Advertisement
ಅಕ್ಕಲಕೋಟ ನಗರದ ಲೋಕಾಪುರೆ ಸಭಾಗೃಹದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಸಹಯೋಗದಲ್ಲಿ ನಡೆದ ಕನ್ನಡದಿಂದ ಮರಾಠಿಗೆ ಸಣ್ಣ ಕಥೆಗಳ ಅನುವಾದ ಕಮ್ಮಟದ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಹಿರಿಯ ಸಾಹಿತಿ ಡಾ| ಭೈರಮಂಗಲ ರಾಮೇಗೌಡ ಮಾತನಾಡಿ, ಹೊರನಾಡಿನಾಲ್ಲಿ ಆದರ್ಶ ಕನ್ನಡ ಬಳಗ ಸಾಹಿತ್ಯ ಸಂಸ್ಕೃತಿಯ ಸಂವರ್ಧನೆ ಮಾಡುತ್ತಿರುವುದು ಅಭಿನಂದನೀಯ. ಗಿರೀಶ ಜಕಾಪುರೆಯವರ ನೇತೃತ್ವದಲ್ಲಿ ಆದರ್ಶ ಕನ್ನಡ ಬಳಗ ಸುಮಾರು ನಾಲ್ಕು ವರ್ಷಗಳಿಂದ ಈ ರೀತಿ ಅನುವಾದ ಕಮ್ಮಟಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು ದೊಡ್ಡ ಪ್ರಮಾಣದಲ್ಲಿ ಸಾಹಿತ್ಯದ ಕೊಡುಕೊಳ್ಳುವಿಕೆ ನಡೆದಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಕಮ್ಮಟಗಳು ನಡೆಯಬೇಕು ಎಂದರು.
ಕಮ್ಮಟ ನಿರ್ದೇಶಕ ಗಿರೀಶ ಜಕಾಪುರೆ ಕಮ್ಮಟದ ಫಲಶೃತಿ ವಿಷಯ ಕುರಿತು ಮಾತನಾಡಿ, ಅನುವಾದ ಕಮ್ಮಟದಲ್ಲಿ ಕನ್ನಡದಿಂದ ಮರಾಠಿಗೆ ಅನುವಾದಗೊಂಡಿರುವ ಕಥೆಗಳು ಪ್ರಕಟಗೊಂಡು ಮರಾಠಿ ಓದುಗರಿಗೆ ತಲುಪಿಸುವ ಕಾರ್ಯ ಮುಖ್ಯವಾಗಿದೆ. ಮರಾಠಿ ಓದುಗರು ಕನ್ನಡದ ಸಾಹಿತ್ಯವನ್ನು ಓದಿ ಸಂತೋಷಪಟ್ಟಾಗ ಮಾತ್ರ ಈ ಯೋಜನೆಗೆ ಯಶಸ್ಸು ಲಭಿಸುತ್ತದೆ ಎಂದರು.
ಅನುವಾದದ ಪ್ರಕಾರಗಳು, ಸಾಧ್ಯತೆ ಮತ್ತು ಸವಾಲುಗಳು ಕುರಿತು ಖ್ಯಾತ ಅನುವಾದಕರಾದ ಪ್ರಭಾಕರ ಸಾತಖೇಡ, ಅನುವಾದದಲ್ಲಿನ ಸೃಜನಶೀಲತೆ ಮತ್ತು ಸ್ಥಿತ್ಯಂತರಗಳು ಕುರಿತು ರಾಮಕೃಷ್ಣ ಮರಾಠೆ ಉಪನ್ಯಾಸ ನೀಡಿದರು. ಕಾರ್ಯಕ್ರಮ ಯಶಸ್ವಿಗಾಗಿ ಶ್ರಮಿಸಿದ ಸ್ವೀಟಿ ಪವಾರ ಮತ್ತು ವಿದ್ಯಾಶ್ರೀ ಬಸವನಕೇರಿ ಮತ್ತು ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡ ಶಿವಪುತ್ರ ಜಾಂಬರೆ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಅರವಿಂದ ಮಾಲಗತ್ತಿ ಸನ್ಮಾನಿಸಿದರು.
ಕನ್ನಡ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್., ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಸಂಗಮೇಶ ಬಾದವಾಡಗಿ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಾಜಾನ್ ಶೇಖ್, ಅನುವಾದಕರಾದ ಡಾ| ಸುಜಾತಾ ಶಾಸ್ತ್ರೀ, ಪ್ರಭಾಕರ ಸಾತಖೇಡ, ವಸುಂಧರಾ ಶರ್ಮಾ, ಚನ್ನವೀರ ಭದ್ರೇಶ್ವರಮಠ, ವಿಶ್ವೇಶ್ವರ ಮೇಟಿ, ಪ್ರಕಾಶ ಪ್ರಧಾನ, ಡಾ| ಗುರುಸಿದ್ದಯ್ಯ ಸ್ವಾಮಿ, ಅಶ್ವಿನಿ ಜಮಶೆಟ್ಟಿ, ಶೀಲಾ ಜಕಾಪುರೆ, ಕಸ್ತೂರಿ ಕರೋಟಿ, ದಿನೇಶ ಚವ್ಹಾಣ, ಚಂದ್ರಕಾಂತ ಕಾರಕಲ್, ಪ್ರಕಾಶ ಅತನೂರೆ, ಎಸ್.ಎಂ. ಜಾಧವ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಅನುವಾದಕರು ಪಾಲ್ಗೊಂಡಿದ್ದರು.
ವಿದ್ಯಾಧರ ಗುರವ ನಿರೂಪಿಸಿದರು. ಶರಣಪ್ಪ ಫುಲಾರಿ ವಂದಿಸಿದರು. ಆದರ್ಶ ಕನ್ನಡ ಬಳಗದ ಶರಣಪ್ಪ ಫುಲಾರಿ, ಬಸವರಾಜ ಧನಶೆಟ್ಟಿ, ಶರಣು ಕೋಳಿ, ಶ್ರೀಶೈಲ ಮೇತ್ರೆ, ಗಣೇಶ ಜಕಾಪುರೆ, ಕಲ್ಮೇಶ ಅಡಳಟ್ಟಿ, ಕಾಶೀನಾಥ ಮಣೂರೆ, ಸೇರಿದಂತೆ ಹಲವರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.