Advertisement
ಲತಾ ಮಂಗೇಶಕರ್ ಅವರು ಮುಂಬೈ ಮಹಾನಗರದ ಪೇಡರ್ ರಸ್ತೆಯಲ್ಲಿರುವ ತಮ್ಮ ‘ಪ್ರಭುಕುಂಜ್’ ನಿವಾಸದಲ್ಲಿ ಮರ್ಸಿಡೀಸ್ ಬೆಂಜ್-ಕಾಂಪ್ರಸರ್ ಸಿ-200, ಎಂ.ಎಚ್-01/ ಎನ್.ಎ./4221 ಮತ್ತು ಶೆವØರಲೆಟ್-ಕ್ರುಝ್ ಕಂಪನಿಯ ಎಂ.ಎಚ್-01/ ಎ.ಎಕ್ಸ್. /8584 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
Related Articles
Advertisement
ಪಂಡಿತ ಹೃದಯನಾಥ ಮಂಗೇಶಕರ್, ಭಾರತಿತಾಯಿ ಮಂಗೇಶಕರ್, ರಾಧಾತಾಯಿ ಮಂಗೇಶಕರ್, ಆದಿನಾಥ ಮಂಗೇಶಕರ್, ಕೃಷ್ಣಾತಾಯಿ ಮಂಗೇಶಕರ್, ಉಷಾತಾಯಿ ಮಂಗೇಶಕರ್, ಮೀನಾತಾಯಿ ಖಡಿಕರ್, ಯೋಗೇಶ ಖಡಿಕರ್, ಮಹೇಶ ರಾಠೊರ್ ಹಾಗೂ ಜನ್ಮೆಜಯರಾಜೆ ಭೋಸಲೆ, ಅಲಕಾ ಭೋಸಲೆ, ಅಮೋಲರಾಜೆ ಭೋಸಲೆ, ಅರ್ಪಿತಾರಾಜೆ ಭೋಸಲೆ, ಅನುಯಾ ಫುಗೆ, ಅಂಜನಾ ಪವಾರ, ಪದ್ಮಾಕರ ಡಿಗ್ಗೆ, ಮಹಾಂತೇಶ ಸ್ವಾಮಿ, ಪ್ರಶಾಂತ ಸಾಠೆ, ಸಂತೋಷ ಭೋಸಲೆ, ಗಣೇಶ ಭೋಸಲೆ, ರಮೆಶ ಶಿಂದೆ, ಮೈನುದ್ದೀನ್ ಕೋರಬು, ಸ್ವಾಮಿನಾಥ ಗುರವ, ಬಾಬು ಮಣೂರೆ, ಬಲಭೀಮ ಪವಾರ ಹಾಗೂ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಅಕ್ಕಲಕೋಟ ತೀರ್ಥಕ್ಷೇತ್ರದಲ್ಲಿ ಆರಂಭಿಸಿದ ಅನ್ನಛತ್ರದಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ಪ್ರಸಾದ ಮೂಲಕ ತೃಪ್ತಿ ಒದಗಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ನನ್ನ ಮೇಲೆ ಇಟ್ಟಿರುವ ಭಕ್ತಿಯಿಂದ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರಿಗೆ ಪ್ರೀತಿ ಮತ್ತು ಗೌರವದಿಂದ ನನ್ನೆರಡು ಕಾರುಗಳನ್ನು ಉಡುಗರೆಯಾಗಿ ನೀಡಿದ್ದೇನೆ.•ಲತಾ ಮಂಗೇಶಕರ್, ಗಾಯಕಿ ಭಾರತರತ್ನ ಲತಾ ಮಂಗೇಶಕರ್ ಅವರ ಮೇಲೆ ಬಹಳ ಭಕ್ತಿ ಮತ್ತು ಶ್ರದ್ಧೆ ಇಟ್ಟಿದ್ದೇನೆ. ನಾನು ಯಾವುದೇ ಕಾರ್ಯ ಕೈಗೊಂಡರೂ ಮೊದಲು ಅವರ ಆಶೀರ್ವಾದ ಪಡೆಯುತ್ತೇನೆ. ಹೀಗಾಗಿ ಅವರು ನನಗೆ ಉಡುಗೊರೆಯಾಗಿ ಕಾರು ನೀಡಿರುವುದು ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ.
•ಜನ್ಮೇಜಯರಾಜೆ ಭೋಸಲೆ, ಸಂಸ್ಥಾಪಕ ಅಧ್ಯಕ್ಷ ಶ್ರೀಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಅಕ್ಕಲಕೋಟ