ಮಣಿಪಾಲ: ಕಳೆದ ವರ್ಷ ಈ ಹೊತ್ತಿಗೆ ವಿಶ್ವಕಪ್ ಟೂರ್ನಿಯ ಸಂಭ್ರಮ. ಪಂದ್ಯಾಟ ಏರ್ಪಟ್ಟಿದ್ದ ನಗರಗಳಲ್ಲಿ ಕಾಲಿರಿಸಲು ಸಾಧ್ಯವಾಗದಷ್ಟು ಸಾಲುದ್ಧದ ವಾಹನಗಳು. ಕೇಸರಿ ಬಿಳಿ ಹಸಿರು ತ್ರಿವರ್ಣಗಳನ್ನು ಮೈಗೆ ಹಚ್ಚಿಕೊಂಡು ತನ್ನ ದೇಶದ ಕ್ರೀಡಾಳುಗಳನ್ನು ಪ್ರೋತ್ಸಾಹಿಸಲು ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳು. ಹೀಗೆ ಹಲವು ಕಾರಣಗಳಿಗೆ 2019ರ ಜೂನ್ ತಿಂಗಳು ಸಾಕ್ಷಿಯಾಗಿದೆ. ಅದರ ಬಳಿಕ ಕ್ರಿಕೆಟ್ ಅಭಿಮಾನಿಗಳಿಗೆ ಕೇವಲ ಬೆರಳೆಣಿಕೆ ಪಂದ್ಯಗಳು ಮಾತ್ರ ದೊರೆತಿದ್ದು ಹಳೆಯ ಪಂದ್ಯಗಳ ಮರುಪ್ರಸಾರವನ್ನು ನೋಡುತ್ತಿದ್ದಾರೆ. ಹಾಗೆ ನೋಡಿದರೆ ವಿಶ್ವಕಪ್‌ನಲ್ಲಿ ಎಲ್ಲ ತಂಡಗಳು ಉತ್ತಮ ಪ್ರದರ್ಶವನ್ನು ನೀಡಿದೆ. 2019ರ ವಿಶ್ವಕಪ್ ಹಲವು ಕಾರಣಗಳಿಗೆ ನಮ್ಮಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಅವುಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಅಭಿಮಾನಿಗಳಿಗೆ ಕೋಹ್ಲಿ ಗೈಡ್
ಪ್ರಕರಣವೊಂದರಲ್ಲಿ ಹೆಸರು ಕೇಳಿಬಂದ ಪರಿಣಾಮ ಆಸ್ಟೇಲಿಯಾದ ಸ್ವೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬ್ಯಾನ್ ಮಾಡಲಾಗಿತ್ತು. ವಿಶ್ವಕಪ್ ಪಂದ್ಯಾಟಕ್ಕೆ ಮರಳಿದ ಅವರನ್ನು ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಸರಿಯಾಗಿ ನಡೆಸಿಕೊಂಡಿರಲಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಂದರ್ಭ ಫೀಲ್ಡಿಂಗ್‌ನಲ್ಲಿದ್ದ ಸ್ಮಿತ್ ಅವರನ್ನು ಭಾರತೀಯ ಅಭಿಮಾನಿಗಳು ಛೇಡಿಸಿದ್ದರು. ಆದರೆ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೋಹ್ಲಿ ಇದನ್ನು ಗಮನಿಸಿದ್ದರು. ತತ್‌ಕ್ಷಣವೇ ತಮ್ಮ ಅಭಿಮಾನಿಗಳತ್ತ ತಿರುಗಿ, ಸ್ಮಿತ್ ಅವರನ್ನು ನಿಂದಿಸುವ ಬದಲು ಪ್ರೋತ್ಸಾಹ ನೀಡಿ ಎಂದು ಕೈ ಸನ್ನೆಯಲ್ಲಿ ಸೂಚಿಸಿದ್ದರು. ಇದು ಭಾರೀ ವೈರಲ್ ಆಗಿತ್ತು.
ಜಡೆಜಾ ಯುಆರ್ ಸ್ಟ್ರಾಂಗ್ ಎಂದ ರೋಹಿತ್
ನ್ಯೂಜಿಲೆಂಡ್ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ನೀಡಿದ ಗುರಿಯನ್ನು ಬೆನ್ನತ್ತುವ ಸಂದರ್ಭ ವಿಕೆಟ್‌ಗಳನ್ನು ಬೆಗನೇ ಕಳೆದುಕೊಂಡಿತ್ತು. ಈ ಸಂದರ್ಭ ತಂಡಕ್ಕೆ ಜಡೆಜಾ ಅವರು ಆಸರೆಯಾಗಿದ್ದರು. ಜಡೆಜಾ ಉತ್ತಮ ಬ್ಯಾಟಿಂಗ್ ನಡೆಸುತ್ತಿರುವುದನ್ನು ಪೆವಿಲಿಯನ್‌ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಗಮನಿಸುತ್ತಿದ್ದರು. ಒವರ್ ಮುಗಿದ ಬಳಿಕ ಅವರು ಜಡೆಜಾರನ್ನು ನೋಡಿ “ಯು ಆರ್ ಸ್ಟ್ರಾಂಗ್’ ಎಂದು ಕೈ ಸನ್ನೇಯಲ್ಲೇ ಹುರಿದುಂಬಿಸಿದರು. ಆದರೆ ಭಾರತದ ಆ ಪಂದ್ಯಾಟದಲ್ಲಿ ಕಿವೀಸ್‌ಗೆ ಶರಣಾಗಿತ್ತು. ಭಾರತದ ಬ್ಯಾಟಿಂಗ್ ಕ್ರಮಾಂಕ ಸಂಪೂರ್ಣ ವಿಫಲವಾಗಿತ್ತು.
ಬ್ರಾಥ್‌ವೈಡ್ ಅನ್ನು ಸಮಧಾಸಿಸಿದ ಕೀವಿಸ್ ಆಟಗಾರರು
ನ್ಯೂಜಿಲೆಂಡ್ ನೀಡಿದ 292 ರನ್‌ಗಳನ್ನು ಬೆನ್ನತ್ತಿದ್ದ ವೆಸ್ಟ್‌ಇಂಡೀಸ್ ಉತ್ತಮ ಹೋರಾಟವನ್ನೇ ನೀಡಿತ್ತು. ತಂಡದ ಮೊತ್ತ 286ಕ್ಕೆ 9 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ಅನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಅಂತಿಮ ವಿಕೇಟ್ ಜತೆಯಾಟದ ನಡೆಸಿದ ಬ್ರಾಥ್‌ವೈಟ್ ಅವರ ಮೇಲಿತ್ತು. ವೆಸ್ಟ್ ಇಂಡೀಸ್ 7 ಎಸೆತಗಳಲ್ಲಿ 6 ರನ್‌ಗಳನ್ನು ಗಳಿಸಬೇಕಿತ್ತು. ಈ ಸಂದರ್ಭ ಬ್ರಾಥ್‌ವೈಡ್ ಸಿಕ್ಸರ್ ಸಿಡಿಸಿ ಗೆಲುವು ತಂದು ಕೊಡುವ ನಿರೀಕ್ಷೆಯಲ್ಲಿದ್ದರು. ದೃಢ ಮನಸ್ಸು ಮಾಡಿ ಸಿಕ್ಸರ್‌ಗೆ ಅಟ್ಟಿದ ಚೆಂಡು ಕ್ಯಾಚ್ ಆಗಿತ್ತು. ಕಡೆಯ ಕ್ಷಣದ ವರೆಗೆ ಹೋರಾಡಿ ಗೆಲುವು ತಂದು ಕೊಡುವ ಪ್ರಯತ್ನದಲ್ಲಿದ್ದ ಬ್ರಾಥ್‌ವೈಟ್ ನಿರಾಸೆಗೊಂಡು ಮೈದಾನದಲ್ಲಿ ಕುಸಿದು ಬಿದ್ದರು. ಅವರನ್ನು ನ್ಯೂಜಿಲೆಂಡ್ ಅಟಗಾರರು ಸಮಾಧಾನ ಪಡಿಸಿದ್ದರು. ವಿಶೇಷ ಎಂದರೆ ಕೇನ್ ವಿಲಿಯಮ್ಸ್ ಅವರು ಗೆಲುವಿನ ಸಂಭ್ರಮಾಚರಣೆ ಬದಲು ಬ್ರಾಥ್‌ವೈಟ್ ಅವರನ್ನು ಸಮಧಾನಪಡಿಸುತ್ತಿದ್ದದು ನೈಜ ಕ್ರೀಡ ಸ್ಪೂರ್ತಿಯನ್ನು ಎತ್ತಿ ತೋರಿಸುತ್ತಿತ್ತು.
ಪಂದ್ಯ ವೀಕ್ಷಿಸಿದ 87 ವರ್ಷದ ಚಾರುಲತಾ ಪಟೇಲ್
ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ ನಡೆದ ಪಂದ್ಯವನ್ನು ವೀಕ್ಷಿಸಲು 87 ವರ್ಷದ ಚಾರುಲತಾ ಅವರು ಪಟೇಲ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅವರು ಆಗಮಸಿದ ಸುದ್ದಿ ತಿಳಿದ ಭಾರತೀಯ ತಂಡದ ನಾಯಕ ವಿರಾಟ್ ಕೋಹ್ಲಿ ಅವರು ಪಂದ್ಯ ಮುಗಿದ ಬಳಿಕ ಅವರನ್ನು ಭೇಟಿಯಾಗಿ ಕುಶಲೋಪರಿ ನಡೆಸಿದ್ದರು.
ಪಂದ್ಯದ ವೇಳೆ ನಡೆಯಿತು ಲವ್ ಪ್ರಪೋಸಲ್
ಹೌದು ಇಂತಹದೊಂದು ಘಳಿಗೆಗೆ ಸಾಕ್ಷಿಯಾಗಿದ್ದು ಭಾರತದ ಮತ್ತು ಪಾಕ್ ನಡುವಿನ ಪಂದ್ಯ. ಭಾರತ ಮತ್ತು ಪಾಕ್ ಪಂದ್ಯ ಎಂದರೆ ಅದು ಹೈ ವೋಲ್ಟೆಜ್ ಕದನ ಎಂದೇ ಬಿಂಬಿಸಲಾಗುತ್ತದೆ. ಈ ನಡುವೆ ಪ್ರೇಕ್ಷಕರಾಗಿ ಆಗಮಿಸಿದ ಯುವಕ ಯುವತಿ ಪಂದ್ಯಾಟದ ನಡುವೆ ಪರಸ್ಪರ ಉಂಗುರವನ್ನು ವಿನಿಮಯ ಮಾಡಿಕೊಂಡರು. ಈ ದೃಶ್ಯ ದೃಶ್ಯ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಿತ್ತು. ಇದು ಭಾರೀ ಸಂಚಲನಕ್ಕೆ ಕಾರವಾಗಿತ್ತು.
ಬಾಂಗ್ಲಾದ ಫೀಲ್ಡ್ ಸೆಟ್ ಮಾಡಿದ ಧೋನಿ
39ನೇ ಒವರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಎಂ.ಎಸ್. ಧೋನಿ ಅವರು ಎದುರಾಲಿ ಬಾಂಗ್ಲಾದೇಶದ ಫೀಲ್ಡಿಂಗ್ ಅನ್ನು ಸೆಟ್ ಮಾಡಿದ್ದರು. ಹೌದು 39ನೇ ಓವರ್‌ನ ಬೌಲಿಂಗ್ ನಡೆಯುತ್ತಿರವ ಸಂದರ್ಭ ಸ್ಕ್ವಾರ್ ಲೆಗ್ ಬಳಿ ಇದ್ದ ಫೀಲ್ಡರ್ ಚಲನೆಯಲ್ಲಿದ್ದರು. ಇದನ್ನು ಗಮನಿಸಿದ ಧೋನಿ ಬೌಲಿಂಗ್ ಮಾಡುವವರನ್ನು ತಡೆದು ಫೀಲ್ಡರ್ ಅನ್ನು ಸ್ಕ್ವಾರ್ ಲೆಗ್‌ನಲ್ಲಿ ಸೆಟ್ ಮಾಡುವಂತೆ ತಿಳಿಸಿದ್ದರು. ಬೌಲರ್ ಬಳಿಕ ಫೀಲ್ಡರ್ ಅನ್ನು ಅಲ್ಲೇ ಪ್ಲೆಸ್‌ಮೆಂಟ್ ಮಾಡಿದ್ದರು.
ಸ್ಟಂಪ್‌ಗೆ ಬಡಿದ ಚೆಂಡು ಸಿಕ್ಸರ್‌ಗೆ..!
ವಿಶೇಷವಾದ ವಿದ್ಯಮಾನವೊಂದಕ್ಕೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗಿತ್ತು. ಬಾಂಗ್ಲಾ ಮತ್ತು ಇಂಗ್ಲೆಂಡ್ ನಡುವಿನ ಆ ಪಂದ್ಯದಲ್ಲಿ ಇಂಗ್ಲೆಂಡಿನ ಆರ್ಚರ್ ಮಾಡಿದ ಬೌಲಿಂಗ್ ಸ್ಟಂಪ್‌ಗೆ ಬಡಿದು ಅದು ಬೌಂಡರಿ ಗೆರೆ ದಾಟಿತ್ತು. ಮತ್ತೊಂದು ಪಂದ್ಯದಲ್ಲಿ ಸಿಕ್ಸರ್‌ಗೆ ಹೋಗುವ ಚೆಂಡ್ ಅನ್ನು ಬೆನ್ ಸ್ಟಾಕ್ ಅವರು ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು.