ ಎಂದರು.

ಶಾಸಕ ಮಹೇಶ ಕುಮಟಳ್ಳಿ ಹಾಗೂ ಎಚ್‌. ವಿಶ್ವನಾಥ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಕೇಂದ್ರ ಸರ್ಕಾರದ 9 ಸಾವಿರ ಕೋಟಿ ತೆರಿಗೆ ಕಡಿತವಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಒಂದು ವರ್ಷದ ಅಂದಾಜು ಮಾಡಿದ್ದೇವೆ. ಮುಂದಿನ 12 ತಿಂಗಳ ಕಾಲ ಎಷ್ಟು ತೆರಿಗೆ ಬರಬಹುದು ಎಂದು ಅಂದಾಜು ಮಾಡಲಾಗುತ್ತಿದ್ದು, ಕೆಲವೊಮ್ಮೆ ಹೆಚ್ಚು-ಕಡಿಮೆ ಆಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next