Advertisement

ಸೋಮಾಲಿಯ ಆರ್ಮಿ ಸಾಹಸ; ಕಡಲ್ಗಳ್ಳರು ಅಪಹರಿಸಿದ್ದ 8 ಭಾರತೀಯರ ರಕ್ಷಣೆ

06:10 PM Apr 12, 2017 | Sharanya Alva |

ಮೊಗಾದಿಶು: ಕಡಲ್ಗಳ್ಳರಿಂದ ಅಪಹರಿಸಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ 8 ಮಂದಿ ಭಾರತೀಯರನ್ನು ಸೋಮಾಲಿಯಾ ಮಿಲಿಟರಿ ಪಡೆ ಸುರಕ್ಷಿತವಾಗಿ ರಕ್ಷಿಸಿರುವುದಾಗಿ ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಳೆದ ವಾರ ಭಾರತೀಯ ಹಡಗಿನ 8 ಮಂದಿ ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದರು. 8 ಮಂದಿಯನ್ನು ಹೈಬೋ ನಗರದ ಹೊರವಲಯದ ಸಣ್ಣ ಗ್ರಾಮದಲ್ಲಿ ಕಡಲ್ಗಳ್ಳರು ಅಡಗಿಸಿಟ್ಟಿದ್ದು, ಸ್ಥಳೀಯ ಸೋಮಾಲಿಯ ಪಡೆ ದಾಳಿ ನಡೆಸಿ ಭಾರತೀಯರನ್ನು ರಕ್ಷಿಸಿರುವುದಾಗಿ ನಗರದ ಮೇಯರ್ ಅಬ್ದುಲ್ಲಾಹಿ ಅಹ್ಮದ್ ಅಲಿ ತಿಳಿಸಿರುವುದಾಗಿ ವರದಿ ಹೇಳಿದೆ.

ಸೋಮಾಲಿಯ ಮಿಲಿಟರಿ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಕಡಲ್ಗಳ್ಳರನ್ನು ಬಂಧಿಸಿದೆ. ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ ಎಲ್ಲಾ ಭಾರತೀಯ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಒಟ್ಟು ಹತ್ತು ಮಂದಿ ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದರು.

ರಕ್ಷಣಾ ಪಡೆಗಳು ತಮ್ಮನ್ನು ಬೆನ್ನಟ್ಟಿ ಬರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಸಿಬ್ಬಂದಿಗಳನ್ನು ತುಂಬಾ ದೂರಕ್ಕೆ ಕರೆದೊಯ್ದಿದ್ದರು. ಭಾರತೀಯ ಸಿಬ್ಬಂದಿಗಳು ಆಹಾರ, ನೀರು ಸಿಗದೆ ಹಸಿವಿನಿಂದ ಕಂಗೆಟ್ಟಿದ್ದರು ಎಂದು ಮೇಯರ್ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next