ಶಿವಮೊಗ್ಗ; ಲಾಕ್ ಡೌನ್ ಕಾರಣದಿಂದ ಸುಮಾರು ಒಂದು ತಿಂಗಳಿಂದ ಮುಚ್ಚಿದ್ದ ಮದ್ಯದಂಗಡಿಗಳನ್ನು ತೆರೆಯಲು ಸರಕಾರ ಅವಕಾಶ ನೀಡಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಮದ್ಯದಂಗಡಿ ಮಾಲೀಕರ ಜೊತೆ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಸಭೆ ನಡೆಸಿದರು.
ನಾಳೆಯಿಂದ ಮದ್ಯದಂಗಡಿ ಆರಂಭವಾಗುವ ಹಿನ್ನಲೆಯಲ್ಲಿ ಶಿವಮೊಗ್ಗ ಅಬಕಾರಿ ಡಿಸಿ ಕ್ಯಾ. ಅಜಿತ್ ಕುಮಾರ್ ನೇತೃತ್ವದಲ್ಲಿ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.
ಪ್ರತಿ ಮದ್ಯದಂಗಡಿ ಮುಂಭಾಗ ಬ್ಯಾರಿಕೇಡ್ ಅಳವಡಿಸಬೇಕು, ಬ್ಯಾರಿಕೇಡ್ ನ ಒಳಭಾಗದಲ್ಲಿ ಕೇವಲ ಐದು ಜನ ಮಾತ್ರ ಇರಲು ಅವಕಾಶ ನೀಡಬೇಕು. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅಂಗಡಿ ತೆರೆಯಲು ಅನುಮತಿ ನೀಡಬೇಕು, ಪೊಲೀಸರು ಇದ್ದರೂ, ಸ್ವಂತ ಖರ್ಚಿನಲ್ಲಿ ಭದ್ರತಾ ಸಿಬ್ಭಂಧಿಗಳನ್ನು ನೇಮಿಸಿಕೊಳ್ಳಬೇಕೆಂದು ಎಂದು ಮದ್ಯದಂಗಡಿ ಮಾಲೀಕರಿಗೆ ಸೂಚನೆ ನೀಡಲಾಯಿತು.
ಒಬ್ಬರಿಗೆ 4 ಫುಲ್ ಬಾಟಲ್ ಬಿಯರ್, 6 ಪಿಂಟ್ ಬಾಟಲಿ, 2.3 ಲೀ. (6 ಕ್ವಾಟರ್ ಅಥವಾ ಒಂದುವರೆ ಬಾಟಲ್) ಮಾತ್ರ ನೀಡುವಂತೆ ಆದೇಶ ನೀಡಲಾಗಿದೆ.
ಮದ್ಯ ಹೊರತುಪಡಿಸಿ, ಕೌಂಟರ್ ನಲ್ಲಿ ಬೇರೆ ಪದಾರ್ಥ ಅಥವಾ ನೀರು ಕೂಡ ನೀಡುವಂತಿಲ್ಲ.ಮದ್ಯದಂಗಡಿ ಪಕ್ಕದ ಗೂಡಂಗಡಿಗಳಲ್ಲಿಯೂ ಮದ್ಯ ಸೇವನೆ ಮಾಡುವಂತಿಲ್ಲ. ಮದ್ಯ ಮಾರಾಟ ವೇಳೆ ಕೈಗವಸು ಮತ್ತು ಮಾಸ್ಕ್ ಬಳಸಲು ಸೂಚನೆ ನೀಡಲಾಗಿದೆ.
ಮದ್ಯದಂಗಡಿ ಮುಂಭಾಗ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದು, ಎಲ್ಲಾ ಮದ್ಯದಂಗಡಿ ಮುಂಭಾಗ ದಲ್ಲಿ ಸಿಸಿ ಟಿವಿ ಅಳವಡಿಕೆ ಕಡ್ಡಾಯವಾಗಿದೆ. ಜಿಲ್ಲೆಯಲ್ಲಿನ 260 ಅಂಗಡಿಗಳ ಪೈಕಿ, ಕೇವಲ 155 ಅಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ.