Advertisement

ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

01:17 PM Feb 21, 2018 | |

ವಿಜಯಪುರ: ಕರ್ನಾಟಕ ಲಲಿತ ಕಲಾ ಅಕಾಡೆಮಿ ಸಹಾಯ ಧನದಲ್ಲಿ ಫೆ. 24ರಂದು ಧಾರವಾಡದಲ್ಲಿ ಯುವ ಕಲಾವಿದ ವರ್ಧಮಾನ ಕೇದ್ರಾಪುರ ಇವರ ಏಕವ್ಯಕ್ತಿ ಚಿತ್ರಕಲಾ ಕೃತಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

Advertisement

ಧಾರವಾಡದ ಸರ್ಕಾರಿ ಸರಕಾರಿ ಚಿತ್ರಕಲಾ ಆರ್ಟ್‌ ಗ್ಯಾಲರಿಯಲ್ಲಿ ಅಂದು ಬೆಳಗ್ಗೆ 10:30ಕ್ಕೆ ಚಿತ್ರಕಲಾ ಪ್ರದರ್ಶನಕ್ಕೆ ಹಿರಿಯ ಕಲಾವಿದ ಎಂ.ಆರ್‌. ಬಾಳಿಕಾಯಿ ಚಾಲನೆ ನೀಡಲಿದ್ದು, ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಎಫ್‌.ವಿ. ಚಿಕ್ಕಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕಲಾವಿದ ಡಾ| ಪಿ.ಎಸ್‌. ಕಡೆಮನಿ, ಬಿ.ಎಚ್‌. ಕುರಿ ಪಾಲ್ಗೊಳ್ಳಲಿದ್ದಾರೆ. 

ವಿಜಯಪುರ ಜಿಲ್ಲೆಯ ಸಿದ್ದಾಪುರ (ಕೆ) ಗ್ರಾಮದ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿರುವ ವರ್ಧಮಾನ ಅವರು, ಹಲವು ಚಿತ್ರಕಲೆ ಪ್ರದರ್ಶನದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದು ಬಹುಮಾನ-ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇವರು ರಚಿಸಿದ ಕಲಾಕೃತಿ ಕೃಷ್ಣನ ಬಾಲ್ಯ ಲೀಲೆಗಳು, ಪ್ರೇಮಿ, ಕನಸು, ತ್ರಿ ಇಡಿಯಟ್‌, ಹಾಳು ಗೇಡಿಸುವ ಮಂಗ, ಬೀದಿಯ ಮಗು, ಇಂದಿನ ರಾಜಕೀಯ, ನೀರಿಗಾಗಿ ಪರದಾಡುವ ಕಾಗೆ ಹಾಗೂ ಮಂಗಗಳು, ಹಳ್ಳಿಯ ಬದುಕು,
ಡೊಳ್ಳು ಕುಣಿತ, ನದಿಯಲ್ಲಿ ಸ್ನಾನ ಮಾಡಿ ಪುಡಿಯಿಂದ ದೇವಾಲಯಕ್ಕೆ ಹೋಗುತ್ತಿರುವ ಮಹಿಳೆ ಶಿಲೆ ಮತ್ತು ಮಹಿಳೆ ಮುಂತಾದ ಕಲಾಕೃತಿಗಳು ಸದರಿ ಪ್ರದರ್ಶನದಲ್ಲಿ ಬೆಳಕು ಕಾಣಲಿರುವ ಕಲಾಕೃತಿಗಳಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next