Advertisement

ಕುಸ್ತಿ ಪಂದ್ಯ ಗೆದ್ದ ಸೊಲ್ಲಾಪುರ ಪೈಲ್ವಾನ್‌

09:35 AM Sep 16, 2017 | |

ಸುರಪುರ: ವೇಣುಗೋಪಾಲ ಸ್ವಾಮಿ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕುಸ್ತಿ ಪಂದ್ಯ ಶುಕ್ರವಾರ ದೇಗುಲ ಆವರಣದಲ್ಲಿ ಅಪಾರ ಜನಸ್ತೋಮದ ಮಧ್ಯೆ ನಡೆಯಿತು. 

Advertisement

ವಿಜಯಪುರ, ಬೆಳಗಾವಿ, ಚಡಚಣ, ಜಳಕಿ ಜತ್ತ, ಇಂಡಿ, ಸೊಲ್ಲಾಪುರ, ಹುಲಿಜಂತಿ, ಚಾಂದಕವಟೆ, ಕೊಲ್ಲಾಪುರ, ತಾಳಿಕೋಟೆ, ಇಳಕಲ್‌, ಜೇವರ್ಗಿ, ಬೆಳಗಾವಿ, ಶಹಾಪುರ, ಯಾದಗಿರಿ ಹಾಗೂ ಇನ್ನಿತರ ಜಿಲ್ಲೆಗಳ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಪಂದ್ಯದಲ್ಲಿ ಭಾಗವಹಿಸಿದ್ದರು. 

500 ರಿಂದ 5 ಸಾವಿರ ರೂ. ವರೆಗಿನ ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು. ಕೊಲ್ಲಾಪುರದ ಪೈಲವಾನ್‌ ಹಾಗೂ ಜೇವರ್ಗಿ ಪೈಲವಾನ್‌ ನಡುವೆ ನಡೆದ ಕುಸ್ತಿ ಪೋಟಿ ನೋಡುಗರ ಗಮನ ಸೆಳೆಯಿತು.

ಸೊಲ್ಲಾಪುರದ ಪೈಲವಾನ್‌ ಸೂರ್ಯ ಹಾಗೂ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಪೈಲವಾನ್‌ ಹಣಮಂತರಾಯ ನಡುವೆ ನಡೆದ ಕಡಗದ ಕುಸ್ತಿ ತುರುಸಿನಿಂದ ಕೂಡಿತ್ತು. ಇಬ್ಬರು ಸಮಬಲದ ಹೋರಾಟಗಾರರಾಗಿದ್ದರು. 

ಸೊಲ್ಲಾಪುರದ ಪೈಲವಾನ್‌ ತನ್ನ ಬಿಗಿ ವರಸೆಗಳಿಂದ ಗೋಗಿ ಪೈಲವಾನ್‌ನನ್ನು ಸೋಲಿಸಿ ಐದು ತೊಲಿ ಬೆಳ್ಳಿ ಕಡಗವನ್ನು ತನ್ನದಾಗಿಸಿಕೊಂಡ. ಬೆಳ್ಳಿ ಕಡಗ ಗೆದ್ದ ಪೈಲವಾನ್‌ನನ್ನು ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಅರಮನೆಗೆ ಕರತರಲಾಯಿತು.

Advertisement

ರಾಜಾ ಕೃಷ್ಣಪ್ಪ ನಾಯಕ ಪ್ರಶಸ್ತಿ ಪತ್ರ, ಕಪ್‌ ನೀಡಿ ಸನ್ಮಾನಿಸಿದರು. ರಾಜಾ ಲಕ್ಷ್ಮೀನಾರಾಯಣ ನಾಯಕ, ರಾಜಾ ಪಿಡ್ಡ ನಾಯಕ, ರಾಜಾ ರೂಪಕುಮಾರ ನಾಯಕ, ರಾಜಾ ವೇಣುಗೋಪಾಲ ನಾಯಕ, ರಾಜಾ ವಾಸುದೇವ ನಾಯಕ, ರಾಜಾ ಕೃಷ್ಣ ದೇವರಾಯ ನಾಯಕ, ನಾಗಪ್ಪ ಡೊಣ್ಣಿಗೇರಿ, ಮರೆಪ್ಪ ಡೊಣ್ಣಿಗೇರಿ, ಗೋಪಾಲ ಡೊಣ್ಣಿಗೇರಿ, ಮೂಖಪ್ಪ ಡೊಣ್ಣಿಗೇರಿ, ಶರಣು ಕಲಬುರ್ಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next