Advertisement

Indian Army; ಕಾಶ್ಮೀರದ ಕುಲ್ಗಾಮ್‌ ನಲ್ಲಿ ಸೈನಿಕ ನಾಪತ್ತೆ: ಕಾರಿನಲ್ಲಿ ರಕ್ತ ಪತ್ತೆ

09:38 AM Jul 30, 2023 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರಜೆಯ ಮೇಲೆ ಮನೆಗೆ ಬಂದಿದ್ದ 25 ವರ್ಷದ ಯೋಧನನ್ನು ಆತನ ವಾಹನದಿಂದ ಅಪಹರಿಸಲಾಗಿದೆ ಎಂದು ಆತನ ಕುಟುಂಬ ಹೇಳಿಕೊಂಡಿದೆ.

Advertisement

ಜಾವೇದ್ ಅಹ್ಮದ್ ವಾನಿ ಎಂಬ ಭಾರತೀಯ ಸೇನಾ ಸಿಬ್ಬಂದಿಯನ್ನು ಲೇಹ್ (ಲಡಾಖ್) ನಲ್ಲಿ ನಿಯೋಜಿಸಲಾಗಿತ್ತು. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಅಪಹರಣಕ್ಕೊಳಗಾದ ಯೋಧನ ಪತ್ತೆಗೆ ಭಾರತೀಯ ಸೇನೆ ಮತ್ತು ಪೊಲೀಸರು ಬೃಹತ್ ಶೋಧ ಮತ್ತು ಕಾರ್ಡನ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಜಾವೇದ್ ತನ್ನ ಕಾರನ್ನು ಚೋವಲ್ಗಾಮ್‌ ಗೆ ದಿನಸಿ ವಸ್ತುಗಳನ್ನು ಖರೀದಿಸಲು ಹೋಗಿದ್ದ.

ಇದನ್ನೂ ಓದಿ:ಕೈಕೊಟ್ಟ ಪ್ರಯೋಗ; ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು

ಅವರು ಮನೆಗೆ ಬಾರದಿದ್ದಾಗ, ಅವರ ಕುಟುಂಬ ಸದಸ್ಯರು ಹತ್ತಿರದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರನ್ನು ಹುಡುಕಲು ಪ್ರಾರಂಭಿಸಿದರು. ಶೋಧ ಕಾರ್ಯದ ವೇಳೆ ಪರಂಹಾಲ್ ಗ್ರಾಮದಲ್ಲಿ ಆತನ ಕಾರಿನಲ್ಲಿ ಚಪ್ಪಲಿ ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ. ವಾಹನವನ್ನು ಅನ್‌ಲಾಕ್ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next