Advertisement

ಅಕ್ಕ ಲಕೋಟನಲ್ಲಿ ತ್ರಿಕೋನ ಸ್ಪರ್ಧೆ

11:04 AM Oct 09, 2019 | |

„ಸೋಮಶೇಖರ ಜಮಶೆಟ್ಟಿ
ಸೊಲ್ಲಾಪುರ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಅಕ್ಕಲಕೋಟ ವಿಧಾನಸಭಾ ಮತಕ್ಷೇತ್ರದಿಂದ ಸುಮಾರು 11 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರೂ, ಕಾಂಗ್ರೆಸ್‌-ಬಿಜೆಪಿ ಮತ್ತು ವಂಚಿತ ಬಹುಜನ ಪಕ್ಷದ ನಡುವೆ ಭಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Advertisement

ಕಳೆದ 2009ರ ವಿಧಾನಸಭೆ ಚುನಾವಣೆಯಲ್ಲಿ ಅಕ್ಕಲಕೋಟ ತಾಲೂಕಿನ ಸೇಗಾಂವ ಗ್ರಾಮದಲ್ಲಿ ನಡೆದ ಶೂಟೌಟ್‌ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಆದ್ದರಿಂದ ಈ ಬಾರಿ ಕಟ್ಟೆಚ್ಚರ ವಹಿಸಲಾಗಿದೆ. ಜತೆಗೆ ಅತಿ ಸೂಕ್ಷ್ಮ ಮತಕ್ಷೇತ್ರವಾಗಿ ಪರಿವರ್ತನೆ ಆಗಿದೆ. ಹೀಗಾಗಿ ಚುನಾವಣೆ ಆಯೋಗ ಅಕ್ಕಲಕೋಟ ಮತಕ್ಷೇತ್ರದ 138 ಗ್ರಾಮಗಳ ಮೇಲೆ ತೀವ್ರ ನಿಗಾ ಇಟ್ಟಿದೆ.

ಪಕ್ಷದ ಅಭ್ಯರ್ಥಿಗಳು: ಸಚಿನ್‌ ಕಲ್ಯಾಣಶೆಟ್ಟಿ (ಬಿಜೆಪಿ), ಸಿದ್ಧರಾಮ ಮ್ಹೇತ್ರೆ (ಕಾಂಗ್ರೆಸ್‌), ನಾಗಮೂರ್ತಿ ಕುರಣೆ (ಬಿಎಸ್‌ಪಿ), ಮಧುಕರ ಜಾಧವ (ಮನಸೇ), ಧರ್ಮರಾಜ ರಾಠೊಡ (ವಂಚಿತ ಬಹುಜನ), ಸುರೇಖಾ ಕ್ಷೀರಸಾಗರ (ಅಖೀಲ ಭಾರತ ಹಿಂದು ಮಹಾಸಭಾ), ಅಮೋಲ ಹರಣಾಳಕರ (ಪಕ್ಷೇತರ), ದೀಪಕ ಮಹಾಸ್ವಾಮಿಜಿ (ಪಕ್ಷೇತರ), ಲಕ್ಷ್ಮಣ ಮೇತ್ರೆ (ಪಕ್ಷೇತರ) ಸುಜಾತಾ ಬಾಬಾನಗರೆ (ಪಕ್ಷೇತರ), ಸಂತೋಷ ಗಜದಾನೆ (ಬಹುಜನ್‌ ಮುಕ್ತಿ ಪಾರ್ಟಿ) ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.

ಹಾಲಿ ಶಾಸಕ ಸಿದ್ಧರಾಮ ಮ್ಹೇತ್ರೆ, ಬಿಜೆಪಿ ಅಭ್ಯರ್ಥಿ ಸಚಿನ್‌ ಕಲ್ಯಾಣಶೆಟ್ಟಿ ನಡುವೆ ಬಾರಿ ಪೈಪೋಟಿ ನಡೆದಿದೆ. ರ್ಯಾಲಿ, ಕಾರ್ನರ್‌ ಸಭೆ, ಬಹಿರಂಗ ಸಭೆಗಳ ಮೂಲಕ ಮತದಾರರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಕ್ಕಲಕೋಟ ತಾಲೂಕಿನಲ್ಲಿ ದುಧನಿ, ಮೈಂದರ್ಗಿ ಮತ್ತು ಅಕ್ಕಲಕೋಟ ಹೀಗೆ ಒಟ್ಟು ಮೂರು ನಗರ ಪರಿಷತ್‌ಗಳಿವೆ. ಅಕ್ಕಲಕೋಟ ಮತ್ತು ದುಧನಿ ಇವೆರಡು ನಗರ ಪರಿಷತ್‌ಗಳು ಬಿಜೆಪಿ ಅಧಿಕಾರದಲ್ಲಿದೆ. ಇದು ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅಲೆಯಿಂದ ಬಿಜೆಪಿ ಅಭ್ಯರ್ಥಿ ಸಚಿನ್‌ ಕಲ್ಯಾಣಶೆಟ್ಟಿ ಗೆಲುವು ತಮ್ಮದೇ ಎನ್ನುವ ವಿಶ್ವಾಸದಲ್ಲಿದ್ದಾರೆ. ಅಕ್ಕಲಕೋಟ ವಿಧಾನಸಭಾ ಮತಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಪ್ರಭಾವ ಹೆಚ್ಚಾಗಿದ್ದರಿಂದ ಗೆಲುವಿಗೆ ಅನುಕೂಲ ಆಗಬಹುದು. ಈ ಕ್ಷೇತ್ರದಲ್ಲಿ ಸುಮಾರು 1 ಲಕ್ಷ 15 ಸಾವಿರ ಲಿಂಗಾಯತ ಸಮಾಜದವರು ಇದ್ದಾರೆ. ಆದ್ದರಿಂದ ಸಚಿನ್‌ ಕಲ್ಯಾಣಶೆಟ್ಟಿಗೆ ಗೆಲುವು ನಿಶ್ಚಿತವೆಂದು ಹೇಳಲಾಗುತ್ತಿದೆ. ಅದರಂತೆ 70 ಸಾವಿರ ಮುಸ್ಲಿಂರು, 35 ಸಾವಿರ ದಲಿತರು, 30 ಸಾವಿರ ಲಂಬಾಣಿ, 25 ಸಾವಿರ ಕುರುಬರು ಮತ್ತು ಕೋಳಿ, ಮಾಳಿ, ತೇಲಿ, ಮರಾಠಾ ಸೇರಿದಂತೆ 45 ಸಾವಿರ ಸಮಾಜದವರು ಇದ್ದಾರೆ. ಆದರೆ ಈ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಅಕ್ಟೋಬರ್‌ 21 ರಂದು ಮತದಾನ ನಡೆಯಲಿದ್ದು, 24 ರಂದು ಫಲಿತಾಂಶ ಪ್ರಕಟವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next