ಆಲೂರು: ಸರ್ಕಾರ ಮೀನುಗಾರಿಕೆ ಇಲಾಖೆಗೆ ಹೆಚ್ಚು ಅನುದಾನ ನೀಡುವುದರ ಮೂಲಕ ಮೀನುಗಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಜಿಪಂ ಸದಸ್ಯ ಲೋಕೇಶ್ ಹೊಸಪುರ ಹೇಳಿದರು.
ಪಟ್ಟಣದ ಮೀನುಗಾರಿಕೆ ಇಲಾಖೆ ಆವರಣದಲ್ಲಿ ಫಲಾನುಭವಿಗಳಿಗೆ ಜಿಪಂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಮೀನುಗಾರಿಕೆ ಉಪಕರಣಗಳನ್ನು ವಿತರಿಸಿ ಮಾತನಾಡಿದರು.
ಸಮಗ್ರ ಮೀನು ಸಾಕಣೆಯಿಂದ ರೈತರಿಗೆ ಮೂಲ ಕಸುಬಿನ ಜತೆ ಆರ್ಥಿಕ ಸುಧಾರಣೆ ಆಗುವುದರಿಂದ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಕಡಿಮೆಯಾಗುತ್ತದೆ. ಮೀನಿನ ಸಾಕಣೆಯ ಹಿಂದೆ ಹಲವು ಉದ್ಯಮಗಳು ತೆರೆದುಕೊಳ್ಳುತ್ತದೆ. ಮೀನು ಸಾಕಣೆ,ಮೀನಿನ ಆಹಾರೋ ತ್ಪನ್ನಗಳು ಹಾಗೂ ಮಾರಾಟ ಕೇಂದ್ರ, ಮೀನಿನ ಶುದ್ಧೀಕರಣ ಹಾಗೂ ಶಿಥಲೀಕರಣ, ರಫ್ತು ಉದ್ಯಮಗಳ ಬೆಳವಣಿಗೆಗೆ ಮೀನು ಸಾಕಣೆ ಸಹಕಾರಿ ಯಾಗುತ್ತದೆ ಅದ್ದರಿಂದ ಸರ್ಕಾರ ಮೀನುಗಾರಿಕೆ ಇಲಾಖೆಗೆ ಹೆಚ್ಚು ಅನುದಾನ ನೀಡುವುದರ ಮೂಲಕ ಮೀನು ಗಾರರ ಸಮಸ್ಯೆಗಳಿಗೆ ಸಹಕರಿಸಲು ಮುಂದಾಬೇಕು ಎಂದರು.
ತಾಲೂಕಿನಲ್ಲಿ ಯಗಚಿ, ಹೇಮಾವತಿಮತ್ತು ವಾಟೆಹೊಳೆ ನದಿಗಳು ಹರಿಯುತ್ತಿವೆ. ನದಿಗಳ ದಡ ವ್ಯಾಪ್ತಿಯಲ್ಲಿ ಮೀನುಗಾರಿಕೆ ಅವಲಂಬಿ ಸಿರುವ ಹಲವು ಕುಟುಂ ಬಗಳು ವಾಸ ಮಾಡುತ್ತಿ ದ್ದಾರೆ. ಇವರು ತಮ್ಮ ಕುಟುಂಬದ ಅಭಿವೃದ್ಧಿಗೆ ಮೀನುಗಾರಿಕೆ ಅವಲಂಬಿಸಿದ್ದಾರೆ. ಪಾಳ್ಯ, ಕುಂದೂರು ಮತ್ತು ಕೆಂಚಮ್ಮನ ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಇಂಥ ಹೆಚ್ಚು ಕುಟುಂಬಗಳಿವೆ. ಉಪಕರಣಗಳನ್ನು ಪಡೆದಿರುವ ಫಲಾನುಭವಿಗಳು ಜಾಗ್ರತೆ ಯಿಂದ ಮೀನು ಕೃಷಿ ಮಾಡಿ ತಮ್ಮ ಕೌಟುಂಬಿಕ ಆರ್ಥಿಕ ಅಭಿವೃದ್ಧಿ ಮಾಡಿ ಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಮಾತನಾಡಿ, ಆಸಕ್ತಿ ಇರುವವರು ಮೀನುಗಾರಿಕೆ ಕೃಷಿಯಲ್ಲಿ ತೊಡಗಿ ಕೊಳ್ಳಲು ಅವಕಾಶವಿದೆ. ಈಗ ಪ.ಜಾತಿ ಮತ್ತು ಪಂಗಡಕ್ಕೆ ಸೇರಿರುವ ಆರು ಫಲಾನುಭವಿಗಳಿಗೆ ಹರಗಲು, ಬಲೆ ವಿತರಣೆ ಮಾಡಲಾಗುತ್ತಿದೆ. ರಾಜ್ಯ ಮತ್ತು ಜಿಲ್ಲಾ ವಲಯದಲ್ಲಿಯೂ ಫಲಾನುಭವಿಗಳಿಗೆ ಉಚಿತವಾಗಿ ವಿತರಣೆ ಮಾಡಲಾಗುವುದು ಎಂದರು. ತಾಪಂ ಸದಸ್ಯ ನಟರಾಜ್ ನಾಕಲಗೂಡು, ಜಿಪಂ ಸದಸ್ಯ ರಾಜನಾಯಕ್, ದಲಿತ ಮುಖಂಡ ಅರಸಯ್ಯ ಹಾಗೂ ಫಲಾನುಭವಿಗಳು ಇತರರು ಇದ್ದರು.