Advertisement
ಪರಿಷತ್‌ನಲ್ಲಿ ಬುಧವಾರ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕ ಚಿಂತನೆ ಹೊಂದಿದೆ ಎಂದು ತಿಳಿಸಿದರು.
Related Articles
Advertisement
ಆದೇ ರೀತಿ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಕೆಲ ಕಡೆಯಕಾಫಿ ಬೆಳೆಗಾರರ ಸಮಸ್ಯೆಯೂ ಇದೇ ಮಾದರಿಯದ್ದಾಗಿದ್ದು, ಇದರ ಪರಿಹಾರಕ್ಕೆ ಕೇರಳ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೆ ಜಮೀನನ್ನು 30 ವರ್ಷದ ಗುತ್ತಿಗೆಯಾಧಾರದಲ್ಲಿ ನೀಡಲು ಚಿಂತಿಸಲಾಗುತ್ತಿದೆ. ಜಮೀನು ಸರಕಾರಿಮಾಲಿಕತ್ವದಲ್ಲೇ ಇರಲಿದೆ ಎಂದು ಹೇಳಿದರು.
ಪಿ ಸರ್ವೇ ನಂಬರ್ ತೆಗೆದು ಹೊಸ ನಂಬರ್ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ರೈತರು ಉಳುಮೆ ಮಾಡುತ್ತಿರುವ ಸರ್ಕಾರಿ ಇಲ್ಲವೆ ಗೋಮಾಳ ಜಮೀನು ಪಿ ಸರ್ವೆ ನಂಬರ್ ತೆಗೆದು ಹೊಸ ಸರ್ವೇ ನಂಬರ್ ನೀಡಿಕೆ ನಿಟ್ಟಿನಲ್ಲಿ ನಮೂನೆ 6-10 ರವರೆಗಿನ ಭರ್ತಿಗೆ ಕೋಲಾರ ಜಿಲ್ಲೆಗೆ ವಿನಾಯಿತಿ ನೀಡಲಾಗಿದ್ದು, ಅದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್‌ನ ಎಂ.ಎಲ್.ಅನಿಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರಕಾರಿ ಅಥವಾ ಗೋಮಾಳ ಜಮೀನಿನಲ್ಲಿ ರೈತರು ಉಳುಮೆ ಮಾಡುತ್ತಿದ್ದರೆ, ಜಮೀನು ವಿಸ್ತೀರ್ಣ, ಪೋಡಿ ಮಾಡಬೇಕು. ನಮೂನೆ 1-5 ರವರೆಗಿನವುಗಳನ್ನು ಸಿದ್ಧಪಡಿಸಿ ಅಳತೆ ಮಾಡಿ, ಆಕಾರಬಂಧು ದುರಸ್ತಿಪಡಿಸಿ ಹೊಸ ಸರ್ವೇ ನಂಬರ್ ನೀಡಬೇಕಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಇಂತಹ 2,655 ಜಮೀನುಗಳಿಗೆ ನಮೂನೆ 1-5 ಸಿದ್ಧಪಡಿಸಲಾಗಿದ್ದು, ಅಲ್ಲಿ ನಮೂನೆ 6-10ಕ್ಕೆ ವಿನಾಯಿತಿ ನೀಡಲಾಗಿದೆ. ಇದೀಗ ಅದೇ ಮಾದರಿಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು. ನಕಲಿ ದಾಖಲೆ ಸೃಷ್ಟಿ ತಡೆಗೆ ಕ್ರಮ
ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಜಮೀನು, ಆಸ್ತಿ ಕುರಿತಾಗಿ ನಕಲಿ ದಾಖಲೆಗಳ ಸೃಷ್ಟಿ, ವಂಚನೆ ತಡೆ ನಿಟ್ಟಿನಲ್ಲಿ ಸರಕಾರ ಕೆ-2 ಎಂಬ ಯೋಜನೆ ಜಾರಿಗೊಳಿಸಿದ್ದು, ಜಮೀನಿನ ಮಾಲಿಕತ್ವ, ಅದರ ವಿಸ್ತರಣೆ ಮಾಹಿತಿಗಳನ್ನು ನೇರವಾಗಿ ಸಬ್ ರಿಜಿಸ್ಟರ್ ಕಚೇರಿಗಳಿಗೆ ರವಾನಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಪರಿಷತ್‌ನಲ್ಲಿ ಕಾಂಗ್ರೆಸ್‌ನ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿ, ಈ ಯೋಜನೆಯ ಪ್ರಾಯೋಗಿಕ ಕಾರ್ಯವನ್ನು ಬಳ್ಳಾರಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದ್ದು, ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.