ಸೊಲ್ಲಾಪುರ: ತೀರ್ಥಕ್ಷೇತ್ರ ಅಕ್ಕಲಕೋಟ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರಿಗೆ ರಾಜ್ಯದ ಧಾರ್ಮಿಕ ಕ್ಷೇತ್ರದಲ್ಲಿ ಅತ್ಯುತ್ತಮವಾದ ಪುಣೆಯ ‘ಓಂ ಜೈ ಶಂಕರ ಪ್ರತಿಷ್ಠಾನ’ ವತಿಯಿಂದ ರಾಜ್ಯ ಮಟ್ಟದ ‘ಓಂ ಜೈ ಶಂಕರ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅನ್ನಛತ್ರ ಮಂಡಳದ ಹಳೆಯ ಮಹಾಪ್ರಸಾದ ಗೃಹದಲ್ಲಿ ಶ್ರೀ ಶಂಕರ ಮಹಾರಾಜ ಭಕ್ತರ 4ನೇ ಸ್ನೇಹ ಸಮಾವೇಶದಲ್ಲಿ ನಾಸೀಕ್‌ನ ಮಾಧವನಾಥ ಮಹಾರಾಜರ ಹಸ್ತದಿಂದ ಮಂಡಳ ಸಂಸ್ಥಾಪಕ ಅಧ್ಯಕ್ಷ ಜನ್ಮೆಜಯರಾಜೆ ಭೋಸಲೆ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಜನ್ಮೇಜಯರಾಜೆ ಭೋಸಲೆ ನೇತೃತ್ವದಲ್ಲಿ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳವನ್ನು 1988ರಲ್ಲಿ ಶ್ರೀ ಗುರುಪೂರ್ಣಿಮೆಯಂದು ಸ್ಥಾಪಿಸಲಾಗಿತ್ತು. ಈಗ ಪ್ರತಿನಿತ್ಯ ಸುಮಾರು 15 ರಿಂದ 20 ಸಾವಿರ ಭಕ್ತರು ಮಹಾಪ್ರಸಾದ ಸ್ವೀಕರಿಸಿ ತೃಪ್ತರಾಗುತ್ತಾರೆ. ಅಲ್ಲದೇ ಅನ್ನದಾಸೋಹದೊಂದಿಗೆ ಮಂಡಳದ ವತಿಯಿಂದ ಸಮಾಜಸೇವೆ ಕಾರ್ಯ ಮಾಡಲಾಗುತ್ತಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಮಂಡಳದ ಕೊಡುಗೆ ಅಫಾರವಾಗಿದೆ. ಮಂಡಳದ ನಿಯೋಜಿತ ಮಹಾಪ್ರಸಾದ ಗೃಹ ಐದು ಅಂತಸ್ತಿನ ಕಟ್ಟಡದ ಕಾರ್ಯ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಅನ್ನಛತ್ರದಲ್ಲಿ ಸ್ವಚ್ಛತೆಗೆ ಮಹತ್ವ ನೀಡಲಾಗಿದೆ. ಆದ್ದರಿಂದ ಜನ್ಮೇಜಯರಾಜೆ ಭೋಸಲೆ ಅವರ ಕಾರ್ಯವನ್ನು ಗುರುತಿಸಿದ ಪುಣೆಯ ಓಂ ಜೈ ಶಂಕರ ಪ್ರತಿಷ್ಠಾನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀ ವಿಶ್ವೇಶ್ವರ ಸ್ವಾಮಿ ಮಹಾರಾಜ ಮಂಗಲ್ ಭಕ್ತ ಸೇವಾ ಮಂಡಳದ ಅಧ್ಯಕ್ಷ ರಾರಾಭಾವು ಕೊಠಾರಿ, ಶ್ರೀ ಶಂಕರ ಸೇವಾ ಮತ್ತು ಶ್ರೀಪಾದ ಶ್ರೀವಲ್ಲಭ ಚರಿತ್ರಾಮೃತ ಡಚ್ ರಚನೆಕಾರ ಡಾ| ಜಾನ್ ಡೂಯಿಂಗ್ ಹೇಗ್ ಜರ್ಮನಿ, ಸುರೇಖಾ ಪುರಾಣಿಕ್, ಸದ್ಗುರು ಶ್ರೀ ಪಿಟಲ್ ಮಹಾರಾಜ, ಹಿರಿಯ ಲೇಖಕ ಡಾ| ಯಶ್ವಂತ್ರಾವ ಪಾಟೀಲ, ಡಾ| ರಾಧಿಕಾ ಪಾರಾಸನಿಸ್, ಹಿರಿಯ ಚಿಂತಕ ಆನಂದ ಜೋಗದಂಡ, ಬಾಲರೋಗ ತಜ್ಞ ಡಾ| ಶಾಮಾ ಕುಲಕರ್ಣಿ ನಾಸಿಕ್, ಎಚ್.ಪಿ. ಮಾಧವನಾಥ ಮಹಾರಾಜ ಪಾಥರ್ಡಿ, ಶ್ರೀ ಪೇಂಟರ್ ಕಾಕಾ ಕಡ್ಲಾಸ್ಕರ್, ಬಾರ್ವೇಕಾಕಾ ನಾಸಿಕ್, ಸುರೇಂದ್ರ ಭಾನೋಸೆ, ಬ್ರಿಜೇಶ್ ಅಯ್ಯರ್ (ಪುಣೆ), ಮಿಲಿಂದ್ ಮಗರ್ (ನಾಸಿಕ್), ವಿಜಯ್ ಕೇದಾರಿ ಮಹಾರಾಜ, ಅನಿಲ ದಿಕ್ಸಿತ್ ಮಹಾರಾಜ (ಪುಣೆ), ಡಾ. ರಾಜೇಂದ್ರ ಮುಲೆ (ನಾಸಿಕ್), ಘೋಟ್ವಾಡೆಕರ್ ಮಹಾರಾಜ್ (ಪುಣೆ), ಗೋಪಾಲ್ ದಾಲ್ವಿ, ಅಜಿತ್ ದೇಶಮುಖ, ಅಂಜಲಿ ಮರೋಡ ಹಾಗೂ ಇನ್ನಿತರರು ಹಾಜರಿದ್ದರು. ಓಂ ಜೈ ಶಂಕರ ಪ್ರತಿಷ್ಠಾನದ ಅಧ್ಯಕ್ಷ ಪಪ್ಪಾ ಪುರಾಣಿಕ್, ಬಾಲಕಿಸಾನ್ ರಾಠಿ, ಗಜಾನನ ಪತ್ಕಿ, ರಮೇಶ್ ಅನ್ನಾ ಉಮರಗೆ, ಡಾ| ಅಮಿತ್ ಶೇಷ, ವಿಜಯ ಸರಾಫ್, ಧನಶ್ರೀ ಘೋರ್ಪಡೆ, ಶ್ರೀಮತಿ ವಿವೇಕಾ ಟಕಲೆ, ದೀಪಕ್ ಸೋನಾರ್, ವೈಭವ್ ಪಾಂಡೆ, ಶ್ರೀಪಾದ ಪುರಾಣಿಕ್, ಅಜಿತ್ ಕ್ಷೀರಸಾಗರ್ ಮತ್ತಿತರರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು.