ಮಂಗಳೂರು: ನಗರದ ಲ್ಯಾಂಡ್‌ಟ್ರೇಡ್ಸ್ ಬಿಲ್ಡರ್ ಆ್ಯಂಡ್ ಡೆವಲಪರ್ ಸಂಸ್ಥೆಯು ಹ್ಯಾಟ್‌ಹಿಲ್‌ನಲ್ಲಿ ನಿರ್ಮಿಸಿದ ಅತ್ಯಂತ ವಿಶಿಷ್ಟವಾದ “ಸಾಲಿಟೇರ್’ ಬಹು ಅಂತಸ್ತುಗಳ ವಸತಿ ಸಮುಚ್ಚಯವು ಡಿ.29ರಂದು ಸಂಜೆ ಉದ್ಘಾಟನೆಗೊಳ್ಳಲಿದೆ ಎಂದು ಲ್ಯಾಂಡ್‌ಟ್ರೇಡ್ಸ್ ನ ಮಾಲೀಕ ಕೆ.ಶ್ರೀನಾಥ್ ಹೆಬ್ಟಾರ್ ತಿಳಿಸಿದ್ದಾರೆ.
ಕ್ರಿಸಿಲ್ ಅಂತಾರಾಷ್ಟ್ರೀಯ ಮಾನ್ಯತಾ ಸಂಸ್ಥೆಯ ರಿಯಲ್ ಎಸ್ಟೇಟ್ ಯೋಜನಾ ಸಂಬಂಧಿತ ಗರಿಷ್ಠವಾದ 7 ಸ್ಟಾರ್ ಪುರಸ್ಕಾರಕ್ಕೆ ಪಾತ್ರವಾಗಿರುವ ಸಾಲಿಟೇರ್, ಕ್ರೆಡೈನಿಂದ ಅದರ ಮಂಗಳೂರು ಚಾಪ್ಟರ್‌ನಲ್ಲಿ 50ಕ್ಕಿಂತ ಹೆಚ್ಚು ವಸತಿಗಳ ವಿಭಾಗದಲ್ಲಿ “ಕೇರ್ ಅವಾರ್ಡ್ 2019′ ಪ್ರಶಸ್ತಿ ಪಡೆದಿದೆ.
ಆರ್ಕಿಟೆಕ್ನಿಕ್ಸ್‌ನ ಆರ್ಕಿಟೆಕ್ಟ್ ಪೀಟರ್ ಮಸ್ಕರೇಞ್ಞಸ್ ಅವರು ಈ ಯೋಜನೆಯ ಅತ್ಯಾಕರ್ಷಕ ವಿನ್ಯಾಸವನ್ನು ರೂಪಿಸಿದ್ದಾರೆ. ಪ್ರತಿ ಅಪಾರ್ಟ್‌ಮೆಂಟ್ ಕೂಡಾ ಅತ್ಯಾಧುನಿಕ ಶೈಲಿಯಲ್ಲಿ ಪೂರ್ಣ ಸ್ಥಳಾವಕಾಶ ಬಳಸಿ ಪರಿಪೂರ್ಣ ನಿರ್ಮಾಣ, ಬ್ರ್ಯಾಂಡೆಡ್ ಸಲಕರಣಗಳಿಂದ ಗಮನ ಸೆಳೆಯುತ್ತಿದೆ. ಆರು ಹಂತಗಳ ಪಾರ್ಕಿಂಗ್ ವ್ಯವಸ್ಥೆ ಇದ್ದು, ಎಲ್ಲಾ ಸ್ವರೂಪದ ವಾಹನಗಳಿಗೆ ಅವಕಾಶವಿದೆ.
ನಗರ ಪಾಲಿಕೆಯಿಂದ ಕಟ್ಟಡ ಪ್ರವೇಶಪತ್ರ, ಡೋರ್ ನಂಬರ್, ಅಗ್ನಿಶಾಮಕ ದಳದಿಂದ ಅಂತಿಮ ಅಂಗೀಕೃತ ಪತ್ರ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾಲಿನ್ಯರಹಿತ ಪರಿಸರ ಅಂತಿಮ ಪ್ರಮಾಣಪತ್ರ, ಶಾಶ್ವತವಾದ ವಿದ್ಯುತ್ ಮತ್ತು ನೀರಿನ ಸಂಪರ್ಕ ಇತ್ಯಾದಿ ಎಲ್ಲಾ ಅಧಿಕೃತ ಮತ್ತು ಅವಶ್ಯಕ ದಾಖಲೆಗಳನ್ನು ಪಡೆದುಕೊಂಡು, ಗ್ರಾಹಕರಿಗೆ ಸಂಪೂರ್ಣವಾಗಿ ವಿಶ್ವಾಸದಿಂದ ಈ ಯೋಜನೆ ಅರ್ಪಿಸುತ್ತಿದ್ದೇವೆ. ಕರ್ನಾಟಕ ರೆರಾದಿಂದ ಸಂಪೂರ್ಣ ಅಂತಿಮ ಪ್ರಮಾಣಪತ್ರ ಲಭ್ಯವಾಗಿದೆ ಎಂದು ಶ್ರೀನಾಥ್ ಹೆಬ್ಟಾರ್ ಹೇಳಿದ್ದಾರೆ.
ಲ್ಯಾಂಡ್‌ಟ್ರೇಡ್ಸ್ ಪರಂಪರೆ: 1992ರಲ್ಲಿ ಕೆ. ಶ್ರೀನಾಥ್ ಹೆಬ್ಟಾರ್ ಅವರು ಸ್ಥಾಪಿಸಿದ ಲ್ಯಾಂಡ್‌ಟ್ರೇಡ್ಸ್ ಸಂಸ್ಥೆಯು ಈಗಾಗಲೇ ವಸತಿಯುತ ಮತ್ತು ವಾಣಿಜ್ಯ ಸಂಬಂಧಿತ 35 ಯೋಜನೆಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ. ಶ್ರೇಷ್ಠ ಗುಣಮಟ್ಟ, ಗ್ರಾಹಕರ ಸಂಪೂರ್ಣ ವಿಶ್ವಾಸದಿಂದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ರೂಪುಗೊಂಡಿದೆ.
ಐಎಸ್‌ಒ 9001: 2015 ಮಾನ್ಯತೆಯ ಜತೆಗೆ ಕ್ರಿಸಿಲ್‌ನ ಗರಿಷ್ಠ ರೇಟಿಂಗ್ ಸಹಿತ ಅನೇಕ ಪ್ರಥಮಗಳಿಗೆ ಪಾತ್ರವಾಗಿರುವ ನಗರದ ಏಕೈಕ ಬಿಲ್ಡರ್ ಸಂಸ್ಥೆಯಾಗಿದೆ. ನಿರ್ಮಾಣ ಕ್ಷೇತ್ರದ ಅನುಭವಿ ಹಾಗೂ ಕ್ರಿಯಾಶೀಲರ ತಂಡ ಲ್ಯಾಂಡ್‌ಟ್ರೇಡ್ಸ್‌ನಲ್ಲಿದೆ. ಪ್ರತಿಷ್ಠೆಯ ಎಂಫಾರ್ ಕನ್‌ಸ್ಟಕ್ಷನ್ಸ್ ಸಂಸ್ಥೆಯು ನಿರ್ಮಾಣದ ಉಸ್ತುವಾರಿ ವಹಿಸಿದೆ. ಪೂರಕ ಮಾಹಿತಿಗೆ: www.landtrades.in