ಕಡಿಮೆ ಕೊಬ್ಬು, ಕಡಿಮೆ ಕ್ಯಾಲೋರಿ ಮತ್ತು ಕೊಬ್ಬು ಮುಕ್ತ ಆಹಾರಗಳು ಆರೋಗ್ಯಕರ ಎಂದೆನಿಸಬಹುದು. ವಾಸ್ತವದಲ್ಲಿ ಅವು ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ.
Advertisement
ಮಾರುಕಟ್ಟೆಯಲ್ಲಿ ಲಭ್ಯವಿರುವ ಡಯೆಟ್ ಆಹಾರಗಳು ಅನೇಕ ರೀತಿಯಲ್ಲಿ ನಮ್ಮ ದೇಹಕ್ಕೆ ಮಾರಕವಾಗಿದೆ. ಆರೋಗ್ಯಕರ ಡಯೆಟ್ ಆಹಾರ ಎಂದು ನಾವು ಅಂದುಕೊಂಡಿರುವ ಅನಾರೋಗ್ಯಕರ ಆಹಾರದ ಪಟ್ಟಿ ಇಲ್ಲಿದೆ ಓದಿ..
ಇತ್ತೀಚೆಗೆ ಡಯೆಟ್ ಪಾಲಿಸುವವರು ಸೂ¾ಥಿ ಮತ್ತು ಪ್ರೋಟೀನ್ ಶೇಕ್ಸ್ ಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ದೀರ್ಘಾವಧಿಯವರಗೆ ಹೊಟ್ಟೆ ಪೂರ್ಣವಾಗಿರಲು ಊಟದ ನಡುವೆ ಇವುಗಳು ಇರಲೇಬೇಕು. ಕೆಲವು ಸೂ¾ಥಿ ಮತ್ತು ಪ್ರೋಟೀನ್ ಶೇಕ್ಸ್‌ಗಳು ಪೋಷಕಾಂಶಯುಕ್ತವಾಗಿವೆ. ಆದರೆ ಇವುಗಳಲ್ಲಿ ಕ್ಯಾಲೋರಿ ಮತ್ತು ಸಕ್ಕರೆ ಅಂಶಗಳು ಹೆಚ್ಚಿರುತ್ತವೆ. ಇವುಗಳಲ್ಲಿ ಸುಮಾರು 400ರಷ್ಟು ಕ್ಯಾಲೋರಿಗಳಿರುವ ಸಾಧ್ಯತೆಗಳಿರುವುದರಿಂದ ಆರೋಗ್ಯಕ್ಕೆ ಹಾಳು. – ಘನೀಕೃತ ಮೊಸರು
ಮೊಸರು ಆರೋಗ್ಯಕರ ಆಹಾರ. ಇದು ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಗಳನ್ನು ಶಮನಗೊಳಿಸಲು ಸಹಕರಿಸುತ್ತದೆ. ಕೆಲವು ಮೊಸರಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾ ಮತ್ತು ಕರುಳಿನ ಆರೋಗ್ಯಕ್ಕೆ ಪೂರಕವಾದ ಅಂಶಗಳಿರುವುದಿಲ್ಲ. ಕ್ಯಾಲೋರಿ ಅಂಶ ಕಡಿಮೆ ಮಾಡಲು ಮೊಸರಿನಲ್ಲಿರುವ ಕೊಬ್ಬನ್ನು ತೆಗೆದುಹಾಕಲಾಗುತ್ತದೆ. ಆಹಾರ ಕಂಪೆನಿಗಳು ಮೊಸರಿನ ರುಚಿ ಹೆಚ್ಚಿಸಲು ಸಕ್ಕರೆ ಸೇರಿಸುತ್ತಾರೆ. ಲೋ ಕ್ಯಾಲೋರಿ ಮೊಸರಿಗೆ ಸಕ್ಕರೆ ಬೆರೆಸಿರುತ್ತಾರೆ ಇದು ತೂಕ ಇಳಿಸುವ ಯೋಜನೆಗೆ ಹಾನಿ ಮಾಡಬಹುದು.
Related Articles
ಒಣಹಣ್ಣುಗಳು ಫೈಬರ್, ಜೀವಸತ್ವಗಳು ಮತ್ತು ಇತರ ಅತ್ಯಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಹೀಗಿದ್ದರೂ ಒಣ ಹಣ್ಣುಗಳು ತಾಜಾ ಹಣ್ಣುಗಳಿಗಿಂತ ಸಿಹಿಯಾಗಿರುತ್ತದೆ. ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚಿರುವುದರಿಂದ ಒಣಹಣ್ಣುಗಳ ಬದಲಾಗಿ ತಾಜಾ ಹಣ್ಣಗಳು ಡಯೆಟ್ ಆಹಾರಗಳಿದ್ದರೆ ಉತ್ತಮ
Advertisement
– ಪ್ಯಾಕ್ ಮಾಡಿದ ಡಯೆಟ್ ಆಹಾರಡಯೆಟ್ ಕುಕ್ಕಿಸ್, ಚಿಪ್ಸ್ ಅಥವಾ ಯಾವುದೇ ಆಹಾರ ಪದಾರ್ಥಗಳಾಗಿರಲಿ ಪ್ಯಾಕ್ ಮಾಡಿರುವ ಆಹಾರಗಳೆಲ್ಲವೂ ಆರೋಗ್ಯಕ್ಕೆ ಉತ್ತಮವಲ್ಲ ಮತ್ತು ತೂಕ ಹೆಚ್ಚಿಸಲು ಕಾರಣವಾಗಿರುತ್ತವೆ. ಡಯೆಟ್ ಫುಡ್‌ಗಳು ಸಂರಕ್ಷಕಗಳು (ಪ್ರಿಸರ್ವೆಟಿವ್), ಅನಾರೋಗ್ಯಕರ ಕೊಬ್ಬು ಮತ್ತು ಕೃತಕ ಸಿಹಿಕಾರಕಗಳಿಂದ ಕೂಡಿರುವುದರಿಂದ ಆರೋಗ್ಯಕ್ಕೆ ಉತ್ತಮವಲ್ಲ. – ಡಯೆಟ್ ಸೋಡಾ
ಡಯೆಟ್ ಸೋಡಾ ತೂಕ ಹೆಚ್ಚಾಗುವುದಲ್ಲಿ ಸಂಬಂಧಿಸಿದೆಯೇ ಹೊರತು ತೂಕ ಇಳಿಕೆಗಲ್ಲ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಕರುಳಿನ ಬ್ಯಾಕ್ಟೀರಿಯಕ್ಕೂ ಪರಿಣಾಮ ಬೀರುತ್ತದೆ. - ಸಿಹಿಕಾರಕಗಳು
ಸಕ್ಕರೆಯ ಬದಲು ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯಕರ ಸಿಹಿಕಾರಕಗಳನ್ನು ಆರಿಸಿಕೊಳ್ಳಬಹುದು. ಆದರೆ ಇದು ಆರೋಗ್ಯಕ್ಕೆ ಉತ್ತಮವಲ್ಲ. ಸಿಹಿಕಾರಕಗಳು ತೂಕ ಹೆಚ್ಚಲು ಕಾರಣವಾಗಿವೆ. ತೂಕ ಇಳಿಸಿಕೊಳ್ಳ ಬಯಸುವವರು ಸಕ್ಕರೆಯ ಸೇವನೆಗೆ ಕತ್ತರಿ ಹಾಕುವುದು ಒಳ್ಳೆಯದು. ಪ್ರೋಟೀನ್ ಬಾರ್
ತ್ವರಿತ ಶಕ್ತಿಗಾಗಿ ಅನೇಕ ಜನರು ಪ್ರೋಟೀನ್ ಬಾರ್‌ಗಳಿಗೆ ಅವಲಂಬಿತರಾಗಿದ್ದಾರೆ. ಎಲ್ಲ ಪ್ರೋಟೀನ್ ಬಾರ್‌ಗಳು ಅನಾರೋಗ್ಯಕರವಲ್ಲ. ಆದರೆ ಕೆಲವು ಬಾರ್‌ಗಳು ಹೆಚ್ಚು ಕ್ಯಾಲೋರಿ ಮತ್ತು ಕೃತಕ ಪದಾರ್ಥಗಳನ್ನು ಹೊಂದಿವೆೆ. ಹೀಗಾಗಿ ಪ್ರೋಟೀನ್ ಬಾರ್‌ಗಳ ಆಯ್ಕೆ ಮಾಡುವಾಗ ಎಚ್ಚರ ವಹಿಸಬೇಕು. - ರಮ್ಯಾ ಕೆದಿಲಾಯ