ಸೊಲ್ಲಾಪುರ: ಅವಧೂತ್ ಶ್ರೀ ಗುರುದೇವ ದತ್ತ…! ಸದ್ಗುರು ಶ್ರೀ ಸ್ವಾಮಿ ಸಮರ್ಥ ಮಹಾರಾಜಕಿ ಜಯ..!! ಎಂಬ ಸಮರ್ಥರ ನಾಮ ಘೋಷಣೆಗಳೊಂದಿಗೆ ತೀರ್ಥಕ್ಷೇತ್ರ ಅಕ್ಕಲಕೋಟ ನಗರದ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಗುರು ಪೂರ್ಣಿಮೆ ಉತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರ ನೇತೃತ್ವದಲ್ಲಿ ಅನ್ನಛತ್ರದಲ್ಲಿ ಬೆಳಗ್ಗೆ 8ರಿಂದ 10ರವರೆಗೆ ಸ್ವಾಮಿ ಸಮರ್ಥ ಸಾರಾಮೃತ ಪಾರಾಯಣ ಕಾರ್ಯಕ್ರಮ ನಡೆದಿದ್ದು, ಬೆಳಗ್ಗೆ 10ರಿಂದ 11ರವರೆಗೆ ನಾಮಸ್ಮರಣ ಮತ್ತು ಶ್ರೀಗುರು ಪೂಜೆ ನೇರವೇರಿತು. ಬೆಳಗ್ಗೆ 12 ಗಂಟೆಗೆ ಶಾಸಕ ಸಿದ್ದರಾಮ ಮೆØೕತ್ರೆ, ಸುದರ್ಶನ ಖಾನವಿಲಕರ್, ಕಿರಣ ಗುಳವೆ, ಶಿವಾಜಿ ಪಾಟೀಲ, ಸಂತೋಷ ಬಾಲಕಿಲ್ಲೆ, ಆಬಾಸಾಹೇಬ ಬಾಲಗುಡೆ, ದೇವಿದಾಸ ತಾಪಕರಿ, ಚಿತ್ರನಟ ಆಶೀಷ ಪವಾರ, ವಿಜಯ ಗಾಜರೆ, ಸವಿತಾ ಮಾಲಪೆಕರ್ ಅವರ ಹಸ್ತೆಯಿಂದ ಸಮರ್ಥರಿಗೆ ಮಹಾ ನೈವೇದ್ಯ ಅರ್ಪಿಸಲಾಯಿತು.
ಸಾಯಂಕಾಲ 5ಕ್ಕೆ ಚಿತ್ರನಟ ಸ್ವಪ್ನಿಲ್ ಜೋಶಿ ಮತ್ತು ಚಿತ್ರನಟಿ ಆಶಾವರಿ ಜೋಶಿ, ಪಲ್ಲಕ್ಕಿ ಉತ್ಸವ ಪ್ರಮುಖ ಅಣ್ಣಾ ಥೋರಾತ, ಅತುಲ್ ಬೇಹರೆ, ಸಂದೀಪ ಫುಗೆ ಹಾಗೂ ಮಂಡಳದ ಪ್ರಮುಖ ಕಾರ್ಯಕಾರಿ ವಿಶ್ವಸ್ಥ ಅಮೋಲರಾಜೆ ಭೊಸಲೆ ಅವರು ಪಲ್ಲಕ್ಕಿ ಹಾಗೂ ರಥೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು.
ಅನ್ನಛತ್ರದಿಂದ ಪಟ್ಟಣದ ಮುಖ್ಯರಸ್ತೆಗಳಲ್ಲಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಪಟ್ಟಣದ ಸಾವಿರಾರು ಮಹಿಳೆಯರು, ವಯೋವೃದ್ಧರು ಹಾಗೂ ಚಿಕ್ಕ ಮಕ್ಕಳು ಭಾಗವಹಿಸಿದ್ದರು. ಅಲ್ಲದೇ ಡೋಲ ಪಥಕ, ಲೇಝಿಮ್, ಜಾಂಝ ಪಥಕ, ಕೇರಳದ ವಿಶೇಷ ವೇಷ ಭೂಷಣದೊಂದಿಗೆ ನೃತ್ಯ ಮಾಡುವ ಮೂಲಕ ವೈಭವದಿಂದ ಪಲ್ಲಕ್ಕಿ ಉತ್ಸವ ಆಚರಿಸಲಾಯಿತು. ಅಲ್ಲದೆ ಮೆರವಣಿಗೆ ಮಾರ್ಗದಲ್ಲಿ ಬಣ್ಣ-ಬಣ್ಣದ ರಂಗೋಲಿ ಹಾಕಿದ್ದರು.
ಮಂಡಳದ ಕಾರ್ಯದರ್ಶಿ ಶ್ಯಾಮ ಮೋರೆ, ಉಪಾಧ್ಯಕ್ಷ ಅಭಯ ಖೋಬರೆ, ಲಾಲಾ ರಾಠೊಡ, ನಗರಸೇವಕ ಚೇತನ ನರೂಟೆ, ಶೈಲೇಶ ಪೀಸೆ, ದೀಲಿಪ ಸಿದ್ಧೆ, ಪ್ರಶಾಂತ ಸಾಠೆ, ಲಕ್ಷ್ಮಣ ಪಾಟೀಲ, ಕಿಶೋರ ಸಿದ್ದೆ, ಸಂತೋಷ ಭೋಸಲೆ, ಮಹಾಂತೇಶ ಸ್ವಾಮಿ, ಅಪ್ಪಾ ಹಂಚಾಟೆ ಹಾಗೂ ನಗರಸೇವಕ ಮಹೇಶ ಇಂಗಳೆ, ಪ್ರವೀಣ ದೇಶಮುಖ, ರೋಹಿತ ಖೋಬರೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.