ದೇವನಹಳ್ಳಿ: ವಿದ್ಯುತ್ ಉಳಿತಾಯ ಮಾಡಲು ಸೋಲಾರ್ ಬಳಸುವಂತೆ ಆಗ ಬೇಕು. ಕೃಷಿ ಮತ್ತು ಗ್ರಾಮೀಣ ಜನರಿಗೆಉಪಯೋಗವಾಗುವ ಹಲವು ಯೋಜನೆಮಾಡಿಕೊಂಡು ಬರಲಾಗಿದೆ. ರೈತರು ತಮ್ಮ ಬೋರ್‌ವೆಲ್‌ಗಳಿಗೆ ಸೌರಶಕ್ತಿ ಪಂಪ್‌ಸೆಟ್ ಅಳವಡಿಸಿಕೊಂಡರೆ ಅನುಕೂಲವಾಗು ತ್ತದೆ ಎಂದು ಬೆಂಗಳೂರು ಕೃಷಿ ವಿವಿಸಹ ವಿಸ್ತರ ಣಾ ನಿರ್ದೇಶಕ ಡಾ.ಕೆ. ನಾರಾಯಣ್‌ಗೌಡ ತಿಳಿಸಿದರು.
ಕಸಬಾ ಹೋಬಳಿಯ ಕನ್ನಮಂಗಲಪಾಳ್ಯ ಗ್ರಾಮದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಹಾಗೂ ಬೆಂಗಳೂರು ಕೃಷಿ ವಿವಿ ಹಳೆಯ ವಿದ್ಯಾರ್ಥಿ ಸಂಘದಿಂದ ನಡೆದ ಸೌರಶಕ್ತಿ ಜಾಗೃತಿ ಶಿಬಿರ ದಲ್ಲಿ ಮಾತನಾಡಿದರು.
ಅರಿವು ಮೂಡಿಸುವ ಕಾರ್ಯವಾಗಲಿ: ನವೀಕರಿಸಬಹುದಾದ ವಿದ್ಯುತ್‌ಗಳಲ್ಲಿ ಸೋಲಾರ್ ಒಂದಾಗಿದೆ. ಸೋಲಾರ್ ಅಳವಡಿಕೆಯ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ನಾವು ಇರುವ ಜಾಗದಲ್ಲಿಯೇ ಸೋಲಾರ್ ಅಳವಡಿಸಿಕೊಂಡರೆ ಬಿಸಿಲಿನ ಶಾಖದಿಂದಲೇ ಸೋಲಾರ್ ದೀಪ ಬೆಳಗುತ್ತದೆ. ಬಾಗಲೂರು, ಯಡಿಯೂರು, ಚಾಲಗಟ್ಟಿ, ಮಾರಸಂದ್ರ ಹಾಗೂ ಬೂದಿಗೆರೆ ಗ್ರಾಮಗಳ ಆಯ್ದ ಬಡಕುಟುಂಬಗಳಿಗೆ ಸೌರದೀಪ ವಿತರಿಸಲಾಗುತ್ತಿದೆ ಎಂದರು.
ಹಾಪ್‌ಕಾಮ್ಸ್ ಉಪಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಸೌರ ವಿದ್ಯುತ್ ಬಳಕೆ ಹೆಚ್ಚಿಸಿ ವಿದ್ಯುತ್ ಉಳಿತಾಯ ಮಾಡಲು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯುತ್ ದರ ಏರುತ್ತಲೇ ಇದೆ ಎಂದರು.
ಕನ್ನಮಂಗಲ ಗ್ರಾಪಂ ಕನ್ನಮಂಗಲಪಾಳ್ಯ ಸದಸ್ಯ ಪಿ.ನಾಗೇಶ್ ಮಾತನಾಡಿದರು. ಕನ್ನಮಂಗಲ ಗ್ರಾಪಂ ಸದಸ್ಯ ಮೊಹಿಸಿನ್ ತಾಜ್, ಕೆ.ಸೋಮಶೇಖರ್, ಹಳೇ ವಿದ್ಯಾರ್ಥಿ ಗಳ ಸಂಘದ ಸದಸ್ಯ ಗೋಪಾಲ್, ಡಾ.ಕೆ.ನಾರಾಯಣಗೌಡ, ಡಾ.ವಿ.ಚಂದ್ರ ಶೇಖರ್ ಮೂರ್ತಿ,ಪ್ರೊ.ಕೆ.ಎಂ. ಹರಿಣಿಕುಮಾರ್, ಡಾ.ಎಸ್.ಚಂದ್ರಶೇ ಖರ್, ಡಾ.ಬಿ.ನಾರಾಯಣಸ್ವಾಮಿ ಹಾಗೂ ಗ್ರಾಮಸ್ಥರು ಇದ್ದರು.