Advertisement
ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ಮಾಡುವ ಶಬೀನಾ ಬಾನು ಹೆತ್ತ ಮಗುವನ್ನೇ ಮಾರಾಟ ಮಾಡಿದ ಆರೋಪಿ. ಡಿ.22ರಂದು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಶಬೀನಾ ಬಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೊದಲೇ ಮಗು ಮಾರಾಟದ ಬಗ್ಗೆ ಆಕೆ ಕೆಲಸ ಮಾಡುತ್ತಿದ್ದ ಮಂಡಕ್ಕಿ ಭಟ್ಟಿ ಮಾಲೀಕನೊಂದಿಗೆ ಮಾತುಕತೆ ನಡೆದಿದೆ. ಮಗು ಹುಟ್ಟಿದ ಮೂರು ದಿನಗಳ ನಂತರ ಮಂಡಕ್ಕಿ ಭಟ್ಟಿ ಮಾಲೀಕ ಮುಕ್ತಿಯಾರ್‌ಗೆ 20 ಸಾವಿರ ರೂ. ಗೆ ಮಾರಾಟ ಮಾಡಿದ್ದಾಳೆ. ಆಕೆ ಕೆಲಸ ಮಾಡುವ ಜಾಗದಲ್ಲಿ ಕೆಲವರು “ಮಗುವನ್ನು 2.50 ಲಕ್ಷ ರೂ. ಮಾರಾಟ ಮಾಡಬಹುದು.
ತೆಗೆದುಕೊಳ್ಳಿ’ ಎಂದು ಮುಕ್ತಿಯಾರ್ ಬಳಿ ಹೋಗಿದ್ದಾಳೆ. ಸಿಕ್ಕಿಬಿದ್ದ ಶಬೀನಾ:ಈ ಮಧ್ಯೆ ಮುಕ್ತಿಯಾರ್ ಆ ಮಗುವನ್ನು ತನ್ನ ಸಹೋದರ ಧಾರವಾಡದಲ್ಲಿರುವ ಮುಜೀಬುಲ್ಲಾ- ಅμàಜಾ ಬಾನು ದಂಪತಿಗೆ ನೀಡಿದ್ದಾರೆ. ಮಕ್ಕಳಿಲ್ಲದಿದ್ದರಿಂದ ಅವರು ಮಗುವನ್ನು ಕೊಂಡೊಯ್ದಿದ್ದರು. ಮಗು ಕೇಳಲು ಬಂದ ಶಬೀನಾಗೆ ಮುಕ್ತಿಯಾರ್ ಮಗು ಧಾರವಾಡದಲ್ಲಿರುವ ವಿಷಯ ತಿಳಿಸಿ ಕಳುಹಿಸಿದ್ದಾರೆ. ಬೇಸರಗೊಂಡ ಶಬೀನಾ ಬಾನು ಮಕ್ಕಳ ಸಹಾಯವಾಣಿಗೆ ದೂರಿತ್ತಿದ್ದಾಳೆ.
Related Articles
Advertisement
ನ್ಯಾಯಾಲಯದ ಮುಂದೆ: ಪ್ರಕರಣದಲ್ಲಿ ನಾನು ಮಕ್ಕಳನ್ನು ನನಗೆ ಪರಿಚಿತರಿದ್ದವರ ಮನೆಯಲ್ಲಿ ಬಿಟ್ಟಿದ್ದೆ. ಮಾರಾಟ ಮಾಡಿಲ್ಲ ಎಂದು ಶಬೀನಾ ಬಾನು ಹೇಳಿದ್ದಾರೆ. ತಂದೆ ಸಿಕಂದರ್ ಸಹ ಆರೋಪಿಯಾಗಿರುವುದರಿಂದ ಮಗುವನ್ನು ತಮ್ಮ ಸುಪರ್ದಿಗೆ ನೀಡಬೇಕೋ ಬೇಡವೋ ಎಂಬುದನ್ನು ನ್ಯಾಯಾಲಯ ನಿರ್ದೇಶಿಸಲಿದೆ ಎಂದು “ಉದಯವಾಣಿ’ಗೆ ವಿಜಯ್‌ಕುಮಾರ್ ತಿಳಿಸಿದ್ದಾರೆ. ಮಗು ಮಾರಾಟ ಕೃತ್ಯದಲ್ಲಿ ಕೆಲ ಸಂಘಟನೆಗಳ ಮುಖಂಡರು ಸಹ ಶಾಮೀಲಾಗಿದ್ದಾರೆಂಬ ಆರೋಪ ಕೇಳಿಬಂದಿವೆ. ಈ ಕುರಿತು ತನಿಖೆ ನಡೆಸಲು ಪೊಲೀಸರಿಗೆ ದೂರು ನೀಡಲಾಗಿದೆ. ಮಗು, ಅದರ ತಂದೆ- ತಾಯಿ, ಖರೀದಿಸಿದ ದಂಪತಿ, ಮಧ್ಯವರ್ತಿಯಾದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ಮೊದಲಲ್ಲ
ಶಬೀನಾ ಬಾನು- ಸಿಕಂದರ್ ದಂಪತಿ ತಮಗೆ ಹುಟ್ಟಿದ ಮೊದಲ ಮಗುವನ್ನೂ ಸಹ ಗೋವಾಕ್ಕೆ ಮಾರಾಟ ಮಾಡಿದ್ದು
ಬೆಳಕಿಗೆ ಬಂದಿದೆ. 9 ವರ್ಷದ ಬಾಲಕಿಯನ್ನು ಗೋವಾದ ಶ್ರೀಮಂತರಿಗೆ ಮಾರಾಟ ಮಾಡಿದ್ದರು. 20 ಸಾವಿರ ರೂ.ಗೆ
ಮಾರಾಟ ಮಾಡಿ, ಕೊನೆಗೆ ಟೀಕೆ ಹಿನ್ನೆಲೆಯಲ್ಲಿ ವಾಪಸ್ ಕರೆದುಕೊಂಡು ಬಂದಿದ್ದಳು ಎಂಬುದು ಬೆಳಕಿಗೆ ಬಂದಿದೆ. ಈ
ದಂಪತಿಗೆ ಒಟ್ಟು ನಾಲ್ಕು ಮಕ್ಕಳಿದ್ದಾರೆ. ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ಮಾಡಿ, ಬಂದ ಆದಾಯದಲ್ಲಿ ಜೀವನ ನಡೆಸುವುದು
ಕಷ್ಟವಾಗಿದೆ. ಹೀಗಾಗಿ ಕೃತ್ಯಕ್ಕೆ ಮುಂದಾಗಿದ್ದರು ಎನ್ನಲಾಗಿದೆ.