Advertisement
ಶೀಘ್ರ ಹೆದ್ದಾರಿ ಗುಂಡಿ ಮುಚ್ಚಿಮಂಗಳೂರು-ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಶೋಚನೀಯವಾಗಿದ್ದು, ಗುಂಡಿಮಯ ಹೆದ್ದಾರಿಯಲ್ಲಿ ಪ್ರಾಣಭಯದೊಂದಿಗೆ ಸಾಗಬೇಕಾದ ಅನಿವಾರ್ಯವಿದೆ. ಪ್ರತಿ ವರ್ಷ ಹೊಂಡ ಬಿದ್ದ ಜಾಗದಲ್ಲಿ ಪ್ಯಾಚ್ ವರ್ಕ್ ಮಾಡಿ, ಮಳೆಗಾಲದಲ್ಲಿ ಆ ಪ್ಯಾಚ್ ವರ್ಕ್ ಎದ್ದು ಹೋಗುವುದೇ ಸಮಸ್ಯೆಗೆ ಕಾರಣವಾಗಿದೆ. ಮಳೆಯ ಸಂದರ್ಭದಲ್ಲಿ ಎಲ್ಲಿ ಗುಂಡಿಗಳಿವೆ ಎಂದು ಗೊತ್ತಾಗದೆ, ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಅಪಾಯ ಮಾಡಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಗುಣಮಟ್ಟದ ರಸ್ತೆಗಳನ್ನು ಕಲ್ಪಿಸಿಕೊಡುವಲ್ಲಿ ಆಡಳಿತ ವ್ಯವಸ್ಥೆ ಮತ್ತು ಹೆದ್ದಾರಿ ಇಲಾಖೆ ತತ್‌ಕ್ಷಣ ಸ್ಪಂದಿಸಬೇಕು.
-ಮಂಜುನಾಥ, ದೈನಂದಿನ ಸವಾರರು
ಜೆಪ್ಪು ಕುಡುಪಾಡಿ ರಸ್ತೆಯಲ್ಲಿ ಸುದರ್ಶನ್ ನ್ಪೋರ್ಟ್ಸ್ ಕ್ಲಬ್ ಮುಂಭಾಗದಲ್ಲಿ ಒಳಚರಂಡಿ ನೀರು ರಸ್ತೆ ಮೇಲೆ ಹರಿದು ಜನರಿಗೆ ತೀರಾ ಸಮಸ್ಯೆ ತಂದೊಡ್ಡಿದೆ. ಗಬ್ಬು ವಾಸನೆಯಿಂದ ಕೂಡಿರುವ ನೀರಿನಿಂದಾಗಿ ಇಲ್ಲಿ ನಡೆದಾಡುವಾಗ ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ದೂರು ಸಲ್ಲಿಸಲಾಗಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಶೀಘ್ರ ಈ ಬಗ್ಗೆ ಕ್ರಮ ವಹಿಸಿ. .
-ಶಶಾಂಕ್ ಸ್ವರೂಪ್ ಸುವರ್ಣ, ಸ್ಥಳೀಯರು ಹದಗೆಟ್ಟ ರಸ್ತೆ ಸರಿಪಡಿಸಿ
ಕಪಿತಾನಿಯೋ ಸನಿಹದ ರೆಡ್ ಬಿಲ್ಡಿಂಗ್ ಲೇನ್ ರಸ್ತೆ ಮೂರು ತಿಂಗಳಿನಿಂದ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಮಳೆಯ ಸಂದರ್ಭದಲ್ಲಿ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳ ಪಾಲಿಗೆ ಈ ರಸ್ತೆ ಅಪಾಯವಾಗಿ ಪರಿಣಮಿಸಿದೆ. ಪಾಲಿಕೆಗೆ ರಸ್ತೆಯ ದು:ಸ್ಥಿತಿಯ ಬಗ್ಗೆ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಈ ರಸ್ತೆಯ ಕಡೆ ಗಮನಹರಿಸಿ ಜನರಿಗೆ ಗುಣಮಟ್ಟದ ರಸ್ತೆ ಕಲ್ಪಿಸಿಕೊಡಬೇಕು.
-ಫ್ರಾನ್ಸಿಸ್, ರೆಡ್ ಬಿಲ್ಡಿಂಗ್ ಸ್ಥಳೀಯರು
Related Articles
ಆರ್‌ಟಿಒ ಕಚೇರಿಯಿಂದ ಅಗ್ನಿಶಾಮಕ ಕಚೇರಿಗೆ ತೆರಳುವ ರಸ್ತೆಯ ಬದಿಯಲ್ಲಿ ತಳ್ಳುಗಾಡಿಯನ್ನು ಕೆಲವು ದಿನಗಳಿಂದ ನಿಲ್ಲಿಸಲಾಗಿದೆ. ಇದರಲ್ಲಿ ಯಾರೂ ಮಾರಾಟದಲ್ಲಿ ತೊಡಗಿರದಿ ರುವುದರಿಂದ ಗಾಡಿ ಹಾಗೆಯೇ ಬಿದ್ದುಕೊಂಡಿದೆ. ಖಾಲಿ ಸ್ಥಳವಾದ್ದರಿಂದ ಉಪ ಯೋಗರಹಿತವಾಗಿ ಈ ಗಾಡಿಯನ್ನು ಇಲ್ಲೇ ಬಿಡುವುದಕ್ಕಿಂತ ವಿಲೇ ಮಾಡಿದರೆ ಪಾರ್ಕಿಂಗ್ ಸ್ಥಳವಾಗಿ ಬಳಕೆ ಮಾಡಿಕೊಳ್ಳಬಹುದು. ಈ ಸ್ಥಳದ ಮುಂಭಾಗದಲ್ಲಿ ಬ್ಯಾಂಕ್ ಇರುವುದರಿಂದ ಬ್ಯಾಂಕಿಗೆ ಬರುವ ಗ್ರಾಹಕರ ವಾಹನ ನಿಲುಗಡೆಗೆ ಈ ಸ್ಥಳ ಉತ್ತಮ ತಾಣವಾಗಬಲ್ಲುದು.
-ಚಂದ್ರಮೋಹನ್, ಮಂಗಳೂರು
Advertisement
ಬಸ್ ನಿಲ್ದಾಣ ಕಲ್ಪಿಸಿಪಂಪ್ವೆಲ್-ತೊಕ್ಕೊಟ್ಟು ರಸ್ತೆಯಲ್ಲಿ ಬಸ್ ನಿಲ್ದಾಣ ಅವಶ್ಯವಾಗಿ ಬೇಕು. ಇಲ್ಲಿ ಜನರು ಬಸ್‌ಗಾಗಿ ಕಾಯುವಾಗ ಪರದಾಡುವ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ. ಚುನಾಯಿತ ಜನಪ್ರತಿನಿಧಿಗಳು ಜನರ ಸಮಸ್ಯೆ ಕಂಡೂ ಕಾಣದಂತೆ ಮೌನವಹಿಸಿರುವುದು ಸರಿಯಲ್ಲ. ತಾತ್ಕಾಲಿಕ ಬಸ್ ನಿಲ್ದಾಣ ಮಾಡಲೂ ಮಹಾನಗರ ಪಾಲಿಕೆ ಮನಸ್ಸು ಮಾಡುತ್ತಿಲ್ಲ. ವೃದ್ಧರು, ಮಹಿಳೆಯರು, ಮಕ್ಕಳು ಇಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡೇ ಬಸ್‌ಗೆ ರಸ್ತೆ ಬದಿಯಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ. ತತ್‌ಕ್ಷಣ ಇಲ್ಲಿ ಬಸ್ ನಿಲ್ದಾಣ ನಿರ್ಮಿಸಿ ಜನರ ಸಮಸ್ಯೆಯನ್ನು ಸ್ಥಳೀಯಾಡಳಿತ ನಿವಾರಿಸಬೇಕು.
-ಅರುಣ್ ಶೆಟ್ಟಿ , ಶಿರೂರು ತೊಟ್ಟಿಯಿಲ್ಲದೆ ರಸ್ತೆಯಲ್ಲೇ ಕಸ
ನಾಗುರಿಯಿಂದ ಮರೋಳಿ ಕಡೆಗೆ ಹೋಗುವ ದಾರಿ ಮಧ್ಯದ ಕ್ರಾಸ್‌ನಲ್ಲಿ ಕಸದ ತೊಟ್ಟಿಯ ವ್ಯವಸ್ಥೆ ಇಲ್ಲದಿದ್ದು, ಕಸವೆಲ್ಲ ರಸ್ತೆ ಬದಿಯಲ್ಲೇ ಬಿದ್ದಿರುತ್ತದೆ. ಈ ತ್ಯಾಜ್ಯವನ್ನು ಬೀದಿನಾಯಿಗಳು ಎಳೆದು ಹಾಕುತ್ತಿದ್ದು, ರಸ್ತೆಯಿಡೀ ಚೆಲ್ಲಾಪಿಲ್ಲಿಯಾಗಿ ಕಸ ಬಿದ್ದಿರುತ್ತದೆ. ಇದರಿಂದಾಗಿ ಇಲ್ಲಿ ಮೂಗು ಮುಚ್ಚಿಕೊಂಡೇ ನಡೆದಾಡಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಪಾಲಿಕೆ, ನಾಗುರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಕ್ರಮ ವಹಿಸುತ್ತೇವೆಂದು ತಿಳಿಸಿದ್ದಾರೆ. ಆದಷ್ಟು ಶೀಘ್ರ ಆ ಕೆಲಸ ಆಗಬೇಕು.
-ಮಾಲತಿ ಶೆಟ್ಟಿ, ಸ್ಥಳೀಯರು ಮ್ಯಾನ್‌ಹೋಲ್ ಅವ್ಯವಸ್ಥೆ
ಕುಲಶೇಖರ, ಕಕ್ಕೆಬೆಟ್ಟು, ಕುಚ್ಚಿಕಾರ್, ಗ್ರೀನ್ ಮೆಡಲ್ಸ್ ಲೇ ಔಟ್ ಬಳಿ ಮ್ಯಾನ್‌ಹೋಲ್ ಅವ್ಯವಸ್ಥೆಯಿಂದಾಗಿ ನೀರು ಹೊರಗೆ ಬಂದು ನಡೆದಾಡಲು ಕಷ್ಟವಾಗುತ್ತಿದೆ. ಕಳೆದೊಂದು ವರ್ಷದಿಂದ ಇಲ್ಲಿ ಇದೇ ಪರಿಸ್ಥಿತಿ ಇದ್ದು, ಸ್ಥಳೀಯ ಕಾರ್ಪೊರೇಟರ್ ಹಲವಾರು ಬಾರಿ ರಿಪೇರಿ ಮಾಡಲಾಗುವುದು ಎಂದು ಹೇಳಿದ್ದರೂ ಈ ವರೆಗೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ದಯವಿಟ್ಟು ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ.
– ಸ್ಥಳೀಯ ನಿವಾಸಿಗಳು ಇಲ್ಲಿಗೆ ಕಳುಹಿಸಿ
“ಸುದಿನ-ಜನದನಿ’ ವಿಭಾಗ, ಉದಯವಾಣಿ, ಮಾನಸ ಟವರ್, ಮೊದಲ ಮಹಡಿ, ಎಂಜಿ ರಸ್ತೆ, ಪಿವಿಎಸ್ ವೃತ್ತ ಸಮೀಪ, ಕೊಡಿಯಾಲಬೈಲ್, ಮಂಗಳೂರು-575003. ವಾಟ್ಸಪ್ ನಂಬರ್-9900567000. ಇ-ಮೇಲ್: mlr.sudina@udayavani.com