ಸೋಮವಾರಪೇಟೆ: ವಿವಿಧ ದೇಗುಲಗಳಲ್ಲಿ ಸೋಮವಾರ ಬೆಳಗ್ಗಿನಿಂದಲೇ ಶಿವರಾತ್ರಿ ವಿಶೇಷ ಪೂಜೆಗಳು ನಡೆಯಿತು.
ಸಮೀಪದ ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಸುತ್ತಲಿನ ಗ್ರಾಮಸ್ಥರು ಸೇರಿ, ಪೂಜೆ ಸಲ್ಲಿಸಿ, ಬಳಿಕ ಮಾಲಂಬಿ ಬೆಟ್ಟದಲ್ಲಿರುವ ಮಳೆ ಮಲ್ಲೇಶ್ವರ ದೇವಾಲಯಕ್ಕೆ ತೆರಳಿ, ಗ್ರಾಮದ ಸಮೃದ್ಧಿ ಹಾಗು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ರಾತ್ರಿ ದೇವಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಹಾಗು ಯಕ್ಷಗಾನ ಬಯಲಾಟ ನಡೆಯಿತು.
ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯ, ಶಾಂತಳ್ಳಿ ಕುಮಾರ ಲಿಂಗೇಶ್ವರ ದೇವಾಲಯ, ತಾಕೇರಿ ಹಾಗು ಬಿಳಿಗೇರಿ ಗ್ರಾಮದ ಉಮಾ ಮಹೇಶ್ವರ, ಕಿರಗಂದೂರು ಈಶ್ವರ ದೇವಾಲಯ, ಅರಿಸಿನಗುಪ್ಪೆ ಮಂಜುನಾಥ ದೇವಾಲಯ, ತಣ್ಣೀರುಹಳ್ಳದ ಬಸವೇ ಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ಕಾರ್ಯಕ್ರಮಗಳು ನಡೆಯಿತು. ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಪೂಜೆಯನ್ನು ನೆರವೇರಿಸಲಾಯಿತು. ಸಂಜೆ ಮೈಸೂರಿನ ವೆಂಕಟೇಶ್ ತಂಡದವರಿಂದ ಭಜನೆ ನಡೆಯಿತು. ಮಹಿಳೆ ಮತ್ತು ಯುವತಿಯರು ತಮ್ಮ ಇಷ್ಟಾರ್ಥಗಳನ್ನು ಸೋಮೇಶ್ವರ ದೇವಾಲಯದ ಶಿವನ ಮೂರ್ತಿಯ ಮುಂಭಾಗದಲ್ಲಿರುವ ಬಸವ ಮೂರ್ತಿಯ ಕಿವಿಯಲ್ಲಿ ನಿವೇದಿಸಿಕೊಂಡರು.
ಹಿರಿಕರ ಮಲ್ಲೇಶ್ವರ ದೇವಾಲಯ, ಕೂಗೂರಿನ ಪಂಚಲಿಂಗೇಶ್ವರ ದೇವಾ ಲಯ, ಬಸವನಕೊಪ್ಪದ ಬಸವೇಶ್ವರ ದೇವಾಲಯ, ಸೋಮವಾರಪೇಟೆಯ ಸೋಮೇಶ್ವರ, ಬಸವೇಶ್ವರ ದೇವಾ ಲಯಗಳಲ್ಲಿ ರಾತ್ರಿ ಪೂಜಾ ಕಾರ್ಯಕ್ರಮಗಳು ನಡೆದವು.
ಅರಿಸಿನಗುಪ್ಪೆ ಮಂಜುನಾಥ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಿತು. ಸೋಮವಾರ ುಹಾಗಣಪತಿ ಹೋಮ, ತೈಲಾಭಿಷೇಕ, ಕ್ಷೀರಾಭಿಷೇಕ, ಕಬ್ಬಿನ ಹಾಲಿನ ಅಭಿಷೇಕ ನಡೆಯಿತು. ತೃತೀಯಯಾಮ ಮತ್ತು ಎಳನೀರು ಅಭಿಷೇಕ ನಡೆಯಿತು.