Advertisement

ಸಂತ್ರಸ್ತರಿಗೆ ಕಾಶೀ ಪೀಠದಿಂದ ಮೂರು ಲಕ್ಷ ದೇಣಿಗೆ

11:34 AM Aug 15, 2019 | Team Udayavani |

ಸೊಲ್ಲಾಪುರ: ಪುಣೆಯ ಚಿಂಚವಡದ ಮೋರಯಾ ಮಂಗಲ ಕಾರ್ಯಾಲಯದಲ್ಲಿ ಕಾಶೀ ಜಗದ್ಗುರುಗಳ 73ನೇ ಜನ್ಮದಿನೋತ್ಸವವನ್ನು ಧಾರ್ಮಿಕ ಹಾಗೂ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು .

Advertisement

ಇದೇ ವೇಳೆ ಜಲಪ್ರಳಯದಿಂದ ಸಂತ್ರಸ್ತರಾದ ಕರ್ನಾಟಕದ ಜನತೆಗಾಗಿ ಎರಡು ಲಕ್ಷ ರೂ. ಮತ್ತು ಮಹಾರಾಷ್ಟ್ರದ ಸಂತ್ರಸ್ತರ ನಿಧಿಗಾಗಿ ಒಂದು ಲಕ್ಷ ರೂ. ಸೇರಿದಂತೆ ಕಾಶೀ ಪೀಠದಿಂದ ಮೂರು ಲಕ್ಷ ರೂ.ಗಳ ಪರಿಹಾರಧನವನ್ನು ಕಾಶೀ ಪೀಠದ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಘೋಷಿಸಿದರು.

ಶ್ರಾವಣ ಮಾಸದಲ್ಲಿ ಗುರುದಕ್ಷಿಣೆಯಾಗಿ ಸಿಗುವ ಎಲ್ಲ ಹಣವನ್ನು ಚಿಂಚವಡ ಪರಿಸರದ ಬಡ ಹಾಗೂ ಬುದ್ಧಿವಂತ ಮಕ್ಕಳ ಶಿಕ್ಷಣದ ಸಹಾಯ ನಿಧಿ ಸ್ಥಾಪಿಸುವುದಾಗಿ ಸನ್ನಿಧಿಯವರು ಆಶೀರ್ವಚನದಲ್ಲಿ ತಿಳಿಸಿದರು.

ಜಗದ್ಗುರುಗಳ 73ನೇ ಜನ್ಮದಿನದ ನಿಮಿತ್ತವಾಗಿ ಸುಮಂಗಲೆಯರು 73 ದೀಪಗಳನ್ನು ಹಚ್ಚಿ ಆರತಿ ಮಾಡಿದರು. ಸಾವಿರಾರು ಭಕ್ತರು ತಮ್ಮ ಹಸ್ತಗಳಲ್ಲಿ ಕರ್ಪೂರ ದೀಪ ಹಿಡಿದು ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು.ಶಿವಭಕ್ತಿ ಪರಾಯಣರಾದ ಶಂಕರ ಮಾಮಾ ಸರ್ಜೇ ಹಾಗೂ ಭಕ್ತ ಮಂಡಳಿ 56 ಪ್ರಕಾರದ ಮಿಠಾಯಿಗಳನ್ನು ತಯಾರಿಸಿ ಸಾರ್ವಜನಿಕರಿಗೆ ಸಿಹಿ ಹಂಚಿದರು. ತದನಂತರ 121 ವೇದಪಾಠಿ ಅರ್ಚಕರಿಂದ ಶತರುದ್ರಾಭಿಷೇಕವು ನೆರವೇರಿತು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಹಾಗೂ ರಾಜಸ್ತಾನದ ಸದ್ಭಕ್ತರು ಪಾಲ್ಗೊಂಡಿದ್ದರು.

ರಾಜಸ್ತಾನದ ವೀರಶೈವ ಸಮಾಜದ ವತಿಯಿಂದ ಎಲ್ಲ ಶಿವಾಚಾರ್ಯರಿಗೆ ಹಾಗೂ ಅನುಷ್ಠಾನ ಸಮಿತಿ ಮುಖ್ಯಸ್ಥ ಮಹೇಶ ಸ್ವಾಮಿ ಅವರಿಗೆ ಹಾಗೂ ಸಮಸ್ತ ವೈದಿಕ ವೃಂದಕ್ಕೆ ರಾಜಸ್ತಾನದ ಪರಂಪರಾಗತ ಪಗಡಿ ತೊಡಿಸಿ ಗೌರವಿಸಲಾಯಿತು. ಪುಣೆ ನಗರದ ವಿವಿಧ ಸಂಘ-ಸಂಸ್ಥೆಗಳು ಜಗದ್ಗುರುಗಳನ್ನು ಗೌರವಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next