Advertisement

ಕೋವಿಡ್ ನಿಂದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಮಾಜಿ ಅಟಾರ್ನಿ ಜನರಲ್ ಸೊರಾಬ್ಜಿ ನಿಧನ  

12:56 PM Apr 30, 2021 | Team Udayavani |

ನವದೆಹಲಿ:ಭಾರತದ ಖ್ಯಾತ ಕಾನೂನು ತಜ್ಞ, ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಬ್ಜಿ(91ವರ್ಷ) ಕೋವಿಡ್ ಸೋಂಕಿನಿಂದ ಶುಕ್ರವಾರ(ಏ.30) ಬೆಳಗ್ಗೆ ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ:ಭದ್ರಾವತಿ ನಗರಸಭೆಯೂ ‘ಕೈ’ ತೆಕ್ಕೆಗೆ: ನಿರಾಸೆ ಅನುಭವಿಸಿದ ಕಮಲ, ದಳ ಪಕ್ಷಗಳು

ಹಿರಿಯ ವಕೀಲ, ಪದ್ಮ ವಿಭೂಷಣ ಪ್ರಶಸ್ತಿ ವಿಜೇತ ಸೋಲಿ ಸೊರಾಬ್ಜಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿರುವುದಾಗಿ ವರದಿ ಹೇಳಿದೆ.

ಸೋಲಿ ಜಹಾಂಗೀರ್ ಸೊರಾಬ್ಜಿ ಅವರು 1930ರಲ್ಲಿ ಮುಂಬೈನಲ್ಲಿ ಜನಿಸಿದ್ದರು. 1953ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. 1971ರಲ್ಲಿ ಸುಪ್ರೀಂಕೋರ್ಟ್ ನ ಹಿರಿಯ ಕೌನ್ಸಿಲ್ ಆಗಿ ಪದೋನ್ನತಿ ಪಡೆದಿದ್ದರು.

1989-90ರ ಅವಧಿಗೆ ಮೊದಲ ಬಾರಿ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದರು. ನಂತರ 1998-2000 ಅವಧಿಗೆ ಅವರು ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next