Advertisement

ನೀರಿನ ಸಮಸ್ಯೆ ಬಗೆಹರಿಸಿ

03:42 PM May 09, 2019 | pallavi |

ಯಲಬುರ್ಗಾ: ಪಟ್ಟಣದ 3ನೇ ವಾರ್ಡ್‌ನಲ್ಲಿ 15 ದಿನಗಳಿಂದ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದರೂ ಪಪಂ ಅಧಿಕಾರಿಗಳು ಪರಿಹಾರಕ್ಕೆ ಮುಂದಾಗಿಲ್ಲ. ಈ ಕುರಿತು ಗಮನಕ್ಕೆ ಇದ್ದರೂ ಅಧಿಕಾರಿಗಳು ನಿರ್ಲಕ್ಷ ್ಯ ವಹಿಸಿದ್ದಾರೆ ಎಂದು ಆರೋಪಿಸಿ ಬುಧವಾರ ವಾರ್ಡ್‌ ನಿವಾಸಿಗಳು ಪಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿನೆ ನಡೆಸಿದರು.

Advertisement

3ನೇ ವಾರ್ಡಿನ ಸದಸ್ಯ ರಿಯಾಜ್‌ ಖಾಜಿ ಮಾತನಾಡಿ, 3ನೇ ವಾರ್ಡ್‌ನಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಕುಡಿಯುವ ನೀರಿಗಾಗಿ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಪಪಂ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದನೆಗೆ ಮುಂದಾಗುತ್ತಿಲ್ಲ. ಇನ್ನೂ ಈ ವಾರ್ಡ್‌ನ ಮಾರುತಿ ದೇವಸ್ಥಾನದ ಹಿಂಬಂದಿಯಿಂದ ಈಗಾಗಲೇ ಲಕ್ಷಾಂತರ ರೂ. ವೆಚ್ಚ ಮಾಡಿ ಪೈಪ್‌ಲೈನ್‌ ಮಾಡಲಾಗಿದೆ. ವರ್ಷ ಕಳೆದರೂ ನಲ್ಲಿ ಸಂಪರ್ಕ ಕೊಡುವಲ್ಲಿ ನಿರ್ಲಕ್ಷ ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಕುಷ್ಟಗಿ ರಸ್ತೆ ಪ್ರಶಾಂತ ನಗರದ ರಸ್ತೆಯುದ್ಧಕ್ಕೂ ಚರಂಡಿ ನಿರ್ಮಿಸಿದ್ದಾರೆ. ಆದರೆ ಬಹಳ ಎತ್ತರಕ್ಕೆ ಚರಂಡಿ ನಿರ್ಮಾಣ ಮಾಡಿದ್ದರಿಂದ ವಯೋವೃದ್ಧರು, ಮಕ್ಕಳು, ಮಹಿಳೆಯರಿಗೆ ತೊಂದರೆಯಾಗಿದೆ. ಆಯಾ ರಸ್ತೆಗೆ ಸಮರ್ಪಕವಾಗಿ ಕಾಂಕ್ರೀಟ್ ನಿರ್ಮಿಸಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವಂತೆ ಸಾಕಷ್ಟು ಬಾರಿ ಪಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ವಾರ್ಡ್‌ನ ನಿವಾಸಿ ಶರಣಪ್ಪ ಖಾನಾವಳಿ ಮಾತನಾಡಿ, ಪಪಂ ಮುಖ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರುವುದಿಲ್ಲ. ನಮ್ಮ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳ‌ಬೇಕು. ಕುಡಿಯುವ ನೀರಿನ ಸಮಸ್ಯೆ ಹೇಳತೀರದ್ದಾಗಿದೆ. ಸದಸ್ಯರೇ ಮುಖ್ಯಾಧಿಕಾರಿಗಳಿಗೆ ಫೋನ್‌ ಮಾಡಿದರೂ ಸಮಸ್ಯೆ ಆಲಿಸುತ್ತಿಲ್ಲ. ಇನ್ನೂ ಜನಸಾಮಾನ್ಯರ ಗೋಳು ಕೇಳುವವರಿಲ್ಲದಾಗಿದೆ. ಪಟ್ಟಣದಲ್ಲಿ ಸಾಕಷ್ಟು ಬೀದಿ ದೀಪಗಳು ಕೆಟ್ಟಿದ್ದರೂ ಅವುಗಳನ್ನು ದುರಸ್ತಿ ಮಾಡಲು ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಪಂ ಇಂಜನಿಯರ್‌ ಉಮೇಶ ವಾಲಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ, ಮುಖ್ಯಾಧಿಕಾರಿಗಳು ಜಿಲ್ಲಾಕಾರಿಗಳ ಸಭೆಗೆ ಹೋಗಿದ್ದಾರೆ. ಆವರು ಬಂದ ನಂತರ ಅವರೊಂದಿಗೆ ಚರ್ಚಿಸಿ ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.

Advertisement

ಶರಣಯ್ಯ ಸಾಲಿಮಠ, ಮೋದಿನಸಾಬ್‌ ನಾಯಕ, ಶರಣಪ್ಪ ಉಳ್ಳಾಗಡ್ಡಿ, ಮಹಮ್ಮದ ಗೌಸ್‌, ಶರಣಬಸಪ್ಪ ಹೂಗಾರ, ರಾಜಶೇಖರ ಮುಧೋಳ, ದೇವಪ್ಪ ಛಲವಾದಿ, ಹನುಮಗೌಡ ಹೊಸಪೇಟೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next