ಸೊಲ್ಲಾಪುರ: ದತ್ತ ಜಯಂತಿ ದಿನವಾದ ಬುಧವಾರ ಅಕ್ಕಲಕೋಟ ನಗರದ ಶ್ರೀ ಸ್ವಾಮಿ ಸಮರ್ಥರ ದರ್ಶನಕ್ಕೆ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ, ತೆಲಂಗಾಣದಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಅವಧೂತ್ ಚಿಂತನ, ಶ್ರೀ ಗುರುದೇವ ದತ್ತ…ಸದ್ಗುರು ಶ್ರೀ ಸ್ವಾಮಿ ಸಮರ್ಥ ಮಹಾರಾಜಕ್ಕಿ ಜೈ.. ಎನ್ನುವ ಘೋಷಣೆಯೊಂದಿಗೆ ದರ್ಶನ ಪಡೆದ ಲಕ್ಷಾಂತರ ಭಕ್ತರು, ಅನ್ನಛತ್ರ ಮಂಡಳದಲ್ಲಿ ಮಹಾಪ್ರಸಾದ ಸ್ವೀಕರಿಸಿದರು.
ಹೆಚ್ಚಿನ ಭಕ್ತರು ಗಾಣಗಾಪುರದ ದತ್ತಾತ್ರೇಯನ ದರ್ಶನ ಪಡೆದು, ಅಕ್ಕಲಕೋಟಗೆ ಆಗಮಿಸಿದ್ದರು. ಅನ್ನಛತ್ರ ಮಂಡಳ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಮಾರ್ಗದರ್ಶನದಿಂದ ಬೆಳಗ್ಗೆ ಸಮರ್ಥರಿಗೆ ಮಹಾ ನೈವೇದ್ಯ ಅರ್ಪಿಸಲಾಯಿತು. ತದನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು. ಅನ್ನಛತ್ರ ಆವರಣದಲ್ಲಿದ್ದ ದತ್ತ ಮಂದಿರದಕ್ಕೆ ಬಣ್ಣಬಣ್ಣದ ಹೂಗಳಿಂದ ಅಲಂಕಾರ ಗೊಳಿಸಲಾಗಿತ್ತು .
ಅನ್ನದಾನದ ಎದುರು ಯಾವುದೇ ದಾನವಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಪ್ರತಿನಿತ್ಯ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಬುಧವಾರ ಶ್ರೀ ದತ್ತ ಜಯಂತಿ ಅಂಗವಾಗಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಣ, ಸೀಮಾಂಧ್ರ, ಗೋವಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ, ಸಮರ್ಥರ ದರ್ಶನ ಪಡೆದು, ಅನ್ನಛತ್ರದಲ್ಲಿ ಮಹಾಪ್ರಸಾದ ಸ್ವೀಕರಿಸಿದರು.
ಜನ್ಮೇಜಯರಾಜೆ ಭೋಸಲೆ,
ಸಂಸ್ಥಾಪಕ ಅಧ್ಯಕ್ಷ, ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಅಕ್ಕಲಕೋಟ
ಅನ್ನಛತ್ರ ಮಂಡಳ ಸಂಸ್ಥಾಪಕ ಅಧ್ಯಕ್ಷ ಜನ್ಮೇ ಜಯರಾಜೆ ಭೋಸಲೆ ಮಾರ್ಗದರ್ಶನದಿಂದ ಪ್ರತಿ ವರ್ಷದಂತೆ ಗೋವಾ ರಾಜ್ಯದ ಡಿಚೋಲಿಯ ಶ್ರೀ ದತ್ತ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದತ್ತ ಜಯಂತಿ ಉತ್ಸವ ಆಚರಿಸಲಾಯಿತು. ದರ್ಶನಕ್ಕೆ ಬಂದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ರೋಹನ್ ಕುವಳೇಕರ್,
ಉತ್ಸವ, ಪ್ರಮುಖರು, ಗೋವಾ