ಸೊಲ್ಲಾಪುರ: ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿ, ಮಹಾರಾಷ್ಟ್ರ ಬಹುಜನ ಮಧ್ಯವರ್ತಿ ಶಿವಜನ್ಮೋತ್ಸವ ಯುವಕ ಮಂಡಳಿ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವ ಅಂಗವಾಗಿ ಬುಧುವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಗೆ ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಚಾಲನೆ ನೀಡಿದರು.
ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ, ಸುರೇಶ್ಚಂದ್ರ ಸೂರ್ಯವಂಶಿ, ಅಮೋಲರಾಜೆ ಭೋಸಲೆ, ಮಹೇಶ ಇಂಗಳೆ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಪ್ರತಿವರ್ಷದಂತೇ ಮಹಾರಾಷ್ಟ್ರ ಬಹುಜನ ಮಧ್ಯವರ್ತಿ ಶಿವಜನ್ಮೋತ್ಸವ ಯುವಕ ಮಂಡಳಿ ವತಿಯಿಂದ ಫೆ. 19ರಂದು ಬೃಹತ್ ಸಿಂಹಾಸನರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ, ಲೆಜಿಮ್ ತಂಡದ ಸುಮಾರು 300 ಯುವಕರೊಂದಿಗೆ ಅದ್ಧೂರಿ ಲೇಜಿಮ್ ಪ್ರದರ್ಶನ ನಡೆಯಿತು. ಪಟ್ಟಣದ ಖಂಡೋಬಾ ಮಂದಿರದಿಂದ ಮುಖ್ಯ ರಸ್ತೆಗಳ ಮೂಲಕ ಕಾರಂಜಾ ಚೌಕ್, ತುಪ್ ಚೌಕ್, ಫತ್ತೆಸಿಂಹ ಚೌಕ್ ವರೆಗೆ ಬೃಹತ್ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಪೇಠಾ ಸುತ್ತಿಕೊಂಡಿದ್ದು ವಿಶೇಷವಾಗಿತ್ತು. ಕೈಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದುಕೊಂಡ ಚಿಕ್ಕಮಕ್ಕಳು ಜೈ ಭವಾನಿ-ಜೈ ಶಿವಾಜಿ ಎನ್ನುವ ಘೋಷಣೆ ಕೂಗಿದರು. ಸೊಲ್ಲಾಪುರ ಮಹಾನಗರ ಪಾಲಿಕೆ ಮಾಜಿ ಶಿಕ್ಷಣ ಸಭಾಪತಿ ಸಂಕೇತ ಪಿಸೆ, ಅನ್ನಛತ್ರ ಮಂಡಳಿ ಉಪಾಧ್ಯಕ್ಷ ಅಭಯ ಖೋಬರೆ, ಕಾಯದರ್ಶಿ ಶಾಮರಾವ್ ಮೋರೆ, ಖಜಾಂಚಿ ಲಾಲಾ ರಾಠೊಡ, ಮಹಾರಾಷ್ಟ್ರ ಬಹುಜನ ಮಧ್ಯವರ್ತಿ ಶಿವಜನ್ಮೋತ್ಸವ ಯುವಕ ಮಂಡಳಿ ಅಧ್ಯಕ್ಷ ಮನೋಜ ನಿಕ್ಕಂ, ಆರ್‌ಪಿಐ ತಾಲೂಕು ಅಧ್ಯಕ್ಷ ಅವಿನಾಶ್ ಮಡಿಖಾಂಬೆ, ವಡ್ಡರ್ ಸಮಾಜದ ತಾಲೂಕು ಅಧ್ಯಕ್ಷ ಅಂಕುಶ್ ಚೌಗುಲೆ, ಬಂಜಾರಾ ಸಮುದಾಯದ ಮುಖಂಡ ಋತುರಾಜ (ಬಂಟಿ) ರಾಠೊಡ, ಸಂದೀಪ ಮಡಿಖಾಂಬೆ, ಆರ್‌ಪಿಐ (ಎ) ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಸೊಹೇಲ್ ಬಾಗವಾನ್, ಪ್ರವೀಣ ದೇಶಮುಖ, ಛೋಟು ಸಿರಸಾಟ್, ಪ್ರಶಾಂತ ಸಾಠೆ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ನಂತರ ರಾತ್ರಿ 8:30 ಗಂಟೆಗೆ ನಗರಾಧ್ಯಕ್ಷೆ ಶೋಭಾ ಖೇಡಗಿ, ತಾಲೂಕು ಪಂ.ಅಧ್ಯಕ್ಷೆ ಸುನಂದಾ ಗಾಯಕವಾಡ ಉಪಸ್ಥಿತಿಯಲ್ಲಿ ಹಿರಕಣಿ ಮಹಿಳಾ ಬಹು ಉದ್ದೇಶಿತ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಅಲಕಾತಾಯಿ ಭೋಸಲೆ ಬೃಹತ್ ಸಿಂಹಾಸನಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಿದರು.
ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ಅಧ್ಯಕ್ಷತೆ ವಹಿಸಿದ್ದರು. ಹಿರಕಣಿ ಮಹಿಳಾ ಬಹು ಉದ್ದೇಶಿತ ಸಂಸ್ಥೆ ಕಾರ್ಯದರ್ಶಿ ಅರ್ಪಿತಾರಾಜೆ ಭೋಸಲೆ, ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಡಾ| ಸಂತೋಷ ಗಾಯಕವಾಡ, ಶ್ರೀ ವಟವೃಕ್ಷ ಸ್ವಾಮಿ ಮಹಾರಾಜ ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ, ಎನ್‌ಸಿಪಿ ನಾಯಕ ದಿಲೀಪ ಸಿದ್ಧೆ, ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕಲ್ಲಪ್ಪ ಪೂಜಾರಿ, ಸುರೇಶ ಸೂರ್ಯವಂಶಿ, ಫತ್ತೆಸಿಂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಾಬಾಸಾಹೇಬ್ ನಿಂಬಾಳಕರ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.