Advertisement

ಸೋಲಾರ್‌ ಘಟಕಗಳ ನಿರ್ವಹಣಾ ತರಬೇತಿ

06:17 PM Jul 11, 2022 | Team Udayavani |

ಧಾರವಾಡ: ರಾಯಾಪುರದಲ್ಲಿನ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಗ್ರಾಮೀಣ ಯೋಜನಾ ಕಚೇರಿ ಹಾಗೂ ಸೆಲ್ಕೋ ಸೋಲಾರ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಸೋಲಾರ್‌ ಘಟಕಗಳ ನಿರ್ವಹಣಾ ತರಬೇತಿ ಮತ್ತು 100 ಘಟಕಗಳ ವಿತರಣಾ ಕಾರ್ಯಕ್ರಮ ಜರುಗಿತು.

Advertisement

ಗ್ರಾಮೀಣ ಯೋಜನಾ ಕಚೇರಿಯ ಯೋಜನಾಧಿಕಾರಿ ಮಯೂರ್‌ ತೋರಸ್ಕರ್‌ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ, ವಾತ್ಸಲ್ಯ ಕಿಟ್‌, ನಮ್ಮ ಊರು ನಮ್ಮ ಕೆರೆ, ವಿಮಾ ಗ್ರಾಮ, ಹೊಸದಾಗಿ ನಿರ್ಮಾಣಗೊಳ್ಳುವ ಮತ್ತು ಪುನಶ್ಚೇತನಗೊಳ್ಳುವ ದೇವಸ್ಥಾನಗಳಿಗೆ ಅನುದಾನ ಹಾಗೂ ಇನ್ನೂ ಹಲವಾರು ಸೌಲಭ್ಯಗಳಿವೆ. ಹಸಿರು ಇಂಧನಗಳಾದ ಕುಕ್ಸ್ಟೋ, ಗೋಬರ್‌ ಗ್ಯಾಸ್‌ ಮತ್ತು ಸೋಲಾರ್‌ ಆಧಾರಿತ ಲೈಟ್‌ ಮತ್ತು ವಾಟರ್‌ ಹೀಟರ್‌, ಸೋಲಾರ್‌ ಆಧಾರಿತ ದಿನಬಳಕೆಯ ಯಂತ್ರೋಪಕರಣ ಬಗ್ಗೆ ಮಾಹಿತಿ ಇದ್ದು, ಸಾರ್ವಜನಿಕರು ಇವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಸೆಲ್ಕೋ ಸೋಲಾರ್‌ ಸಂಸ್ಥೆಯ ಸೀನಿಯರ್‌ ಮ್ಯಾನೇಜರ್‌ ಗುರುಮೂರ್ತಿ ಹೆಗಡೆ ಅವರು ಸೋಲಾರ್‌ ಘಟಕಗಳ ನಿರ್ವಹಣೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಸದಸ್ಯರಿಗೆ ತರಬೇತಿ ಸಂಸ್ಥೆಯಲ್ಲಿನ ಸೋಲಾರ್‌ ಘಟಕಗಳನ್ನು ಪ್ರಾಯೋಗಿಕವಾಗಿ ತೋರಿಸಿ ಮಾಹಿತಿ ನೀಡಿ, ಆಯ್ದ 100 ಜನರಿಗೆ ಸೋಲಾರ್‌ ಘಟಕ ವಿತರಣೆ ಮಾಡಲಾಯಿತು. ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘ ಸದಸ್ಯರು, ಸೆಲ್ಕೋ ಸೋಲಾರ್‌ ಸಂಸ್ಥೆಯ ಸೇಲ್ಸ್‌ ಎಕ್ಸಿಕ್ಯೂಟಿವ್‌ಗಳಾದ ನಾಗರಾಜ್‌ ಮತ್ತು ಲೋಕೇಶ್‌ ಇದ್ದರು. ಕೃಷಿ ಮೇಲ್ವಿಚಾರಕ ರವಿ ಹೊಟ್ಟಿನ ಸ್ವಾಗತಿಸಿದರು. ಸಾಧನಕೇರಿ ವಲಯದ ಸಂಗಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next