Advertisement

ಪರಿಹಾರ ಪ್ರಕರಣ ಏಕಸದಸ್ಯ ಪೀಠದ ಆದೇಶ ರದ್ದು

06:43 AM Jan 03, 2019 | |

ಬೆಂಗಳೂರು: ನಗರದ ಕೆ.ಪಿ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ಗುತ್ತಿಗೆ ನೌಕರನೊಬ್ಬ “ಮ್ಯಾನ್‌ ಹೋಲ್‌’ಗೆ ಬಿದ್ದು ಮೃತಪಟ್ಟಿದ್ದ ಪ್ರಕರಣದಲ್ಲಿ 10ಲಕ್ಷ ರೂ. ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್‌ನ ಏಕಸದಸ್ಯಪೀಠ ನೀಡಿದ್ದ ಆದೇಶವನ್ನು ಬುಧವಾರ ವಿಭಾಗೀಯಪೀಠ ರದ್ದುಗೊಳಿಸಿದೆ.

Advertisement

ಈ ಕುರಿತಂತೆ ಬಿಬಿಎಂಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾ. ಎಲ್‌. ನಾರಾಯಣಸ್ವಾಮಿ ಹಾಗೂ ನ್ಯಾ. ಅಶೋಕ್‌ ನಿಜಗಣ್ಣನವರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ವಿಚಾರಣೆ ವೇಳೆ ಬಿಬಿಎಂಪಿ ಪರ ವಾದ ಮಂಡಿಸಿದ ವಕೀಲರಾದ ಕೆ.ಎನ್‌. ಪುಟ್ಟೇಗೌಡ, ಮೃತ ಕಾರ್ಮಿಕ ಪಾಲಿಕೆಯ ಕಾಯಂ ಸಿಬ್ಬಂದಿಯಲ್ಲ, ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೇಲಾಗಿ ಅವರಿಗೆ ಮ್ಯಾನ್‌ಹೋಲ್‌ ಸ್ವತ್ಛಗೊಳಿಸುವ ಕೆಲಸ ವಹಿಸಲಾಗಿರಲಿಲ್ಲ.

ಅವರ ಸಾವಿಗೆ ಅವರ ನಿರ್ಲಕ್ಷ್ಯವೇ ಕಾರಣ. ಜತೆ ಅವರಿಗೆ 75ವರ್ಷ ವಯಸ್ಸಾಗಿತ್ತು. ಆದಾಗ್ಯೂ, ಮಾನವೀಯ ನೆಲೆಯಲ್ಲಿ ಪಾಲಿಕೆ 2 ಲಕ್ಷ ರೂ. ಪರಿಹಾರ ನೀಡಿದೆ. ಆದರೆ, ಏಕಸದಸ್ಯ ಪೀಠ ಸಫಾಯಿ ಕರ್ಮಚಾರಿ ಕಾಯ್ದೆ ಅನ್ವಯ ಹಾಗೂ ಸುಪ್ರೀಂಕೋರ್ಟ್‌ ನಿರ್ದೇಶನದಂತೆ 10 ಲಕ್ಷ ರೂ. ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಂತೆ ಆದೇಶಿಸಿದೆ ಎಂದು ನ್ಯಾಯಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಕೆ.ಪಿ. ಅಗ್ರಹಾರದಲ್ಲಿ 2014ರ ಜ.18ರಂದು ಗುತ್ತಿಗೆ ನೌಕರ ಚೆನ್ನಯ್ಯ ಮ್ಯಾನ್‌ಹೋಲ್‌ ಸ್ವತ್ಛಗೊಳಿ ಸುತ್ತಿದ್ದ ವೇಳೆ ಸಾವಿಗೀಡಾಗಿದ್ದರು. ಪರಿಹಾರ ಕೋರಿ ಆತನ ಪತ್ನಿ ಚಿನ್ನಮ್ಮ ಹಾಗೂ ಮಕ್ಕಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 10ಲಕ್ಷ ರೂ. ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ 2016ರಲ್ಲಿ ಏಕಸದಸ್ಯಪೀಠ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಬಿಬಿಎಂಪಿ ಮೇಲ್ಮನವಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next