Advertisement

ಕನ್ನಡ ಶಾಲೆ ಮಕ್ಕಳಿಗೆ ಅನ್ನಪೂರ್ಣ ಟಸ್ಟ್‌ನಿಂದ ಉಪಹಾರ

12:30 PM Jul 22, 2019 | Naveen |

ಸೊಲ್ಲಾಪುರ: ಯುವಕರ ವಿಕಾಸಕ್ಕೆ ಶಿಕ್ಷಕರೊಂದಿಗೆ ಕೈ ಜೋಡಿಸಿದರೆ ಸಮಾಜದ ಋಣ ತೀರಿಸಲು ಸಹಾಯವಾಗುತ್ತದೆ ಎಂದು ಅಕ್ಕಲಕೋಟ ಶಾಸಕ ಸಿದ್ಧಾರಾಮ ಮ್ಹೇತ್ರೆ ಹೇಳಿದರು.

Advertisement

ಬೆಂಗಳೂರಿನ ಮುದ್ದೇನಹಳ್ಳಿಯ ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್‌ ವತಿಯಿಂದ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಸರಕಾರಿ ಕನ್ನಡ ಶಾಲೆಗಳ ಮಕ್ಕಳಿಗೆ ಬೆಳಗಿನ ‘ಉಚಿತ ಉಪಹಾರ’ ಸೇವೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಬೆಳಗಿನ ಉಚಿತ ಉಪಹಾರ ಸೇವೆ ಕಾರ್ಯ ಶ್ಲಾಘನೀಯವಾಗಿದ್ದು, ಗ್ರಾಮದ ದಾನಶೂರ ವ್ಯಕ್ತಿಗಳು, ಸಂಘ ಸಂಸ್ಥೆಗಳು ಇಂತಹ ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಸಿದ್ಧಾರಾಮ-ಶಂಕರ ಪ್ರತಿಷ್ಠಾನ ಅಧ್ಯಕ್ಷ ಸಂಜಯ ನಾವಿಂದಗಿ ಮಾತನಾಡಿ, ಪ್ರತಿ ಯೊಬ್ಬರೂ ತಮ್ಮ ಗ್ರಾಮದ ಶಾಲೆಗಳ ವಿಕಾಸಕ್ಕಾಗಿ ಮತ್ತು ಏಳ್ಗೆಗೆ ಶ್ರಮಿಸಬೇಕು ಎಂದರು.

ವಿಶ್ವನಾಥ ಬಿರಾಜದಾರ ಮಾತನಾಡಿ, ಗ್ರಾಮದ ವಿಧ್ಯಾರ್ಥಿಗಳ ಹೊಟ್ಟೆ ತುಂಬಿಸುವ ಸತ್ಯಸಾಯಿ ಟ್ರಸ್ಟ್‌ ಸೊಲ್ಲಾಪುರ ವಿಭಾಗದ ಮುಖ್ಯಸ್ಥೆ ಗೀತಾ ನಾವಿಂದಗಿ ಕಾರ್ಯ ಮೆಚ್ಚುವಂತದ್ದು ಎಂದರು.

Advertisement

ಸಿದ್ಧೇಶ್ವರ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಬಿರಾಜದಾರ, ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್‌ ವಿಭಾಗದ ಮುಖ್ಯಸ್ಥೆ ಗೀತಾ ನಾವಿಂದಗಿ, ಹಿರಿಯ ವಿಜ್ಞಾನಿ ರಾಜು ನಾವಿಂದಗಿ, ನೇಹಾ ನಾವಿಂದಗಿ, ಗ್ರಾಪಂ ಮಾಜಿ ಸದಸ್ಯ ಮಲ್ಲಿನಾಥ ಕಲ್ಯಾಣಿ, ನೇಹಾ ನಾವಿಂದಗಿ, ಲಕ್ಷೀಬಾಯಿ ಭಾಸಗಿ ವೇದಿಕೆಯಲ್ಲಿದ್ದರು.

ಶರಣಪ್ಪ ಫುಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶರಣ ಮೆØೕತ್ರೆ ನಿರೂಪಿಸಿದರು, ಬಸವರಾಜ ಗುರವ ವಂದಿಸಿದರು.

ಧನ ಸಹಾಯ: ಅಕ್ಕಲಕೋಟ ತಾಲೂಕಿನ ಹಿಪ್ಪರಗಿ ವಸತಿ ಶಾಲೆ, ನಾಗಲಗಾಂವ ವಸತಿ ಶಾಲೆ, ಬಂಧು ನಗರ ವಸತಿ ಶಾಲೆ ಮತ್ತು ಇಂದಿರಾ ನಗರ ವಸತಿ ಶಾಲೆ ಹೀಗೆ ನಾಲ್ಕು ವಸತಿ ಶಾಲೆಗಳಿಗೆ ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್‌ನ ಶಾಂತಾ ನಾವಿಂದಗಿ, ಪುಷ್ಪಾ ನೂಲಿ, ನೇಹಾ ನಾವಿಂದಗಿ ಹಾಗೂ ರೋಹಿತ ಪಾಟೀಲ ಬೆಳಗಿನ ಉಚಿತ ಉಪಹಾರಕ್ಕಾಗಿ ಒಂದು ವರ್ಷಕ್ಕೆ ಬೇಕಾಗುವಷ್ಟು ಧನಸಹಾಯ ಮಾಡಿದರು.

ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್‌ ದೇಶದ ಸುಮಾರು 15 ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಸುಮಾರು 26 ಸಾವಿರ ಶಾಲೆಗಳಲ್ಲಿ ಪ್ರತಿನಿತ್ಯ ಎರಡು ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾರಾಷ್ಟ್ರದ ಕನ್ನಡ ಶಾಲೆಗಳ ಅಳಿವು-ಉಳಿವಿಗಾಗಿ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ಬೆಳಗಿನ ಉಚಿತ ಉಪಹಾರ ನೀಡಲಾಗಿದೆ.
ಗೀತಾ ನಾವಿಂದಗಿ,
ಸತ್ಯಸಾಯಿ ಟ್ರಸ್ಟ್‌ ಮುಖ್ಯಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next