Advertisement

ಘನತ್ಯಾಜ್ಯ ನಿರ್ವಹಣೆ: ಉಳ್ಳಾಲ ನಗರಸಭೆಗೆ ಪ್ರಶಸ್ತಿ

11:12 PM Oct 11, 2021 | Team Udayavani |

ಬೆಂಗಳೂರು: ಉತ್ತಮ ಪದ್ಧತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಯಲ್ಲಿ ರಾಜ್ಯದ ನಗರಸಭೆಗಳ ಪೈಕಿ ಉಳ್ಳಾಲ ನಗರಸಭೆ 2019-20ನೇ ಸಾಲಿನ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

Advertisement

ಬೆಂಗಳೂರಿನ ವಿಕಾಸ ಸೌಧದಲ್ಲಿ ಸೋಮವಾರ ಜರಗಿದ ಕಾರ್ಯಕ್ರಮ ದಲ್ಲಿ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಕೆ., ದ.ಕ. ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ಎನ್‌. ನಾಯಕ್‌ ಹಾಗೂ ನಗರ ಸಭೆಯ ಪೌರಾಯುಕ್ತ ರಾಯಪ್ಪ ಅವರು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮತ್ತು ಹಾಗೂ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 50,000 ರೂ. ಒಳಗೊಂಜಡಿದೆ.

ನಗರಸಭೆಯಲ್ಲಿ ಪೌರಾಯುಕ್ತ ರಾಯಪ್ಪ ಅವರ ಮಾರ್ಗದರ್ಶನದಲ್ಲಿ ಮೂರು ವರ್ಷಗಳಿಂದ ಘನತ್ಯಾಜ್ಯ ನಿರ್ವಹಣೆ ಸಹಿತ ಹಸಿಕಸದಲ್ಲಿ ಗೊಬ್ಬರ ತಯಾರಿಯನ್ನು ಮಾಡು ವುದರಲ್ಲಿ ಸಾರ್ವಜನಿಕರನ್ನೂ ತೊಡಗಿಸಿಕೊಳ್ಳುವ ಕಾರ್ಯವನ್ನು ನಡೆಸಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next