Advertisement

ಗಡಿ ಬರಹಗಾರರಿಗೆ ಸಿಗಲಿ ಮನ್ನಣೆ

04:01 PM Dec 23, 2019 | Naveen |

ಸೊಲ್ಲಾಪುರ: ಸಮಕಾಲೀನ ಸಮಾನತೆ ಬಿಂಬಿಸುವುದು ಬಹಳ ಸಂಗ್ದತೆಯಿಂದ ಕೂಡಿದೆ. ಕರ್ನಾಟಕದ ಬರಹಗಾರರಿಗೆ ಸಿಗುವ ಮನ್ನಣೆ ಗಡಿಯಾಚೆಯ, ಗಡಿಒಳಗೆ, ಗಡಿಯಂಚಿನ, ಹೊರನಾಡಿಗರ ಬರಹಗಾರರಿಗೆ ಸಿಗದಿರುವುದ ಖೇದದ ಸಂಗತಿ. ಇವರೆಲ್ಲ ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಕವಿ ಆರ್‌.ಜಿ. ಹಳ್ಳಿನಾಗರಾಜ ಹೇಳಿದರು.

Advertisement

ಅಖೀಲ ಭಾರತ ಹೊರನಾಡು ಕನ್ನಡ ಸಂಘಗಳ ಮಹಾಮೇಳದ 3ನೇ ಗೋಷ್ಠಿಯಾದ ಕಾವ್ಯ ಬೆಳಗು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಂಪರೆ ಅವಲೋಕಿಸಿದಾಗ ಕಾವ್ಯಕ್ಕೆ ಇರುವ ಶಕ್ತಿ ದೊಡ್ಡದು ಎನ್ನುವುದು ಅರಿವಿಗೆ ಬರುತ್ತದೆ. ಆದರೂ ಅದರದ್ದೆ ಆದ ಮಹತ್ವ ಕಾವ್ಯಕ್ಕೆ ಸಿಗುತ್ತಿಲ್ಲ. ರಾಜಕೀಯ ಒಳಾಂಗಣದಲ್ಲಿ ಬರಹಗಾರರು ಹೊರಬರಲು ಒದ್ದಾಡುತ್ತಿದ್ದಾರೆ. ಅದರಿಂದಾಚೆ ಬಂದು ಬರೆದರೆ ಅವರು ಅವಮಾನಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಗೌರವ ಅತಿಥಿಯಾಗಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್‌. ಉಡಕೇರಿ ಮಾತನಾಡಿ, ಸಂಘ ಸಾಹಿತ್ಯದ ಎಲ್ಲ ಪ್ರಕಾರದ ಬರಹಗಾರನ್ನು ಪ್ರೋತ್ಸಾಹಿಸುವದರ ಜತೆಯಲ್ಲಿ ಕನ್ನಡ ಉಳಿಸಿ, ಬೆಳೆಸಿ, ರಕ್ಷಿಸುವ ಕಾರ್ಯ ಮಾಡುತ್ತಾ ಬರುತ್ತಿದೆ ಎಂದರು.

ಆದರ್ಶ ಕನ್ನಡ ಬಳಗ ಕಾರ್ಯಾಧ್ಯಕ್ಷ ಗಿರೀಶ ಜಕಾಪುರೆ ಮಾತನಾಡಿ, ಸಹಕಾರ ಮನೋಭಾವನೆಯಿಂದ ಎಲ್ಲರಲ್ಲೂ ಒಂದಾಗುವ ತತ್ವವನ್ನು ಬೆಳೆಸಬೇಕಾಗಿದೆ. ಅದನ್ನು ಕವಿವ ಸಂಘ ಮಾಡುತ್ತಿದೆ ಎಂದು ಹೇಳಿದರು. ಕವಿಗಳಾದ ಕಲ್ಲೇಶ ಕುಂಬಾರ, ದಿನೇಶ ಚವ್ಹಾಣ, ನಾಗೇಶ ನಾಯಕ, ನಿರ್ಮಲಾ ಶೆಟ್ಟರ, ಮಹಿಬೂಬ ಜಿಡ್ಡಿ, ಪ್ರಕಾಶ ಕಡಮೆ, ಸಿದ್ದರಾಮ ಹಿಪ್ಪರಗಿ, ಅಕ್ಬರ ಕಾಲಿಮಿರ್ಚಿ, ಚಂದ್ರಶೇಖರ ಕಾರಗಲ, ಮಮತಾ ಅರಸಿಕೇರಿ, ಗುರು ಹಿರೇಮಠ, ಮಲ್ಲಮ್ಮ ಸಾಲೆಗಾಂವ, ಮಧು ಬಿರಾಧಾರ, ದೀಪ್ತಿ ಭದ್ರಾವತಿ, ಸುಮೊತ ಮೇತ್ರಿ, ಶ್ರೀದೇವಿ ಕೆರೆಮನೆ, ವಾಸುದೇವ ಇಳಕಲ್ಲ, ಲಕ್ಷ್ಮೀ ದೊಡಮನಿ, ಚನ್ನಪ್ಪ ಅಂಗಡಿ ತಮ್ಮ ಕವನಗಳನ್ನು ವಾಚನ ಮಾಡಿದರು.

ಕವಿಗಳಾದ ಮಾರ್ತಾಂಡಪ್ಪ ಎಂ. ಕತ್ತಿ ನಿರೂಪಿಸಿದರು. ಸುಜಾತಾ ಶಾಸ್ತ್ರೀ ನಿರೂಪಿಸಿದರು. ಶಿವಚಲಕುಮಾರ ಸಾಲಿಮಠ ಸ್ವಾಗತಿಸಿದರು. ಸಿದ್ದಯ್ನಾ ಸ್ವಾಮಿ ವಂದಿಸಿದರು. ಗೋಷ್ಠಿಯಲ್ಲಿ ಭೈರನಟ್ಟಿಯ ದೊರೆಸ್ವಾಮಿ ಮಠದ ಶ್ರೀ ಶಾಂತಲಿಂಗ ಮಹಾ ಸ್ವಾಮೀಜಿ, ಸಂಘದ ಪದಾಧಿ ಕಾರಿಗಳಾದ ಶಿವಣ್ಣ ಬೆಲ್ಲದ, ನಿಂಗಣ್ಣ ಕುಂಟಿ, ಸದಾನಂದ ಶಿವಳ್ಳಿ, ಸತೀಶ ತುಮರಿ, ಶಾಂತೇಶ ಗಾಮನಗಟ್ಟಿ, ಶಂಕರ ಕುಂಬಿ, ಮನೋಜ ಪಾಟೀಲ, ವಿಶ್ವೇಶ್ವರಿ ಹಿರೇಮಠ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ಶಿವಾನಂದ ಅಂಬಡಗಟ್ಟಿ, ಗುರುರಾಜ ಹುಣಸಿಮರದ, ಡಾ| ಲಿಂಗರಾಜ ಅಂಗಡಿ, ಪ್ರಜ್ಞಾ ಮತ್ತಿಹಳ್ಳಿ, ಡಾ| ಜಿನದತ್ತ ಹಡಗಲಿ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ಪ್ರಜ್ಞಾ ಮತ್ತಿಹಳ್ಳಿ, ಡಾ ಲಿಂಗರಾಜ ಅಂಗಡಿ, ಕೆ.ಆರ್‌.ದುರ್ಗಾದಾಸ್‌. ಲಕ್ಷ್ಮಣ ಬಕ್ಕಾಯಿ, ಮಲ್ಲಿಕಾರ್ಜುನ ಸಿದ್ದಣ್ಣನವರ ಹಾಗೂ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್‌ ಶೇಖ್‌, ಕಾರ್ಯಾಧ್ಯಕ್ಷ ಗಿರೀಶ ಜಕಾಪುರೆ, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜಮಶೆಟ್ಟಿ, ಚಿದಾನಂದ ಮಠಪತಿ, ಶರಣಪ್ಪ ಪುಲಾರಿ, ಅಪ್ಪು ಉಮರಾಣಿಕರ್‌, ವಿದ್ಯಾಧರ ಗುರವ, ಭೀಮಾಶಂಕರ ಪಾಟೀಲ, ಶರಣು ಕೋಳಿ, ಬಸವರಾಜ ಮಸೂತಿ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next