ನೆಲಮಂಗಲ: ಬೆಕ್ಕಿಗೆ ಚೆಲ್ಲಾಟವಾದರೆ, ಇಲಿಗೆ ಪ್ರಾಣ ಸಂಕಟ ಎಂಬ ಗಾದೆ ತಾಲೂಕಿನ ವಾಹನ ಸವಾರರು ಮತ್ತು ಕೆಲ ಪೊಲೀಸರಿಗೆ ಸರಿಯಾಗಿ ಅನ್ವಯಿಸುತ್ತದೆ.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟರ್ ವಾಹನಗಳ ತಿದ್ದುಪಡಿ ಕಾಯ್ದೆ ಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ತಾಲೂಕಿನ ಕೆಲ ಪೊಲೀಸರು, ಅಕ್ರಮವಾಗಿ ಸಾರ್ವಜನಿಕರಿಂದ ಹಗಲಲ್ಲೇ ದುಡ್ಡು ಕೊಳ್ಳೆ ಹೊಡೆಯುವ ಮೂಲಕ, ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದ್ದಾರೆ.
ಕೇಂದ್ರ ಸರ್ಕಾರದ ಹೊಸ ಮೋಟಾರ್ ಕಾಯ್ದೆಯಿಂದ ದಂಡ ಹೆಚ್ಚಳವಾಗಿ, ವಾಹನ ಸವಾರರ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂಬ ಸಾರಿಗೆ ಇಲಾಖೆ ಮೇಲಾಧಿಕಾರಿಗಳ ಮಾತು ನಿಜವಾದರೂ, ವಾಸ್ತವದಲ್ಲಿ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಇಲಾಖೆ ಖಜಾನೆಗೆ ಸೇರಬೇಕಾದ ದಂಡದ ಹಣ ಭ್ರಷ್ಟ ಪೊಲೀಸರ ಜೇಬು ಸೇರುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ತಾಲೂಕಿನಾದ್ಯಂತ ಜುಲೈ ತಿಂಗಳಲ್ಲಿ 4095 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದರೆ, ಅಕ್ಟೋಬರ್‌ನಲ್ಲಿ 1214 ಪ್ರಕರಣ ದಾಖಲಾಗಿದೆ, ಇದೇ ರೀತಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಕೆಲ ಪೊಲೀಸರು ದಂಡ ಪಡೆದು ರಶೀದಿ ನೀಡದೆ ವಾಹನ ಸವಾರರನ್ನು ಬೆದರಿಸಿ ಕಳುಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ದಂಡಕ್ಕೆ ರಶೀದಿ ಇಲ್ಲ: ಸಂಚಾರಿ ಪೊಲೀಸರು ವಾಹನ ಸವಾರರನ್ನು ತಡೆದು ದಾಖಲಾತಿ ಪರಿಶೀಲಿಸುವಾಗ ವಿಮೆ, ಅಜ್ಞೆನ ಪರವಾನಮನೆಯಲ್ಲಿ ಬಿಟ್ಟಿದ್ದೇನೆ ಸರ್, ಮೊಬೈಲ್‌ನಲ್ಲಿ ಸಾಪ್ಟ್ ಕಾಫಿ ಇದೆ ನೋಡಿ ಎಂದರೆ 2500 ರಿಂದ 3 ಸಾವಿರ ದಂಡ ಕಟ್ಟಬೇಕು ಇಲ್ಲಾ ಎಂದರೆ ಗಾಡಿ ಪೊಲೀಸ್ ಠಾಣೆಗೆ ಹಾಕುತ್ತೇನೆ ಎಂದು ಎದುರಿಸುವುದು, ನಂತರ 500 ರಿಂದ 700 ಹಣ ಪಡೆದು ರಶೀದಿ ನೀಡದೆ ಕಳುಸುತ್ತಿರುವ ಘಟನೆ ಎನ್.ಎಚ್4 ಪಾರ್ಲೆ ಕಂಪನಿ ಸಮೀಪದ ನವಯುಗ ಟೋಲ್ ಬಳಿಯ ನಾಗಸಂದ್ರ ಬಳಿ ಪೀಣ್ಯ ಸಂಚಾರಿ ಪೊಲೀಸರಿಂದ ನಡೆಯುತಿದ್ದು, ವಾಹನ ಸವಾರರು ನರಕಯಾತನೆ ಅನುಭಸುವಂತಾಗಿದೆ.
ಮಾನವೀಯತೆ ಮರೆತ ಆರೋಪ: ಹೊಸ ನಿಯಮ ಹೆಚ್ಚು ದಂಡ ಮನಗಂಡಿರುವ ಕೆಲ ಪೊಲೀಸರು ವಾಹನ ಸವಾರರಿಗೆ ಎದುರಿಸುವ ಮೂಲಕ ರಶೀದಿ ನೀಡದೆ ದಂಡದ ಹಣಕ್ಕಿಂತ ಕಡಿಮೆ ಪಡೆದು ಕಳುಹಿಸುತಿದ್ದಾರೆ, ದಾಖಲಾತಿ ಮರೆತು ಮೊಬೈಲ್‌ನಲ್ಲಿ ಸಾಪ್ಟ್ಕಾಫಿ ತೋರಿಸಿದರು ನಿಯಮವನ್ನು ಗಾಳಿಗೆ ತೂರಿ ದಂಡದ ಬದಲು ತಮ್ಮ ಜೇಬಿಗೆ ಹಣ ಪಡೆಯುತಿದ್ದಾರೆ, ತಾಯಿಗೆ ಕಾಯಿಲೆ ಆಸ್ಪತ್ರೆಗೆ ಕರೆದು ಕೊಂಡು ಹೋಗಬೇಕು ಆಸ್ಪತ್ರೆಯ ದಾಖಲಾತಿ ನೋಡಿ ಸರ್ ಎಂದರು ಮಾನವೀಯತೆಯಿಲ್ಲದೆ ಹಣ ಪಡೆಯುವ ಪೊಲೀಸರು ಪೀಣ್ಯಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹೆಚ್ಚಾಗಿದ್ದಾರೆ ಎಂದು ವಾಹನಸವಾರರು ಆರೋಪಿಸಿದ್ದಾರೆ.
ವಾಹನಸವಾರ ರಘು ತಾವರೆಕೆರೆ ಪ್ರತಿಕ್ರಿಯಿಸಿ ಬೆಂಗಳೂರಿನಿಂದ ಬರುವಾಗ ನಾಗಸಂದ್ರ ಬಳಿ ಪೀಣ್ಯ ಸಂಚಾರಿ ಪೊಲೀಸರು ತಡೆದರು, ತಾಯಿಗೆ ಉಷಾರಿಲ್ಲದ ಕಾರಣ ಬೇಗ ಬರುವಾಗ ಡಿಎಲ್ ಮರೆತು ಬಂದಿದ್ದೆ, ಮತ್ತೆ ಎಲ್ಲಾ ದಾಖಲಾತಿ ಇತ್ತು, ಡಿ.ಎಲ್‌ಕಾಫಿ ಮೊಬೈಲ್‌ನಲ್ಲಿರುವುದನ್ನು ನೋಡಿದರು, ಹೋಗಿ ತೆಗೆದುಕೊಂಡು ಬಾ ಇದು ಹಾಗಲ್ಲ ಎಂದು 700 ಹಣ ಪಡೆದರು, ರಶೀದಿ ಕೇಳಿದರೆ ಐದಾರು ಸಾವಿರ ದಂಡ ಕಟ್ಟಬೇಕಾಗುತ್ತದೆಂದು ಎದುರಿಸಿದರು, ವಿಧಿಯಿಲ್ಲದೆ ನೀಡಬೇಕಾಯಿತು ಎಂದರು.
ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚೆನ್ನಣ್ಣನವರ್ ಪ್ರತಿಕ್ರಿಯಿಸಿ ವಾಹನ ಸವಾರರಿಗೆ ಹೆಚ್ಚಿನ ದಂಡ ಹಾಕಿರುವುದು ಪ್ರಕರಣಗಳು ಕಡಿಮೆಯಾಗಿ ಅಪರಾಧಗಳು ನಿಲ್ಲಬೇಕು ಎಂಬ ಉದ್ದೇಶದಿಂದ ಮಾತ್ರ, ಆದರೆ ಕೆಲ ಪೊಲೀಸರು ನಿಯಮಕ್ಕೆ ವಿರುದ್ದವಾಗಿ ನಡೆದು ಕೊಳ್ಳುತಿದ್ದರೆ ತಕ್ಷಣ ಕ್ರಮ ಕೈ ಗೊಳ್ಳಲಾಗುತ್ತದೆ, ಸಂಚಾರಿ ಪೊಲೀಸರ ವಿಚಾರಿಸಿ ಮಾಹಿತಿ ಪಡೆದು ಕೊಳ್ಳುತ್ತೇನೆ ಎಂದರು.
* ಕೊಟ್ರೇಶ್.ಆರ್